ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಅಬಲಾ ಸಚ್ಚರಿತ್ರ ರತ್ನ ಮಾಲೆ. ಈ ಬಾಲೆಯು ಯಾರೆಂದು ಉಪಾಧ್ಯಾಯನನ್ನು ಕೇಳಿದನು. ಆ ಬ್ರಾಹ್ಮಣನು ಈಕೆಯ ವೃತ್ತಾಂತವನ್ನೂ ಈಕೆಯ ಸುಗುಣಗಣಗಳನ್ನೂ ವರ್ಣಿಸಿದನು. ಆಗ ರಘುನಾಥರಾಯನೂ, ಮಲ್ಲಾರರಾವ್ ಹೋಳಕರನೂ, ಈ ಕನೈಯು ಖಂಡೇ ರಾಯನಿಗೆ ತಕ್ಕ ಪತ್ನಿಯೆಂದು ಭಾವಿಸಿ ಆನಂದರಾಯನನ್ನು ಕರೆಯಿಸಿ ಆತನ' ಸಮ್ಮತಿಯನ್ನು ಪಡೆದು ವಿವಾಹ ಮುಹೂರ್ತವನ್ನು ನಿಶ್ಚಯಿಸಿದರು. ಆ ಸುಮ ಹೂರ್ತದಲ್ಲಿ ಖಂಡೇರಾಯನಿಗೂ ಅಹಲ್ಯಗೂ ವಿವಾಹವು ಬಳೆಯಿತು. ಬಡವನ ಮಗಳಾದ ಅಹಲ್ಯಯು ಮಂಡಲಾಧೀಶ್ವರನ ಮಹಿಷಿಯಾದಳು. ಇನ್ನು ಮೇಲೆ ಆಕೆಯನ್ನು ಅಹಿಯೆಂಬ ಸಾಮಾನ್ಯನಾಮದಿಂದ ಕರೆಯದೆ ಅಹಲ್ಯಾಬಾಯಿ ಯೆಂಬ ಗೌರವನಾಮದಿಂದ ಕರೆಯೋಣ, ಅಹಲ್ಯಾಬಾಯಿಯ ಚರಿತ್ರ ರೂಪಕ ವಾದ ನಾಟಕದ ಪ್ರಥಮಾಂಕವು ಇಲ್ಲಿಗೆ ಸಮಾಪ್ತವಾಯಿತು. ದ್ವಿತೀಯಾಂಕವನ್ನು ಪ್ರವೇಶಿಸುವುದಕ್ಕೆ ಪೂರ್ವದಲ್ಲಿ ಅಹಲ್ಯಾಬಾಯಿಯ ಪತಿಯಾದ ಖಂಡೆರಾಯನ ಚರಿತ್ರೆಯನ್ನು ಕುರಿತು ಸ್ವಲ್ಪ ಮಾತನಾಡುವುದು ಯುಕ್ತವು. ಪೂನಾಪಟ್ಟಣದ ಸಮಿಾಪದಲ್ಲಿ ಹೋಳ್ ಎಂಬ ಚಿಕ್ಕ ಹಳ್ಳಿಯು ಇತ್ತು. ಅಲ್ಲಿ ಖಂಡೂಜಿ ಎಂಬ ಒಬ್ಬ ಕುರುಬನಿದ್ದನು. ಆತನಿಗೆ ಮಲ್ಲಾರಿ ಎಂಬ ಮಗನು ಹುಟ್ಟಿದನು. ಆ ಬಾಲಕನು ಅಲ್ಪ ವಯಸ್ಕನಾಗಿರುವಾಗಲೇ ಖಂಡೂ ಜಿಯು ಮೃತನಾದನು. ಮಲ್ಲಾರಿಯು ಸೋದರಮಾವನ ಮನೆಯಲ್ಲಿ ಪಶು ಗಳನ್ನು ಕಾಯುತಲಿದ್ದನು. ಈತನ ಸೋದರಮಾವನು ಈ ಬಾಲಕನ ಸಾಹಸ, ಶೌರ್ಯ ಆಜ್ಞಾ ಧಾರಕತ್ರ ಮುಂತಾದ ಸುಗುಣಗಳನ್ನು ನೋಡಿ, ದನಗಳನ್ನು ಕಾಯಬೇಡ ಎಂದು ಹೇಳಿ, ಸೇನಾಪತಿಯಾದ ದಾಭಾಡೆಯ ಬಳಿಯಲ್ಲಿ ಅವನಿಗೆ ಸೈನಿಕನ ಕೆಲಸವನ್ನು ಮಾಡಿಸಿಕೊಟ್ಟನು. ಮಲ್ಲಾರಿಯು ಸೈನ್ಯಕ್ಕೆ ಸೇರಿದ ಸಮಯ ದಲ್ಲಿ, ಪೇಷ್ಟೆಗೂ ಬಾದಷಹನಿಗೂ ಯುದ್ಧವು ನಡೆಯುತಲಿತ್ತು. ಆ ಯುದ್ದದಲ್ಲಿ ಈತನು ತೋರಿಸಿದ ಶೌರ್ಯದಿಂದ ಈತನಿಗೆ ಶಿಲೇದಾರ್‌ ಕೆಲಸವು ದೊರೆಯಿತು. ಅನಂತರ ಕೆಲವು ದಿವಸಗಳಿಗೆ ಐನೂರು ಕುದುರೆಗಳಮೇಲಿನ ಅಧಿಕಾರವು ಪ್ರಾಪ್ತ ವಾಯಿತು. ಆಮೇಲೆ ಮಾಳವ ಪ್ರಾಂತದಲ್ಲಿ ನಡೆದ ಕದನದಲ್ಲಿ ಈತನು ಡಿಲ್ಲಿ ಶ್ವರನ ಸೇನಾಧಿಪತಿಯಾದ ರಾಯ ಬಹಾದರನನ್ನು ಗೆದ್ದನು. ಇದರಿಂದ ಬಾಜೀ ರಾವ್ ಪೇಷ್ಟೆಯು ಈತನಿಗೆ ಮಾಳವಪ್ರಾಂತದ ಸುಬೇದಾರಿಯನ್ನೂ, ಮಲ್ಲಾರಿ ರಾವ್ ಹೋಳ್ಕರ್ ಎಂಬ ಬಿರುದನ್ನೂ ಕೊಟ್ಟನು. ಈ ವಿಧವಾಗಿ ಹೋಳೆಂಬ ಹಳ್ಳಿಯಲ್ಲಿ ಹುಟ್ಟಿದ ಮಲ್ಲಾರಿಯು ತನ್ನ ಶೌರ್ಯ ಸಾಹಸಗಳಿಂದ ಇಂದೂರು ಸಂಸ್ಥಾನಕ್ಕೆ ದೊರೆಯಾದುದಲ್ಲದೆ, ತನ್ನ ಜನ್ಮಭೂಮಿಗೆ ಶಾಶ್ವತವಾದ ಕೀರ್ತಿ ಯನ್ನುಂಟುಮಾಡಿದನು. ಈತನ ಪತ್ನಿಯ ಹೆಸರು ಗೌತಮಾಬಾಯಿ, ಈ ದಂಪತಿಗಳಿಗೆ ಖಂಡೇರಾಯನೆಂಬ ಪುತ್ರನು ಜನಿಸಿದನು, ಈತನೇ ಅಹಲ್ಯಾ