ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಅಬಲಾ ಸಚ್ಚರಿತ್ರ ರತ್ನ ಮಾಲೆ. ವನ್ನು ಕೇಳಿ ಆ ನವಾಬನು ಭಯಭ್ರಾಂತನಾಗಿ ರಾಣಿಗೆ ಶರಣಾಗತನಾದನು. ಶರಣಾಗತನನ್ನು ರಕ್ಷಿಸಬೇಕೆಂದು ರಾಣಿಯು ಪುನಃ ಮುರ್ಷಿದಾಬಾದು ನವಾಬ ನಿಗೆ ಸಮಾಧಾನವನ್ನು ಹೇಳಿ ಆತನನ್ನು ರಕ್ಷಿಸಿದಳು, ಸ್ವಲ್ಪ ದಿವಸದ ಮೇಲೆ ಈ ಗಯಾಧೀಶ್ವರನು ಮುರ್ಷಿದಾಬಾದು ನವಾಬನಿಗೆ ಕಪ್ಪವನ್ನು ಕೊಡದೆ ಹೋಗಲು ನವಾಬನು ಅವನನ್ನು ಕಾರಾಗೃಹದಲ್ಲಿ ಇಡಿಸಿದನು. ಆಗಲೂ ರಾಣಿಯು ನವಾಬನಿಗೆ ಹೇಳಿ ಆತನಿಗೆ ಬಿಡುಗಡೆಯನ್ನುಂಟುಮಾಡಿದಳು. ಕಾರಾಗೃಹ ವಿಮುಕ್ತನಾದ ನವಾಬನು ರಾಣಿಯ ಬಳಿಗೆ ಹೋಗಿ, ಕೃತಜ್ಞತೆಯಿಂದ ಶಿರೋವೇ। ಹೃನವನ್ನು ತೆಗೆದಿರಿಸಿ ಆಕೆಯ ಪಾದಗಳಿಗೆ ಬಿದ್ದು, “ ಅಪಕಾರವನ್ನು ಮಾಡಿದ ನನಗೆ ಪ್ರಾಣಾದಾನವನ್ನು ಮಾಡಿದಿರಿ. ನಿಮ್ಮಂತಹ ಪರೋಪಕಾರಿಣಿಗಳನ್ನು ನಾನೆಲ್ಲಿ ಯೂ ನೋಡಿಲ್ಲ,” ಎಂದು ಬಿನ್ನವಿಸಿ, ಆಕೆಯಿಂದನುಜ್ಞೆಯನ್ನು ಪಡೆದು ತನ್ನ ರಾಜ್ಯಕ್ಕೆ ಹೋದನು. ಅನಂತರ ಯಾವಾಗಲೂ ಆತನು ರಾಣಿಯ ಆಜ್ಞೆ ಯಂತೆ ನಡೆಯುತಲಿದ್ದನು. ರಾಣಿಯು ತನ್ನ ರಾಜಧಾನಿಯಾದ ನಾಟೂರಿನಲ್ಲಿ ಗಂಗೆಯಿಲ್ಲ ದುದರಿಂದ ಮುರ್ಷಿದಾಬಾದಿನ ಸಮಿಾಪದಲ್ಲಿ ಗಂಗಾತೀರದಲ್ಲಿರುವ ಬಡಾನಗರವೆಂಬ ಗ್ರಾಮ ವನ್ನು ರಾಜಧಾನಿಯಾಗಿ ಮಾಡಿಕೊಂಡಳು. ರಾಜಧಾನಿಯಾಗುವುದಕ್ಕೆ ಪೂರ್ವ ದಲ್ಲಿ ಬಡಾನಗರವು ಚಿಕ್ಕ ಗ್ರಾಮವಾಗಿತ್ತು. ರಾಣಿಯು ಆ ಗ್ರಾಮಕ್ಕೆ ಬಂದ ಮೇಲೆ ಬಡಾನಗರ (ಅಂದರೆ ದೊಡ್ಡ ನಗರ) ವೆಂಬ ಹೆಸರು ಸಾರ್ಥಕವಾಯಿತು. ಈಕೆಯ ದಿನಚರೈಯು ರಮ್ಯವಾಗಿಯೂ, ಅನುಕರಣೀಯವಾಗಿಯೂ ಇದೆ. ಪ್ರಾತಃಕಾಲದಲ್ಲಿ ನಾಲ್ಕು ಘಂಟೆಗೆ ಎದ್ದು ಈಶ್ವರನನ್ನು ಸ್ತುತಿಸುತ್ತ ದೀವಟಿಗೆಗಳನ್ನು ತೆಗೆಸಿಕೊಂಡು ಹೋಗಿ ಗಂಗಾನದಿಯಲ್ಲಿ ಸ್ನಾನಮಾಡಿ, ತಾನು ಕೊಟ್ಟ ಪುಷ್ಪಗಳಿಂದ ಗೃಹದೇವತೆಯನ್ನು ಪೂಜಿಸುವಳು. ಸೂರ್ಯೋದಯ ವಾದೊಡನೆ ಗಂಗಾತೀರಕ್ಕೆ ಹೋಗಿ ದೇವತೆಗಳನ್ನು ಪೂಜಿಸಿ ಪ್ರಯಾಣಿಕರಿಗೆ ದಾನಧರ್ಮಗಳನ್ನು ಮಾಡಿ, ಪುರಾಣಶ್ರವಣವನ್ನು ಮಾಡುವಳು. ಮಧ್ಯಾಹ್ನ ಭೋಜನಾನಂತರ ರಾಜವೇಷವನ್ನು ಧರಿಸಿ ರಾಜಸಭೆಗೆ ಹೋಗಿ ಅಲ್ಲಿನ ಅಧಿಕಾರಿ ಗಳನ್ನು ಅವರು ಮಾಡಬೇಕಾದ ಕೆಲಸಗಳಲ್ಲಿ ನಿಯಮಿಸಿ, ಅವರು ಮಾಡಿದ ಕೆಲಸ ಗಳನ್ನು ನೋಡಿ, ತಾನು ಸ್ವಂತವಾಗಿ ಮಾಡಬೇಕಾದ ಕಾರ್ಯಗಳನ್ನು ನಿರ್ವಹಿಸಿ, ಪುನಃ ಪುರಾಣಶ್ರವಣಕ್ಕೆ ಹೋಗುತಲಿದ್ದಳು. ಸಾಯಂಕಾಲದಲ್ಲಿ ದೇವತಾದರ್ಶನ ಮಾಡಿದ ಮೇಲೆ ಮುಖ್ಯ ಮಂತ್ರಿ ಸಭೆಯಲ್ಲಿ, ಪ್ರಜೆಗಳ ಬಿನ್ನಹಗಳನ್ನೂ, ವ್ಯಾಜ್ಯ ಗಳನ್ನೂ ವಿಚಾರಿಸಿ, ಅವುಗಳಿಗೆ ತೀರ್ಪುಗಳನ್ನು ಹೇಳಿ ಮನೆಗೆ ಬಂದು ದೇವರನ್ನು ಪ್ರಾರ್ಥಿಸಿ ನಿದ್ರಿಸುತಲಿದ್ದಳು. ಭವಾನಿಯು ಒಂದೇ ಹೊತ್ತು ಭೋಜನವನ್ನು ಮಾಡುತಲಿದ್ದಳು.