ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಣೀಭವಾನಿ. ೨೩ ರಾಣೀಭವಾನಿಯು ಮನುಷ್ಯ ಮಾತ್ರರಲ್ಲಲ್ಲದೆ ಪಶುಪಕ್ಷಿ ಕ್ರಿಮಿಕೀಟಕಾದಿ ಸಮಸ್ತ ಪ್ರಾಣಿಗಳಲ್ಲಿಯೂ ದಯೆಯುಳ್ಳವಳಾಗಿದ್ದಳು, ಈಕೆಯು ತನ್ನ ರಾಜ್ಯ ದಲ್ಲಿ ಗೋಮಹಿಷಾದಿಗಳ ವಧೆಯಾಗಬಾರದೆಂದು ನಿಬಂಧನೆಯನ್ನು ಮಾಡಿದಳು. ಈ ನಿಬಂಧನೆಯನ್ನು ಉಲ್ಲಂಘಿಸಿದವರಿಗೆ ಘೋರಶಿಕ್ಷೆಯುಂಟಾಗುತಿತ್ತು. ಬೈಲಿ ನಲ್ಲಿ ಬಹು ಧಾನ್ಯವನ್ನು ಚಲ್ಲಿಸಿ, ಆ ಕಾಳುಗಳನ್ನು ತಿನ್ನುವುದಕ್ಕಾಗಿ ಬರುವಸುಂದರ ನಾದ ಪಕ್ಷಸಮೂಹವನ್ನು ದೂರದಿಂದ ನೋಡಿ, ಅದನ್ನು ಸೃಷ್ಟಿ ಮಾಡಿದ ಸರೈ ಶ್ವರನ ಅದ್ಭುತಶಕ್ತಿ ಪ್ರೇಮಾದಿಗಳಿಗೆ ಆನಂದಿಸುತಲಿದ್ದಳು, ಇರುವೆಗಳಿಗೆ ಸಕ್ಕರೆ ಯನ್ನು, ಮತ್ತ್ವಗಳಿಗೆ ರೊಟ್ಟಿಯ ಚೂರುಗಳನ್ನು, ಮಾರ್ಜಾಲಗಳಿಗೆ ಕ್ಷೀರಾನ್ನ ವನ್ನು ಇಡಿಸಿ ಮನಸ್ಸಿನಲ್ಲಿ ಬಹಳ ಸಂತೋಷಿಸುತಲಿದ್ದಳು. ಹೀಗೆ ಈಕೆಯ ಕಾರುಣ್ಯಾಮೃತ ಪ್ರವಾಹವು ಸಕಲ ಪ್ರಾಣಿಗಳಲ್ಲಿಯೂ ಸಮಾನವಾಗಿ ಪ್ರವ ಹಿಸುತಲಿತ್ತು. ರಾಣಿಭವಾನಿಯು ಕಾಶಿಯಾತ್ರೆಗೆ ಹೊರಟಾಗ ಈಕೆಯ ಹಿಂದೆ ೧೫೦೦ ಹಡಗುಗಳು ಹೊರಟವಂತೆ. ಭಕ್ಷಪದಾರ್ಥಗಳನ್ನು ೧೦೦೦ ಹಡಗುಗಳ ಮೇಲೆ ತುಂಬಿದ್ದರಂತೆ ! ಹೀಗೆ ಅಪರಿಮಿತವಾದ ಅನ್ನದಾನವನ್ನು ಮಾಡಿದುದರಿಂದ ಪ್ರಜೆಗಳು ಈಕೆಯನ್ನು ಅನ್ನಪೂರ್ಣೆಯ ಅವತಾರವೆಂದು ಎಣಿಸುತಲಿದ್ದ ರು. ಈಕೆಯು ತನ್ನ ರಾಜ್ಯದಲ್ಲಿ ಅನಾಥರಾದ ರೋಗಿಗಳ ಔಷಧಕ್ಕೆ ಅನೇಕ ಔಷ ಧಾಲಯಗಳನ್ನು ಕಟ್ಟಿಸಿದಳು, ಈಗಿನಂತೆ ಆಗ ಡಾಕ್ಟರು ಮತ್ತು ಆಸ್ಪತ್ರೆಗಳು ಇಲ್ಲದಿದ್ದರೂ, ಹಿಂದೂ ವೈದ್ಯಶಾಸ್ತ್ರದಲ್ಲಿ ಪ್ರವೀಣರಾದ ಭಿಷಕ್ವರ್ಯರನೇಕರು ರಾಣಿಯಿಂದ ಉಚಿತವಾದ ಮಾಸಾಶನಗಳನ್ನು ಪಡೆಯುತ್ತ ವೈದ್ಯಶಾಲೆಗಳಲ್ಲಿ ಬಡವರಿಗೆ ಔಷಧಗಳನ್ನು ಕೊಡುತಲಿದ್ದರು, ವೈದ್ಯಶಾಲೆಗೆ ಬಂದ ರೋಗಿ, ಆರೋಗ್ಯವನ್ನು ಹೊಂದುವ ವರೆಗೆ ಪಥ್ಯಪಾನಗಳನ್ನೂ, ಔಷಧೋಪಚಾರಗಳನ್ನೂ ನಡೆಸುವುದಕ್ಕೆ ರಾಣಿಯು ಅನೇಕ ಸೇವಕರನ್ನು ನಿಯಮಿಸಿದ್ದಳು. ಆಹಾ! ಈಕೆಯ ಭೂತಕಾರುಣ್ಯವನ್ನು ಎಷ್ಟೆಂದು ಕೊಂಡಾಡಲಿ! ಇಂತಹ ವಿಶ್ವ ಕುಟುಂಬಿನಿಯನ್ನು ಎಷ್ಟು ಕೊಂಡಾಡಿದರೂ ಸ್ವಲ್ಪವೇ ! ರಾಣಿಯು ಹಿಂದುಗಳಿಗೆ ಪೂಜನೀಯೆಯಾಗಿದ್ದ೦ತೆ ತುರುಷ್ಟರಿಗೂ ಪೂಜ ನೀಯೆಯಾಗಿದ್ದಳು. ಒಂದಾನೊಂದು ಸಮಯದಲ್ಲಿ ಆಕೆ ಗಯೆಗೆ ಹೋದಾಗ ಅಲ್ಲಿಯ ನವಾಬನು ತನಗೆ ಐದು ಲಕ್ಷ ರೂಪಾಯಿಗಳನ್ನು ಕೊಟ್ಟಲ್ಲದೆ ಅಲ್ಲಿ ಸಿಂಡ ದಾನವನ್ನು ಮಾಡಿಸಲಾರೆನೆಂದನು. ಕೂಡಲೆ ಭವಾನಿಯು ಈ ವಿಷಯವನ್ನು ಮುರ್ಷಿದಾಬಾದು ನವಾಬನಿಗೆ ತಿಳಿಸಲಾಗಿ, ಆತನು ಗಯಾಧೀಶ್ವರನನ್ನು ಪದ ಚ್ಯುತನನ್ನಾಗಿ ಮಾಡುವುದಕ್ಕೆ ಸೈನ್ಯವನ್ನು ಕಳುಹಿಸಿದನು. ಈ ಸಮಾಚಾರ