ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ಅಬಲಾ ಸಚ್ಚರಿತ್ರ ರತ್ನ ಮಾಲೆ. ಅಧಿಕಾರಿಯು ಸ್ವಲ್ಪ ದ್ರವ್ಯವನ್ನು ಲಂಚವಾಗಿ ಕೊಡಬೇಕೆಂದು ಆತನ ಪತ್ನಿ ಯನ್ನು ಕೇಳಿದನು. ಆಕೆಯು ಲಂಚವನ್ನು ಕೊಡದೆ ಹೋದುದರಿಂದ ಆ ಅಧಿ ಕಾರಿಯು ಆಸ್ತಿಯನ್ನು ಸರ್ಕಾರಕ್ಕೆ ಸೇರಿಸಿಕೊಳ್ಳುವೆನು ಎಂದು ಹೆದರಿಸಿದನು. ಆದುದರಿಂದ ಅಹಲ್ಯಾಬಾಯಿಯು ಆತನನ್ನು ಅಧಿಕಾರದಿಂದ ತೆಗೆದು ಹಾಕಿ ದಳು. ಭೀಮದಾಸನ ಪತ್ನಿಗೆ ದತ್ತು ತೆಗೆದುಕೊಳ್ಳುವಂತೆ ಹೇಳಿದಳು. ರಾಜ್ಯ ಪಾಲಕರಿಗೆ ಅವಶ್ಯಕಗಳಾದ ಉಗ್ರಶಾಸನ ನ್ಯಾಯಬುದ್ದಿ ಭೂತದಯೆ ಮೊದಲಾದ ಗುಣಗಳೆಲ್ಲವೂ ಈಕೆಯಲ್ಲಿ ನೆಲಸಿದ್ದುವು. ಆಕೆಯ ಸ್ವಭಾವ- ಮೇಲೆ ಹೇಳಿದ ವರ್ಣನೆಯಿಂದ ಅಹಲ್ಯಾ ಬಾಯಿಯ ಸ್ವಭಾವವು ಎಂತಹುದೆಂಬುದು ಸಹಜವಾಗಿ ತಿಳಿಯುವುದು. ಆದರೂ ಅಲ್ಲಿ ತಿಳಿಸದ ಒಂದೆರಡು ಸುಗುಣಗಳನ್ನು ಈಗ ತಿಳಿಸುವೆನು. ಲೋಕದಲ್ಲಿ ಸರ್ವ ಜನರೂ ಸಾಮಾನ್ಯವಾಗಿ ಅವರಲ್ಲಿ ಸ್ತ್ರೀಯರು ವಿಶೇಷವಾಗಿ ಸ್ತೋತ್ರಪ್ರಿಯರೆನ್ನ ಬಹುದು. ಆದರೆ ಅಹಲ್ಯಾಬಾಯಿಯಲ್ಲಿ ಈ ದುರ್ಗುಣ ಲೇಶವೂ ಇರಲಿಲ್ಲ. ಒಂದಾನೊಂದು ಸಲ ಒಬ್ಬ ಕವಿಯು ಅಹಲ್ಯಾಬಾಯಿಯ ಮೇಲೆ ಒಂದು ಕಾವ್ಯ ವನ್ನು ರಚಿಸಿ, ಬಹುಮಾನವನ್ನು ಪಡೆಯುವ ಸಲುವಾಗಿ ಅದನ್ನು ಆಕೆಗೆ ತಂದು ತೋರಿದನು. ಅಹಲ್ಯಾಬಾಯಿಯು ಆ ಕಾವ್ಯವನ್ನು ನದಿಯಲ್ಲಿ ಬಿಸುಟು, “ಎಲೈ ಕವಿಶ್ರೇಷ್ಠನೆ! ಅಲ್ಪಜ್ಞೆಯಾದ ನನ್ನನ್ನು ಸ್ತುತಿಸುವುದು ನಿಚ್ಛಯೋಜನ, ಸರ್ವಜ್ಞ ನಾದ ಭಗವಂತನನ್ನು ಸ್ತುತಿಸು,” ಎಂದು ಆತನಿಗೆ ಹೇಳಿ ಕಳುಹಿಸಿಬಿಟ್ಟಳು. ಈಕೆಗೆ ಪರದ್ರವ್ಯದಲ್ಲಿ ಆಶೆಯು ಇರಲಿಲ್ಲ ಎಂಬುದಕ್ಕೆ ಮೇಲೆ ಎರಡು ನಿದರ್ಶನ ಗಳನ್ನು ತಿಳಿಸಿದೇನೆ, ಇನ್ನೊಂದು ನಿದರ್ಶನವನ್ನು ಆಲೈಸಿರಿ. ತಾಸೀದಾಸ್, ಬನಾರಸ್ ದಾಸ್ ಎಂಬಿಬ್ಬರು ಸೋದರರು ಪುತ್ರರಿಲ್ಲದೆ ಗತಿಸಿದರು. ತಾಸೀ ದಾಸನ ಪತ್ನಿಯಾದ ಮಹೇಶ್ವರಿಯು, ಅಹಲ್ಯಾಬಾಯಿಯ ಸವಿಾಪಕ್ಕೆ ಬಂದು ತಾಯೇ! ತಮ್ಮ ಧರ್ಮರಾಜ್ಯದಲ್ಲಿದ್ದು ತಮ್ಮ ಅನುಗ್ರಹದಿಂದ ನನ್ನ ಪತಿಯೂ, ಮೈದುನನೂ ಗಳಿಸಿದ ಸಂಪತ್ತೆಲ್ಲವೂ ತಮ್ಮದೇ ಆಗಿದೆ. ಆದುದರಿಂದ ಈ ದ್ರವ್ಯ ವನ್ನು ತಾವು ಸ್ವೀಕರಿಸಬೇಕೆಂದು ಕೇಳಿಕೊಂಡಳು. ಆಗ ಆಕೆಯು ಮಹೇಶ್ವರಿ ಯನ್ನು ಕುರಿತು ನಿನ್ನ ಪತಿಯ, ಮೈದುನನ ಹಣವು ನಿನ್ನದು, ನನ್ನದಲ್ಲ. ಅದು ನಿನಗೆ ಬೇಡವಾದರೆ, ಅದರಿಂದ ನಿನ್ನ ಪತಿಯ ಹೆಸರು ಶಾಶ್ವತವಾಗಿರುವಂತೆ ಯಾವುದಾದರೂ ಒಂದು ಘನಕಾರ್ಯವನ್ನು ಮಾಡು ಎಂದು ಹೇಳಿಕಳುಹಿದಳು. ಅದರಂತೆ ಮಹೇಶ್ವರಿಯು ತನ್ನ ಗಂಡನ ಹೆಸರಿನಲ್ಲಿ ಒಂದು ದೊಡ್ಡ ದೇವಾಲಯ ವನ್ನೂ, ನದೀತೀರದಲ್ಲಿ ಒಂದು ಸ್ನಾನಘಟ್ಟವನ್ನೂ ಕಟ್ಟಿಸಿದಳು, ಮನೆಗೆ ಬರುವ ದ್ರವ್ಯವನ್ನು ನಿರಪೇಕ್ಷೆಯಿಂದ ಬಿಟ್ಟ ಧನ್ಯಾಳನ್ನು ಎಷ್ಟು ಕೊಂಡಾಡಿದರೂ ಅಲ್ಪ ವೇ! ಗರ್ವ, ಅಸತ್ಯ ಭಾಷಣ, ಕಪಟ, ವ್ಯರ್ಥ ಕಾಲಕ್ಷೇಪ, ಇವು ಮೊದ