ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಅಬಲಾ ಸಚ್ಚರಿತ್ರ ರತ್ನ ಮಾಲೆ. ಕನ್ಯಾವಿರಹ- ಅಹಲ್ಯಾಬಾಯಿಗೆ ಮಂಚಾಬಾಯಿ ಎಂಬ ಪುತ್ರಿಯಿದ್ದ ಳೆಂದು ವಾಚಕರಿಗೆ ಗೊತ್ತಿರಬಹುದು. ಈಕೆಯನ್ನು ಮುಕ್ತಾಬಾಯಿ ಎಂತಲೂ ಕರೆಯುತಲಿದ್ದರು, ಅಹಲ್ಯಾಬಾಯಿಯು, ಈಕೆಗೆ ವಿವಾಹವನ್ನು ಮಾಡಿ ಅಳಿ ಯನನ್ನು ಮನೆಯಲ್ಲಿಯೇ ಇರಿಸಿಕೊಂಡಿದ್ದಳು, ಈತನು ಬಹುದಿವಸಗಳು ಜೀವಿ ಸಿದ್ದು, ಅಹಲ್ಯಾಬಾಯಿಯ ಮರಣಕ್ಕೆ ಸ್ವಲ್ಪ ದಿವಸಗಳಿಗೆ ಪೂರ್ವದಲ್ಲಿ ಕಾಲವಾ ದನು. ಪತಿಯು ಮೃತನಾದೊಡನೆಯೇ ಮುಕ್ತಾಬಾಯಿಯು ಅನುಗಮನಕ್ಕೆ ಸಿದ್ದೆಯಾದಳು. ಅಹಲ್ಯಾಬಾಯಿಯು ಮಗಳನ್ನು ಸಹಗಮನ ಮಾಡಬೇಡ ವೆಂದು ಬಹುವಿಧವಾಗಿ ಕೇಳಿಕೊಂಡಳು. ಆದರೆ ಮುಕ್ತಾಬಾಯಿಯು ತಾಯ ಮಾತನ್ನು ಕೇಳದೆ ಅನುಗಮನವನ್ನು ಮಾಡಿಬಿಟ್ಟಳು. ಮಗಳೂ, ಅಳಿಯನೂ ಮೃತರಾದ ಕೂಡಲೆ ಅಹಲ್ಯಾಬಾಯಿಗೆ ಮನೋವ್ಯಾಧಿಯು ಸಂಭವಿಸಿತು. ವಾರ್ಧಿಕ್ಯ, ರಾಜ್ಯಭಾರಶ್ರಮ ಉಪವಾಸ, ವ್ರತಗಳು, ಕನ್ಯಾ ವಿರಹದುಃಖ ಮೊದ ಲಾದುವು ಏಕೀಭವಿಸಿ ಈಕೆಯನ್ನು ಕ್ರಮೇಣ ಕ್ಷೀಣದೆಸೆಗೆ ತರಲಾರಂಭಿಸಿದವು. ಕೊನೆಗೆ ಆಕೆಗೆ ಒಂದು ವ್ಯಾಧಿಯು ಸಂಭವಿಸಿ, ಪುಣ್ಯಶ್ಲೋಕಳಾದ ಅಹಲ್ಯಾ ಬಾಯಿಯು ೧೭೯೫ ನೆಯ ಇಸವಿಯಲ್ಲಿ ಜಗದೀಶ್ವರನ ಪಾದಾರವಿಂದವನ್ನು ಸೇರಿಕೊಂಡಳು. ಕುರುಬರ ಕುಲದಲ್ಲಿ ಹುಟ್ಟಿದ್ದರೂ, ಇಷ್ಟು ಸದಾಚಾರ ಸಂಪ ಇನ್ನೂ, ಅಧಿಕಾರವನ್ನೂ ಶ್ರೇಷ್ಟತ್ವವನ್ನೂ ಪಡೆದ ಅಹಿಯು ನಾರೀರತ್ನವೆಂದು ನುಡಿಯಬೇಕಲ್ಲವೆ ! ನ್ಯಾಯ ಪರಿಪಾಲನೆಯನ್ನು ಮಾಡಿದ್ದರಿಂದ ಕೀರ್ತಿ ದೇಹರೆಂದು ಖ್ಯಾತಿ ಯನ್ನು ಪಡೆದ ಭೋಜರಾಯ, ಅಶೋಕ, ಅಕ್ಷರುಬಾದಷಹ, ಪೀಟರುದಿಗ್ರೇಟ್ ಮೊದಲಾದ ರಾಜಪುಂಗವರೊಡನೆಯೂ, ಸಾವಿತ್ರಿ, ಸೀತೆ, ವಿಕ್ಟೋರಿಯಾ, ಮೊದಲಾದ ಸ್ತ್ರೀರತ್ನಗಳೊಡನೆಯೂ, ಅಹಲ್ಯಾಬಾಯಿಯು ಸಮಾನಳಾದವ ಳೆಂದು ನಿಸ್ಸಂದೇಹವಾಗಿ ಹೇಳಬಹುದು. --