ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಹಲ್ಯಾಬಾಯಿ ಹೋಳಕರ್, ಆಕೆಯ ಉಗ್ರಶಾಸನವು. – ಅಹಲ್ಯಾಬಾಯಿಯು ಧರ್ಮಾತ್ಮಳೂ ಭೂತದಯೆಯುಳ್ಳವಳೂ ಆದರೂ, ಆಕೆಯ ಶಾಸನಗಳು ಉಗ್ರವಾಗಿದ್ದುವು. ಸೇವಕರಲ್ಲಿ ಯಾರಾದರೂ ತಪ್ಪನ್ನು ಮಾಡಿದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುತ್ತಲಿದ್ದಳು. ಆಕೆಯ ರಾಜ್ಯದಲ್ಲಿ ನರ್ಮದಾತೀರ ಪ್ರದೇಶದಲ್ಲಿರುವ ಗೊಂಡರು, ಪ್ರಜೆಗಳಿಗೆ ವಿಶೇಷ ಬಾಧೆಯನ್ನುಂಟುಮಾಡುತಲಿದ್ದರು. ಅಹಲ್ಯಾ ಬಾಯಿಯು ಮೊದಲು ಅವರಿಗೆ ನಯಭಯಗಳಿಂದ ಬುದ್ದಿಯನ್ನು ಹೇಳಿ ಅವರು ತನ್ನ ಮಾತನ್ನು ಲಕ್ಷ್ಮಮಾಡದಿರಲು, ಅವರಿಗೆ ಪ್ರಾಣಾಂತ ಶಿಕ್ಷೆಯನ್ನು ವಿಧಿಸಿ ದಳು. ಹೊಟ್ಟೆಗಿಲ್ಲದೆ ಕಳ್ಳತನವನ್ನು ಮಾಡುವವರಿಗೆ ಬಂಜರು ಭೂಮಿಯನ್ನು ಉಚಿತವಾಗಿ ಕೊಟ್ಟು ಕೃಷಿಯಿಂದ ಜೀವನ ಮಾಡುವಂತೆ ಹೇಳುತಲಿದ್ದಳು. ಇನ್ನೆಂದಿಗೂ ಕಳ್ಳತನವನ್ನು ಮಾಡುವುದಿಲ್ಲವೆಂದು ಭಾಷೆಯನ್ನು ಕೊಟ್ಟು ಅದಕ್ಕೆ ತಪ್ಪಿ ನಡೆದವರಿಗೆ ಕ್ರೂರಶಿಕ್ಷೆಯನ್ನು ವಿಧಿಸುತಲಿದ್ದಳು. ಇಂದೂರು ಪಟ್ಟಣ ದಲ್ಲಿರುವ ದೇವೀಚಂದನ್ ಎಂಬ ಒಬ್ಬ ಸಾಹುಕಾರನು ಸಂತಾನಹೀನನಾಗಿ ಮೃತ ನಾದನು. ಹಕ್ಕುದಾರರು ಯಾರೂ ಇಲ್ಲದ ಆತನ ಆಸ್ತಿಯನ್ನು ತುಕೋಜಿ ರಾಯನು ಜಪ್ತಿ ಮಾಡಿಸಿದನು, ಈ ವಿಷಯವನ್ನು ಅಹಲ್ಯಾಬಾಯಿಯು ಕೇಳಿ ದೇವೀಚಂದನ ಪತ್ನಿಯನ್ನು ಕರೆಯಿಸಿ, ಆಕೆಯ ಪತಿಯ ಆಸ್ತಿಯನ್ನು ಕೊಡಿಸಿ, ಒಬ್ಬ ಬಾಲಕನನ್ನು ದತ್ತು ತೆಗೆದುಕೊಂಡು ಅದನ್ನು ಅನುಭವಿಸುವಂತೆ ಆಕೆಗೆ ಹೇಳಿದಳು. ತುಕೋಜಿಯು ಈ ವಿಧವಾಗಿ ವ್ಯವಹರಿಸಿದುದನ್ನು ನೋಡಿ ಆತನ ಮೇಲೆ ಆಗ್ರಹಗೊಂಡು, “ ರಾಜಧಾನಿಯಲ್ಲಿ ನೀವು ಸೈನ್ಯದೊಡನೆ ಇದ್ದ ಪಕ್ಷದಲ್ಲಿ ಪ್ರಜೆಗಳಿಗೆ ಬಹು ಬಾಧೆಯುಂಟಾಗುವುದು. ಆದಕಾರಣ ನೀವು ಸೈನ್ಯ ಸಹಿತ ವಾಗಿ ಇಂದೂರನ್ನು ಬಿಟ್ಟು ಹೋಗಿ,” ಎಂದು ಆಜ್ಞಾಪಿಸಿದಳು. ಆತನು ತನ್ನ ತಪ್ಪನ್ನೊಪ್ಪಿಕೊಂಡು ಆಕೆಯ ಆಜ್ಞೆಯನ್ನು ಶಿರಸಾವಹಿಸಿ, ಕ್ಷಮಾಪಣೆಯನ್ನು ಬೇಡಿಕೊಂಡನು. ಆಕೆಯ ರಾಜ್ಯದಲ್ಲಿದ್ದ ಅನೇಕ ಮಾಂಡಲಿಕ ರಾಜರು ಅಹಲ್ಯಾ ಬಾಯಿಯನ್ನು ಸ್ತ್ರೀಯೆಂದು ಧಿಕ್ಕರಿಸದೆ ಆಕೆಯಿಂದ ಯಾವ ಉಗ್ರಶಾಸನ ವಾದೀತೋ ಏನುಮಾಡುವಳೋ ಎಂದು ಹೆದರಿ ಆಕೆಗೆ ಕಪ್ಪವನ್ನು ಕ್ರಮವಾಗಿ ಸಲ್ಲಿಸುತಲಿದ್ದರು. ಒಂದುಸಲ ಉದಯಪುರದ ರಾಣಾರಾಮಪುರ ಎಂಬ ಗ್ರಾಮ ವನ್ನು ತೆಗೆದುಕೊಳ್ಳಲು ಸಿದ್ಧನಾದನು. ಆ ಸಮಯದಲ್ಲಿ ತುಕೋಜಿಯು ದಕ್ಷಿಣ ದಲ್ಲಿ ಯುದ್ದ ಮಾಡುತಲಿದ್ದನು. ಆದುದರಿಂದ ಅಹಲ್ಯಾಬಾಯಿಯ ಬಳಿಯಲ್ಲಿ ಸೇನೆಯು ಸ್ವಲ್ಪವಾಗಿತ್ತು. ಆದರೂ ಆಕೆಯು ಹೆದರದೆ ಆ ಅಲ್ಪಸೇನೆಗೆ ಶರೀಫ ಬಾಯಿ ಎಂಬಾತನನ್ನು ಸೇನಾಧಿಪತಿಯನ್ನಾಗಿ ನಿಯಮಿಸಿ ರಾಣಾವಿನೊಡನೆ ಸಮರವನ್ನು ಮಾಡಲು ಕಳುಹಿದಳು, ರಾಣಾ ಪರಾಭವವನ್ನು ಹೊಂದಿ ಅಹಲ್ಯಾ ಬಾಯಿಗೆ ಶರಣಾಗತನಾದನು, ಈಕೆಯ ರಾಜ್ಯದಲ್ಲಿ ಭೀಮದಾಸ ಎಂಬ ಒಬ್ಬ ಸಾಹುಕಾರನು ಬೇವಾರಸಾಗಿ ಸತ್ತು ಹೋದನು. ಕಮಾವಿಸ್ಟಾರ್‌ ಎಂಬ