ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧೦ ಅಬಲಾ ಸಚ್ಚರಿತ್ರ ರತ್ನ ಮಾಲೆ. ಮುನಿಯ ಬಳಿಗೆ ಹೋಗಿ ಉಪನಿಷತ್ತುಗಳೇ ಮೊದಲಾದುವುಗಳನ್ನು ಕಲಿಯ ಬೇಕೆಂದು ನಿಶ್ಚಯಿಸಿಕೊಂಡಳು. ಆದರೆ ಆ ಕಾಲದಲ್ಲಿ ಸ್ತ್ರೀಯರು ಉತ್ತರದೇಶ ದಿಂದ ಬಹುಯೋಜನದೂರದಲ್ಲಿರುವ ಅಗಸ್ತಾಶ್ರಮಕ್ಕೆ ಹೋಗುವುದು ಎಂದರೆ ಸಾಮಾನ್ಯ ವಿಷಯವಲ್ಲ. ಆದರೂ ಈ ಬ್ರಹ್ಮಚಾರಿಣಿಗೆ ವಿಶೇಷ ಜ್ಞಾನಾರ್ಜನಾ ಕಾಂಕ್ಷೆಯು ಇದುದರಿಂದ ಪ್ರಯಾಣ ಕಷ್ಟವನ್ನು ಗಣನೆಗೆ ತಾರದೆ ಒಬ್ಬಳೇ ಹೊರಟು ಪಟ್ಟಣಗಳನ್ನೂ, ಹಳ್ಳಿಗಳನ್ನೂ, ನದಿಗಳನ್ನೂ, ಪರ್ವತಗಳನ್ನೂ, ಅರಣ್ಯಗಳನ್ನೂ ಅತಿಕ್ರಮಿಸಿ ಬಹುದಿನಗಳಿಗೆ ಭಾರತವರ್ಷದ ದಕ್ಷಿಣಾಗ್ರ ದಲ್ಲಿರುವ ಅಗಸ್ತಾಶ್ರಮವನ್ನು ಸೇರಿದಳು. ಅಗಸ್ತನು ಈಕೆಯ ದೃಢಸಂಕಲ್ಪವನ್ನು ನೋಡಿ ಆಶ್ಚರ್ಯಾನ್ವಿತಚಿತ್ತನಾಗಿ, ಈಕೆಯನ್ನು ಪುತ್ರಿಕಾವಾತ್ಸಲ್ಯದೊಡನೆ ಪ್ರೇಮಿಸುತ್ತಿದ್ದನು. ಆತ್ರೇಯಿಯು ಅಲ್ಲಿಯೇ ಇದ್ದು ಶ್ರದ್ಧೆಯಿಂದ ವಿದ್ಯಾಭ್ಯಾಸವನ್ನು ಮಾಡಿ ಅಭೀಷ್ಟ ಸಿದ್ಧಿಯನ್ನು ಹೊಂದಿದಳು. ಸ೦ಪೂರ್ಣ,