ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಬಲ ಅಬಲಾ ಸಚ್ಚರಿತ್ರ ರತ್ನ ಮಾಲೆ. ಪುತ್ರನಾದ ಮಾಲೀರಾಯನು ಪರಲೋಕವನ್ನೈದಿದನು. ಈ ವಿಷಯಗಳು 1756 ನೆಯ ಇಸವಿಯಲ್ಲಿ ನಡೆದುವು. ಈ ದುಃಖಪರಂಪರೆಗಳು ಸಂಭವಿಸಿದ ಸಮಯದಲ್ಲಿ ಅಹಲ್ಯಾಬಾಯಿಯು ಇಪ್ಪತ್ತಮೂರುವರುಷ ವಯಸ್ಸುಳ್ಳವಳಾಗಿ ದ್ದಳು! ಅಹಲ್ಯಾಬಾಯಿಯ ಪುತ್ರನಾದ ಮಾಲೀರಾಯನು ಬಹು ದುರ್ಮಾರ್ಗ ನಾಗಿದ್ದು ದರಿಂದ ಪ್ರಜೆಗಳು ಈತನಿಗೆ ರಾಜ್ಯವನ್ನು ಕೊಡಲು ಸಮ್ಮತಿಸಲಿಲ್ಲ. ಆದರೆ ಪೇಷ್ಟೆಯ ಆಜ್ಞೆಯಿಂದ ಈತನಿಗೆ ರಾಜ್ಯಾಭಿಷೇಕವು ಆಯಿತು, ಈ ಕ್ರೂರನು ಅಹಲ್ಯಾಬಾಯಿಯು ಪೂಜಿಸುತ್ತಿದ್ದ ಬ್ರಾಹ್ಮಣರನ್ನು ವಿಶೇಷ ಹಿಂಸಿ ಸುತ್ತಲಿದ್ದನು. ತಾಯಿಯು ಬ್ರಾಹ್ಮಣರಿಗೆ ವಸ್ತ್ರದಾನವನ್ನು ಮಾಡೆಂದು ಹೇಳಿ ದರೆ, ಈತನು ವಸ್ತ್ರಗಳಲ್ಲಿ ಚೇಳುಗಳನ್ನಿಡಿಸಿ ಅವರಿಗೆ ಕೊಡುತಲಿದ್ದನು. ಸ್ವರ್ಣ ದಾನವನ್ನು ಮಾಡುವೆನೆಂದು ಹೇಳಿ ತಂಬಿಗೆಗಳಲ್ಲಿ ನಾಣ್ಯಗಳನ್ನೂ ಕಣಜ, ಸಾವಿರ ಕಾಲು ಹುಳ ಮುಂತಾದ ಕೆಟ್ಟ ಹುಳಗಳನ್ನೂ ಇಟ್ಟು ಬ್ರಾಹ್ಮಣರಿಗೆ ಕೊಡುತ್ತಲಿದ್ದನು. ಹೀಗೆ ಮಾಡುತ್ತಲಿದ್ದು ದರಿಂದ ಸರ್ವ ಭೂತಗಳಲ್ಲಿಯೂ ಅತ್ಯಂತ ದಯೆಯುಳ್ಳ ಅಹಲ್ಯಾಬಾಯಿಗೆ ಮಾಲೀರಾಯನಿಂದ ಹೆಚ್ಚಾದ ದುಃಖ ವುಂಟಾಗುತಲಿತ್ತು. ಇಂತಹ ದುಷ್ಟನು ಈ ಲೋಕದಲ್ಲಿ ದ್ದರೆ ತನ್ನ ಭಕ್ತಳಾದ ಅಹಲ್ಯಗೆ ಅತ್ಯಂತ ದುಃಖವುಂಟಾಗುವುದೆಂದು ಭಗವಂತನು ಮಾಲೀರಾಯನನ್ನು ಕರೆದುಕೊಂಡನು. ಅಹಲ್ಯಾ ಬಾಯಿಯೇ ತನ್ನ ಮಗನನ್ನು ಆನೆಯ ಕಾಲಿನಿಂದ ತುಳಿಸಿ ಕೊಲ್ಲಿ ಸಿದಳೆಂದು ವದಂತಿಯುಂಟು. ಆದರೆ ಈ ವದಂತಿಯು ಸತ್ಯ ವಾದುದೆಂದು ನಂಬುವುದಕ್ಕೆ ಯಾವ ಆಧಾರವೂ ಇಲ್ಲ. ಈ ವಿಷಯವನ್ನು ಕುರಿತು ಮಾಲ್ಕಂ ದೊರೆಯು, “ ಮಾಲೀರಾವಿನ ಮರಣಸಂಬಂಧವಾದ ವದಂತಿ ಯನ್ನು ಕೆಲಜನ ಆಂಗ್ಲಯರು ನಂಬಿದರು. ಆದರೆ ಬಹು ಸೂಕ್ಷ್ಮ ರೀತಿಯಲ್ಲಿ ಆ ವಿಷಯವನ್ನು ವಿಚಾರಿಸಲು ಆಕೆಯಲ್ಲಿ ದೋಷವು ಅಣುಮಾತ್ರವೂ ಇಲ್ಲ ವೆಂದು ಸ್ಪಷ್ಟವಾಗಿ ತಿಳಿಯಬಂದಿತು,” ಎಂದು ಬರೆದಿದ್ದಾನೆ. ಹೀಗೆ ಅನ್ಯ ದೇಶೀಯನಾದ ಗ್ರಂಥಕಾರನು ಬರೆದಿರುವಾಗ, ಅಹಲ್ಯಾಬಾಯಿಯು ನಿರ್ದೋಷಿ ಯೆಂದು ಮತ್ತೊಮ್ಮೆ ಹೇಳಬೇಕೆ ! ಅಹಲ್ಯಾಬಾಯಿಯು ಪ್ರಜೆಗಳ ಹಿತಕ್ಕಾಗಿ ಸ್ವಪುತ್ರನನ್ನೂ ಶಿಕ್ಷಿಸುವಷ್ಟು ನ್ಯಾಯ್ ಕಚಿತ್ತಳಾಗಿದ್ದಳೆಂಬುದನ್ನು ಸ್ಥಾಪಿಸುವದಕ್ಕೆ ಈ ಕಥೆಯನ್ನು ಯಾರೋ ಕಲ್ಪಿಸಿರಬಹುದು. ಜನಕಂಟಕನಾದ ಮಾಲೀರಾಯನು ಗತಿಸಿದುದರಿಂದ ದೇಶಕ್ಕೆ ಬಹು ಮೇಲಾಯಿತು. ಈತನ ಮರಣಾನಂತರ, “ ರಾಜ್ಯ ಪಾಲನೆಯು ಯಾರ ಹೆಸರಿ ನಲ್ಲಿ ನಡೆಯಬೇಕು,” ಎಂದು ವಿವಾದವು ಪ್ರಾರಂಭವಾಯಿತು. ಪೂನೆಯಲ್ಲಿರುವ ಪೇಷ್ಟೆಗಳು ಇವರಿಗೆ ಪ್ರಭುಗಳಾದುದರಿಂದ ಈ ವಿಷಯವನ್ನು ಅವರಿಗೆ ತಿಳಿಯ ಪಡಿಸಿದರು. ಆಗ ಮಾಧವರಾಯನು ಪೇಷ್ಟೆಯಾಗಿದ್ದನು. ರಘುನಾಥರಾಯನು