ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಣೀಭವಾನಿ. ೨೧ ಈಕೆಗೆ ದೈವಭಕ್ತಿ ವಿಶೇಷವಾಗಿತ್ತು. ಯಾವಪದಾರ್ಥವನ್ನಾದರೂ ಈಶ್ವರನಿಗೆ ಸಮರ್ಪಿಸದೆ ಈಕೆಯು ಅನುಭವಿಸುತ ಇರಲಿಲ್ಲ. ಒಂದು ದಿವಸ ಈಕೆಯ ಪತಿಯು ಇಪ್ಪತ್ತೈದು ಸಾವಿರ ರೂಪಾಯಿಗಳಿಗೆ ಎರಡು ಚಂದ್ರಹಾರಗಳನ್ನು ಕೊಂಡು, ಅವುಗಳಲ್ಲೊಂದನ್ನು ಕಾಳಿಕಾದೇವಿಗೆ ಸಮರ್ಪಿಸಿ, ಮತ್ತೊಂದನ್ನು ತನ್ನ ಪತ್ನಿಗೆ ಕೊಡಬೇಕೆಂದು ನಿಶ್ಚಯಿಸಿಕೊಂಡನು. ಅವುಗಳಲ್ಲಿ ರಮಣೀಯವಾ ದುದನ್ನು ಪತ್ನಿಗೂ ಸಾಮಾನ್ಯವಾದುದನ್ನು ದೇವಿಗೂ ಕೊಡಲೆಣಿಸಿ, ಅವೆರಡನ್ನೂ ರಾಣಿಗೆ ತೋರಿಸಿದನು. ರಾಣಿಯು ಉತ್ತಮವಾದುದನ್ನು ದೇವಿಗೆ ಸಮರ್ಪಿಸು ವೆನೆಂದು ನುಡಿಯಲು, ಆಕೆಯೊಡನೆ ರಾಜನು ತನ್ನ ಅಭಿಪ್ರಾಯವನ್ನು ತಿಳಿ ಸಿದನು, “ ನಿಮಗಿಷ್ಟವಾದುದನ್ನು ನೀವು ಕೊಡಬಹುದು. ನನಗಿಷ್ಟವಾದು ದನ್ನು ನಾನು ಕೊಡುವೆನು, ” ಎಂದು ಭವಾನಿಯು ತಿಳಿಸಿದಳು. ಅದರಂತೆಯೆ ಎರಡು ಹಾರಗಳೂ ದೇವಿಗೆ ಸಮರ್ಪಿಸಲ್ಪಟ್ಟು ವು. ಹೀಗೆ ಆಕೆಯ ನಿಷ್ಕಲ್ಮಷ ಭಕ್ತಿಯನ್ನು ತೋರಿಸುವ ದೃಷ್ಟಾಂತಗಳು ಹೇರಳವಾಗಿವೆ. ಆದರೆ ಅವನ್ನು ಗ್ರಂಥವಿಸ್ತರಭೀತಿಯಿಂದ ಬರೆಯಲಿಲ್ಲ.

  • ತನಗೆ ಪುತ್ರರಿಲ್ಲದಿದ್ದರೂ ತನ್ನ ಪುತ್ರಿಯಾದತಾರೆಗೆ ಮಗನು ಹುಟ್ಟಿದರೆ, ಅವ ನಿಗೆ ಪಟ್ಟಾಭಿಷೇಕವನ್ನು ಮಾಡಿ ತಾನು ಗಂಗಾತೀರದಲ್ಲಿ ವಾಸಮಾಡಿಕೊಂಡು ದಾನಧರ್ಮಗಳನ್ನು ಮಾಡುತ್ತ, ಈಶ್ವರಭಜನೆಯಲ್ಲಿ ಕಾಲವನ್ನು ಕಳೆಯಬೇ ಕೆಂದೆಣಿಸಿ, ಭವಾನಿಯು ತಾರೆಗೆ ಒಬ್ಬ ಒಳ್ಳೆಯ ವರನನ್ನು ತಂದು ವಿವಾಹಮಾಡಿ ದಳು. ಆದರೆ 'ತಾನೊಂದೆಣಿಸಿದರೆ ದೈವವೊಂದೆಣಿಸುವುದು' ಎಂಬ ಗಾದೆ ಯಂತೆ ಆಕೆಯ ಜಾಮಾತೃವು ಅಲ್ಪ ಕಾಲದಲ್ಲಿಯೇ ಮೃತನಾದನು. ಅಳಿಯನ ಮರಣದಿಂದ ರಾಣಿಗೆ ಅತ್ಯಂತ ದುಃಖವೂ ಅಪರಮಿತವಾದ ನಿರುತ್ಸಾಹವೂ ಆಯಿತು, ಕೆಲವು ದಿವಸದವರೆಗೂ ನಿತಂತುವಾದ ಪುತ್ರಿಯನ್ನು ನೋಡಿದಾಗ ಆಕೆಗೆ ವಿಶೇಷ ದುಃಖವುಂಟಾಗಿ ಚಿತ್ತಭ್ರಮೆಯುಂಟಾಗುತಲಿತ್ತಂತೆ. ನವಾಬ ನಾದ ಸುರಾಜದೌಲನು ರಾಣಿಯ ಪುತ್ರಿಯನ್ನು ಸೆರೆ ಹಿಡಿಯಲೆಣಿಸಿ, ಸೈನ್ಯ ವನ್ನು ಕಳುಹಿದಂತೆಯೂ, ಆ ಸೈನ್ಯವನ್ನು ರಾಣಿಯು ಸೋಲಿಸಿದಂತೆಯೂ ಹಿಂದೆ ಬರೆದಿದೆ. ಆ ಯುದ್ದವು ಈ ತಾರೆಗಾಗಿ ನಡೆಯಿತೆಂದು ಪಾಠಕರು ಗ್ರಹಿ ಸಿರಬಹುದು. ಈ ಯುದ್ಧವು ನಡೆದಂದಿನಿಂದ ರಾಣಿಯು ತಾರೆಯನ್ನು ತನ್ನ ಸಮಿಾಪದಲ್ಲಿ ಇಟ್ಟು ಕೊಂಡು ಬಹುಜಾಗರೂಕತೆಯಿಂದ ಕಾಪಾಡುತಲಿದ್ದಳು. ಜಾಮಾತೃವಿನ ಮರಣದಿಂದ ಭವಾನಿಯ ಆಶೆಗಳೆಲ್ಲವೂ ನಿರಾಸೆಗಳಾದುವು. ರಾಜ್ಯಕ್ಕೆ ಸರಿಯಾದ ಹಕ್ಕುದಾರರಾರೂ ಇಲ್ಲದುದರಿಂದ ತನ್ನ ಸಂಪತ್ತೆಲ್ಲವನ್ನೂ ಲೋಕಹಿತಾರ್ಥವಾಗಿ ವ್ಯಯಮಾಡಲು ನಿಶ್ಚಯಿಸಿದಳು. ಬಳಿಕ ಆಕೆಯು ಮಾಡಿದ ದಾನಧರ್ಮಗಳು ದೊಡ್ಡ ದೊಡ್ಡ ಚಕ್ರವರ್ತಿಗಳ ದಾನಧರ್ಮಗಳಿಗೆ ಸರಿಬರುತಿದ್ದು ವು.