ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಹಲ್ಯಾಬಾಯಿ ಹೋಳಕ *. ೨೫ ಉತ್ತಮೋತ್ತಮ ಸುಗುಣಸಂಪತ್ತಿಗೆ ಖನಿಯಾದ ರಾಣೀಭವಾನಿಯು ತನ್ನ ಎಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿ ಮೃತೆಯಾದಳು, ಈಕೆಯ ಮರಣಕ್ಕೆ ಲಕ್ಷಾಂತರ ಪ್ರಜೆಗಳು ದುಃಖಿಸಿದರು. ಭವಾನಿಯು ಉನ್ನತ ಶರೀರವುಳ್ಳವಳಾಗಿ, ಬಹಳ ಸುಂದರವಾಗಿದ್ದಳು. ಮರಣಕಾಲದ ವರೆಗೂ ಈಕೆಯು ದೃಢಗಾತ್ರೆಯಾಗಿದ್ದಳು, ಈಕೆ ತಾನೇ ಅಡಿಗೆ ಯನ್ನು ಮಾಡಿಕೊಂಡು ಊಟಮಾಡುತಲಿದ್ದಳಂತೆ. ಈಕೆಯು ರಾಮಕೃಷ್ಣನೆಂಬೊಬ್ಬ ಬ್ರಾಹ್ಮಣಬಾಲಕನನ್ನು ಶೈಶವದಿಂದ ಕಾಪಾಡುತಲಿದ್ದಳು. ರಾಮಕೃಷ್ಣನು ಸಾಧುವೃತ್ತಿಯುಳ್ಳವನಾದಕಾರಣ ಕೊನೆಗೆ ಅವನಿಗೆ ರಾಜ್ಯಾಧಿಪತ್ಯವನ್ನು ವಹಿಸಿ ಭವಾನಿಯು ಸ್ವರ್ಗಸ್ಥೆಯಾದಳು. ಪ್ರಸ್ತುತ ದಲ್ಲಿ ಈ ರಾಜ್ಯವು ಚಿಕ್ಕ ಜಖಾನುದಾರಿಯಾಗಿದೆ." ಭರಿ ಅಹಲ್ಯಾಬಾಯಿ ಹೋಳಕರ್‌. “ ಉದಾರಚರಿತಾನಾಂತು ವಸುಧೈವಕುಟುಂಬಕಂ” ಈ ಅದ್ವಿತೀಯೆಯಾದ ಸಾದ್ವಿಮಣಿಯ ಚರಿತ್ರೆಯು ಮನೋರಂಜಕ ವಾದರೂ ಹೃದಯದ್ರಾವಕವಾಗಿಯೂ, ಅನುಕಂಸನೀಯವಾದರೂ, ಅನುಸರ ಣೀಯವಾಗಿಯೂ, ವೀರರಸವಿರಹಿತವಾಗಿದ್ದ ರೂ, ಶಾಂತಿರಸಸರಿಪು ತವಾಗಿಯೂ ಇರುವ ಮೂರಂಕಗಳ ನಾಟಕವೆಂದು ನುಡಿಯಬಹುದು! ಇದರ ಬಹು ಭಾಗವು ದುಃಖರೂಪವಾದ ಅಂಧಕಾರದಿಂದ ವ್ಯಾಪ್ತವಾಗಿದ್ದರೂ, ಅಹಲ್ಯಾಬಾಯಿಯವರ ಸದ್ಗುಣಗಳೆಂಬ ಚಂದ್ರಿಕೆಯ ದೆಸೆಯಿಂದ ಪ್ರಕಾಶಿತವಾಗಿರುವುದರಿಂದ ರಮ್ಯ ವಾಗಿಯೇ ಇರಬಹುದು, (೧) ಅಹಲ್ಯಾಬಾಯಿಯವರ ಜನ್ಮ ಮತ್ತು ಬಾಲ್ಯ, (೨) ಆಕೆಯ ಸಂಸಾರ ಸುಖ, (೩) ಆಕೆಯ ವೈಧವ್ಯ ಮತ್ತು ರಾಜ್ಯ ಪಾಲನ, ಎಂಬ ಈ ಮೂರಂಕಗಳ ವಿಷಯಗಳನ್ನು ಮುಂದೆ ಕ್ರಮವಾಗಿ ಉಲ್ಲೇಖಿಸಿರುವೆನು. (೧) ಜನ್ಮ ಮತ್ತು ಬಾಲ್ಯ, ಬೊಂಬಾಯಿ ಪ್ರಾಂತ್ಯದಲ್ಲಿರುವ ಅಹ ಮ್ಮದ್‌ನಗರ ತಾಲ್ಲೂಕಿನಲ್ಲಿ ನಾಥರಡೀ ಎಂಬೊಂದು ಚಿಕ್ಕ ಗ್ರಾಮವಿತ್ತು. ಈ ಗ್ರಾಮದಲ್ಲಿ ಪೂರ್ವದಲ್ಲಿ ಆನಂದಸಿಂಧೇ ಎಂಬೊಬ್ಬ ಮರಾಟಾ ಗೃಹಸ್ಥನು ವಾಸ