ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಬಲಾ ಸಚ್ಚರಿತ್ರ ರತ್ನ ಮಾಲೆ. ಮಾಡುತಲಿದ್ದನು, ಗ್ರಾಮದಲ್ಲಿ ದೊಡ್ಡ ಮನುಷ್ಯನೆಂದು ಹೆಸರು ಪಡೆದಿದ್ದ ಈತನು ಧನವಂತನಲ್ಲ ದುದರಿಂದ ಕೃಷಿಯಿಂದ ಜೀವಿಸುತಲಿದ್ದನು. ಈತನ ಪತ್ನಿಯೂ ಸ್ವಭಾವದಲ್ಲಿ ಈತನನ್ನೇ ಹೋಲುತಲಿದ್ದಳು. ಈ ಸತ್ವಗುಣಪ್ರಧಾನ ರಾದ ದಂಪತಿಗಳಿಗೆ ೧೭೩೩ ನೆಯ ಇಸವಿಯಲ್ಲಿ ಒಂದು ಕನ್ಯಾರತ್ನವು ಜನಿಸಿತು. ಈ ಕನೈಗೆ ಅವರು ಅಹಲ್ಯ' ಎಂದು ನಾಮಕರಣವನ್ನು ಮಾಡಿದರು. ಈಕೆಯೇ ನಮ್ಮ ಚರಿತ್ರನಾಯಿಕೆ. ಈಕೆಯಲ್ಲಿ ತೋರಿಬಂದ ಗುಣವಿಶೇಷಗಳಿಂದ, ಮಹ ರಾಷ್ಟ್ರ ಗ್ರಂಥಕರ್ತರನೇಕರು, ಈಕೆಯನ್ನು ದೇವಾಂಶಸಂಭೂತೆಯೆಂದು ಭಾವಿಸಿ, ದೇವೀ ಅಹಲ್ಯಾಬಾಯಿಯೆಂದು ಸಂಬೋಧಿಸಿರುವರು. ಜನರು ಈಕೆಯು ಜಗ ದಂಬೆಯ ಅವತಾರವೆಂದು ಒಂದು ಕಥೆಯನ್ನು ಹೇಳುತ್ತಾರೆ, “ ಬಹು ದಿವಸಗಳ ವರೆಗೂ ಆನಂದರಾವಿಗೆ ಸಂತಾನವು ಇಲ್ಲದೇ ಇದ್ದುದರಿಂದ, ಆತನ ಪತ್ನಿಯು ಚಿಂತಾಕ್ರಾಂತೆಯಾಗಿದ್ದಳು. ಒಂದು ದಿವಸ ಒಬ್ಬ ಬೈರಾಗಿಯು ಅವರ ಮನೆಗೆ ಬಂದು, ಆಕೆಯ ವ್ಯಸನಕಾರಣವನ್ನು ವಿಚಾರಿಸಿ, 'ನೀವು ಕೊಲ್ಲಾಪುರಕ್ಕೆ ಹೋಗಿ ಅಲ್ಲಿರುವ ಜಗದಂಬೆಯನ್ನು ಸೇವಿಸಿದರೆ ನಿಮಗೆ ಸಂತಾನಪ್ರಾಪ್ತಿಯಾಗುವುದು, ? ಎಂದು ಹೊರಟುಹೋದನು, ಆಂಧ್ರ ದೇಶದಲ್ಲಿ ಬೆಜವಾಡೆಯ ಕನಕದುರ್ಗೆಯೂ, ಮೈಸೂರು ದೇಶದಲ್ಲಿ ಶೃಂಗಗಿರಿಯ ಶಾರದಾಂಬೆಯೂ ಹೇಗೆ ಪ್ರಖ್ಯಾತಿಯನ್ನು ಹೊಂದಿದಾರೆಯೋ ಹಾಗೆಯೇ ಮಹರಾಷ್ಟ್ರದೇಶದಲ್ಲಿ ಕೊಲ್ಲಾಪುರದ ಜಗ ದಂಬೆಯು ಪ್ರಖ್ಯಾತೆಯಾಗಿ ದಾಳೆ, ಬೈರಾಗಿಯು ನುಡಿದಂತೆ ಆನಂದರಾಯನು ಭಾರ್ಯಾಸಮೇತನಾಗಿ ಕೊಲ್ಲಾಪುರಕ್ಕೆ ಹೋಗಿ, ಅಲ್ಲಿ ಒಂದು ವರ್ಷದ ವರೆಗೂ ದೇವಿಯನ್ನು ಸೇವಿಸುತಲಿದ್ದನು. ಒಂದು ವರ್ಷವು ಕಳೆದ ಅನಂತರ ಜಗ ದಂಬೆಯು ಆನಂದರಾಯನ ಸ್ವಪ್ನದಲ್ಲಿ ಕಾಣಿಸಿಕೊಂಡು, 'ನೀನು ದೃಢಭಕ್ತಿ ಯೊಡನೆ ಮಾಡಿದ ಪೂಜೆಗೆ ಸಂತುಷ್ಟೆಯಾದೆನು. ಇನ್ನು ನೀನು ಸ್ವಗೃಹಕ್ಕೆ ತೆರಳ ಬಹುದು. ನಿನ್ನ ಇಷ್ಟವನ್ನು ನೆರವೇರಿಸುವುದಕ್ಕಾಗಿ ನಾನೇ ನಿನ್ನುದರದಲ್ಲಿ ಜನ್ನಿಸುವೆನು, ” ಎಂದು ಹೇಳಿದಳಂತೆ. ಅನಂತರ ಕೆಲವು ದಿವಸಗಳಲ್ಲಿ ಅವರಿಗೆ ಜಗದಂಬೆಯ ಅಂಶದಿಂದ ಅಹಲ್ಯಾಬಾಯಿಯು ಹುಟ್ಟಿದಳು,” ಎಂಬುದು ಅದರ ಸಾರಾಂಶವು, ಆಕೆಯು ದೇವಾಂಶ ಸಂಭೂತೆಯೆಂಬುದನ್ನು ಸ್ಥಾಪಿಸುವುದಕ್ಕೆ ಇಂತಹ ಅನೇಕ ಕಥೆಗಳನ್ನು ಹೇಳುತ್ತಾರೆ. ಅಹಿಯು ಬಾಲ್ಯದಲ್ಲಿ ತನ್ನೊಡನಾಡಿಗಳನ್ನು ಪ್ರೀತಿಯಿಂದ ಕಾಣುತ್ತ ಲಿದ್ದಳು. ತನಗೆ ಯಾರಾದರೂ ತಿಂಡಿಯನ್ನು ಕೊಟ್ಟರೆ ಅದನ್ನು ತನ್ನ ಸ್ನೇಹಿತೆ ಯರೆಲ್ಲರಿಗೂ ಕೊಟ್ಟು ತಾನು ತಿನ್ನುತಲಿದ್ದಳು, ಈಕೆಯು ಸತ್ಯಪ್ರಿಯೆಯಾದುದ ರಿಂದ ತನ್ನೊಡನಾಡಿಗಳಲ್ಲಿ ಯಾರಾದರೂ ಅಸತ್ಯವನ್ನಾಡಿದರೆ ಆವರೊಡನೆ ಮಾತ ನಾಡುವುದನ್ನು ಬಿಟ್ಟುಬಿಡುವಳು