ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧ ಅಹಲ್ಯಾಬಾಯಿ ಹೋಳಕರ್‌, ಮೊದಲಾದ ಸುಖಸಾಧನಗಳು ಏಕೀಭವಿಸಿ, ಅಹಲ್ಯಾಬಾಯಿಯನ್ನು ಆಶ್ರಯಿ ಸಿರುವವರೆಗೂ ಆಕೆಯು ಸೌಖ್ಯಸಾಗರದಲ್ಲಿ ಮುಳುಗಿದ್ದಳು. (೩) ಅಹಲ್ಯಾಬಾಯಿಯ ವೈಧವ್ಯ ಮತ್ತು ರಾಜ್ಯ ಪಾಲನೆ- ಈ ಮೂರನೇ ಅಂಕದಲ್ಲಿ ಅಹಲ್ಯಾಬಾಯಿಯ ಕಷ್ಟಗಳು ವರ್ಣಿಸಲ್ಪಟ್ಟಿದ್ದರೂ, ಯಾವ ಸತೃತ್ಯಗಳಿಂದ ಆಕೆಯ ಕೀರ್ತಿಯು ಆಚಂದ್ರಾರ್ಕವಾಗಿ ನಿಂತಿದೆಯೋ ಅವೂ ವರ್ಣಿ ಸಲ್ಪಡುವುದರಿಂದ, ಈ ಅಂಕದಲ್ಲಿ ಶುಭಾಶುಭ ವರ್ಣನೆಗಳೆರಡೂ ಕೂಡಿರುವುವು. - ಅಹಲ್ಯಾಬಾಯಿಯು ಮೇಲೆ ಹೇಳಿದಂತೆ ಸೌಖ್ಯ ಸಾಗರದಲ್ಲಿ ಮುಳುಗಿದ್ದರೆ ಆಕೆಯ ಕೀರ್ತಿಚಂದ್ರಿಕೆಯು ಲೋಕದಲ್ಲಿ ಪ್ರಸರಿಸಲಾರದೆಂದು ಜಗದೀಶ್ವರನು ಆಕೆಗೆ ಕಷ್ಟವನ್ನುಂಟುಮಾಡಿದನು. ಮಲ್ಲಾರಿರಾಯನಿಗೂ ಯವನರಿಗೂ ಯುದ್ಧವು ಸಂಭವಿಸಿತು. ಸಮರಪ್ರಿಯನಾದ ಖಂಡೇರಾಯನು ಅತ್ಯುತ್ಸಾಹ ದಿಂದ ತಂದೆಯೊಡನೆ ಆ ಯುದ್ಧಕ್ಕೆ ಹೊರಟನು. ರಣರಂಗದಲ್ಲಿ ಶತ್ರುಗಳನ್ನು ಹಿಡಿಯಲು ಪ್ರಯತ್ನಿಸುವಷ್ಟರಲ್ಲಿ, ಶತ್ರುಸೈನ್ಯದಿಂದ ಹಾರಿಸಿದ ಒಂದು ಅಗ್ನಿ ಗೋಳವು ಆಕಸ್ಮಿಕವಾಗಿ ಆತನ ಮಸ್ತಕದ ಮೇಲೆ ಬಿದ್ದು ಆತನು ಮೃತನಾದನು. ಆ ವೃತ್ತಾಂತವು ಕಿವಿಗೆ ಬಿದ್ದೊಡನೆ, ಪತಿವ್ರತಾ ಶಿರೋಮಣಿಯಾದ ಅಹಲ್ಯಾ ಬಾಯಿಯು ಪ್ರಾಣ ಸಮಾನನಾದ ಪತಿಯನ್ನು ಅಗಲಿ, ಸೌಭಾಗ್ಯಹೀನೆಯಾಗಿ ಜೀವಿಸಿರಲಾರದೆ ಸಹಗಮನಕ್ಕೆ ಸಿದ್ಧಳಾದಳು. ಮೊದಲೇ ಪುತ್ರ ಮರಣದಿಂದ ಸಂತಪ್ತ ಹೃದಯನಾದ ಮಲ್ಲಾರಿರಾಯನು, ಅಹಲ್ಯಾಬಾಯಿಯು ಸಹಗಮನಕ್ಕೆ ಸಿದ್ದಳಾದಳೆಂಬ ಮಾತನ್ನು ಕೇಳಿ, ಅತ್ಯಂತ ದುಃಖಿತನಾಗಿ, ಆಕೆಯ ಬಳಿಗೆ ಬಂದು, “ ಅಮ್ಮಾ! ನನ್ನಲ್ಲಿ ನಿರ್ದಯನಾಗಿ ಖಂಡೂ ನನ್ನನ್ನು ಬಿಟ್ಟು ಹೋದನು. ಈ ಮುದುಕನ ಮೇಲೆ ಕರುಣೆಯಿಲ್ಲದೆ ನೀನೂ ಹೊರಡಲೆಣಿಸಿದೆಯಾ? ಗತಿಸಿ ಹೋದುದು ಅಹಿಯೆಂತಲೂ, ನೀನೇ ನನ್ನ ಮಗನಾದ ಖಂಡೂ ಎಂತಲೂ ಭಾವಿಸಿಕೊಳ್ಳುವೆನು. ಇಷ್ಟು ಕಠಿನಚಿತೆಯಾಗಿ ನನ್ನನ್ನೂ, ಮಕ್ಕಳನ್ನೂ ಬಿಟ್ಟು ಹೋಗಬೇಡ! ತಾಯಿ!” ಎಂದು ನಾನಾ ವಿಧವಾಗಿ ಬೇಡಿಕೊಂಡು ಆಕೆಯ ಸಹ ಗಮನ ಪ್ರಯತ್ನವನ್ನು ನಿಲ್ಲಿಸಿದನು. ಭಾರತಾಂಗನೆಯರಿಗೆ, ವೈಧವ್ಯದಂತಹ ಕೇಶಪೂರಿತವೃತ್ತಿಯು ಬೇರೊಂದಿಲ್ಲ ವೆಂಬುದು ಸರ್ವರಿಗೂ ತಿಳಿದ ವಿಷಯ ವಾಗಿದೆ. ಅಹಲ್ಯಾಬಾಯಿಯು ಇಂತಹ ಕ್ಷೇಶಪರಿಪೂರ್ಣ ವೈಧವ್ಯವನ್ನು ಸಹಿಸಿ ಕೊಂಡು, ಪರಮೇಶ್ವರನ ಪೂಜೆಯನ್ನು ಮಾಡುತ್ತ ಪರೋಪಕಾರ ನಿರತಳಾಗಿ ಉಳಿದ ತನ್ನಾಯುಃ ಪರಿಮತಿಯನ್ನು ಕಳೆಯಬೇಕೆಂದು ಧೈರ್ಯದೊಡನೆ ನಿಶ್ನ ಯಿಸಿಕೊಂಡಳು. ಪತಿ ವಿರಹದುಃಖವನ್ನು ಸ್ವಲ್ಪ ಮರೆಯುವಷ್ಟರಲ್ಲಿ ತನ್ನನ್ನು ಪುತ್ರಭಾವ ದಿಂದ ನೋಡಿಕೊಳ್ಳುತ್ತಲಿದ್ದ ಮಾವನು ಗತಿಸಿದನು. ಇದಾದ ಆರು ತಿಂಗಳಿಗೆ