ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ರಾಳೇಗಾರೀ ಲಕ್ಷ್ಮೀಬಾಯಿ. ರಾಜ್ಯಾಭಿಷೇಕಮಹೋತ್ಸವವು ನಡೆದನಂತರ ಲಕ್ಷ್ಮೀಬಾಯಿಯು ದೀನ ದೆಶೆಗೆ ಬಂದಿರುವ ತನ್ನ ರಾಜ್ಯವು ಯಾವ ಸಂಸ್ಕರಣೆಗಳಿಂದ ಉನ್ನತ ಸ್ಥಿತಿಗೆ ಬರಬಹುದು ಎಂದು ಯೋಚಿಸಲಾರಂಭಿಸಿದಳು. ಬಲರಾಮಶರ್ಮನ ಕಾಲ ದಲ್ಲಿ ರಾಜ್ಯವು ಹೀನಸ್ಥಿತಿಗೆ ಬರಲು ಕಾರಣವೇನೆಂದು ವಿಚಾರಿಸಲು, ಉಮನಿ ತಾಂಬೀ ಎಂಬ ಮಂತ್ರಿಯ ದುಸ್ಸೇಷ್ಟೆಗಳಿಂದ ರಾಜ್ಯಕ್ಕೆ ಈದೆಶೆಯುಂಟಾಯಿ ತೆಂದು ರಾಣಿಗೆ ತಿಳಿಯಬಂದಿತು. ಕೂಡಲೆ ಆ ಮಂತ್ರಿಯನ್ನು ಕೆಲಸದಿಂದ ತೆಗೆದುಹಾಕಿದಳು. ಆ ಮೇಲೆ ಯೋಗ್ಯನಾದ ಮಂತ್ರಿಯು ದೊರಯುವವರೆಗೂ ಮಂತ್ರಿಯ ಕೆಲಸವನ್ನು ನೀವೇ ನೋಡುತ್ತಿರಬೇಕು' ಎಂದು ಮೆಕಾಲೆಯನ್ನು ಕೇಳಿದಳು, ಅದಕ್ಕೆ ಆತನು ಸಮ್ಮತಿಸಿ ರೆಸಿಡೆಂಟ್ ಕೆಲಸದ ಜತೆಯಲ್ಲಿ ದಿರ್ವಾ ಕೆಲಸವನ್ನೂ ನೋಡುತಲಿದ್ದನು. ಮೆಕಾಲೆದೊರೆಯು ದಿರ್ವಾಗಿರಿಯನ್ನು ಕೈಕೊಂಡೊಡನೆಯೇ, ಆತನು ಮಾಡಬೇಕಾದ ಕೆಲಸವನ್ನು ಕುರಿತು : (೧) ನಮ್ಮ ರಾಜ್ಯದಲ್ಲಿ ಅಧಿಕಾರಿಗಳು ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತಲಿದಾರೆಯೇ? ಕೆಳಗಿನ ಅಧಿಕಾರಿಗಳು ಮೇಲಿನ ಅಧಿಕಾರಿಗಳ ಆಜ್ಞೆಯಂತೆ ನಡೆದುಕೊಳ್ಳುವರೇ ? ಎಂಬುದನ್ನು ಮೊದಲು ವಿಚಾರಿಸಬೇಕು; (೨) ನ್ಯಾಯಸ್ಥಾನಗಳಲ್ಲಿಯೂ, ಇತರ ಕಚೇರಿಗಳಲ್ಲಿಯೂ ಅವರು ನಿಯಮಿತ ಪ್ರಕಾರವಾಗಿ ಕೆಲಸಗಳನ್ನು ನಡೆ ಸುತಲಿರುವರೋ ಇಲ್ಲವೋ ಎಂಬುದನ್ನು ವಿಚಾರಿಸಿ, ತಕ್ಕುದನ್ನು ಮಾಡಬೇಕು; (೩) ಸಂಸ್ಥಾನದ ಅಧಿಕಾರಿಗಳಲ್ಲಿ ಯಾರಾದರೂ ತಮ್ಮ ಕಾರ್ಯದಲ್ಲಿ ಅಶ್ರದ್ದೆ ಯುಳ್ಳವರಾಗಿದ್ದರೆ, ಅವರನ್ನು ಜುಲ್ಮಾನೆ ಮೊದಲಾದ ಸ್ವಲ್ಪ ಶಿಕ್ಷೆಗಳಿಂದ ಮಾರ್ಗಕ್ಕೆ ತರಬೇಕೇ ಹೊರತು, ಒಂದೇ ಸಲ ಕೆಲಸದಿಂದ ತೆಗೆದುಹಾಕಿ ಅವ ರಿಗೆ ಅನ್ನಕ್ಕಿಲ್ಲದಂತೆ ಮಾಡಲಾರದು : (೪) ವಸೂಲು ಲೆಕ್ಕಗಳನ್ನು ಸರಿಯಾಗಿ ನೋಡಿ ಹಿಂದಿನ ಬಾಕಿಗಳೆಲ್ಲವನ್ನೂ ವಸೂಲು ಮಾಡಬೇಕು, ಎಂಬ ಈ ವಿಷಯಗಳನ್ನು ಧೀಮತಿಯಾದ ರಾಣಿಯು ಸ್ವಂತವಾಗಿ ಯೋಚಿಸಿ ಬರೆದಳು. ಈಕೆಯು ರೆಸಿಡೆಂಟ್ ಮೆಕಾಲೆಯನ್ನು ತನ್ನ ಸೋದರನಂತೆ ನಂಬಿ ಆತನಿಂದ ಬಹು ಕಾರ್ಯಗಳನ್ನು ಮಾಡಿಸಿಕೊಂಡುದು ಸತ್ಯವಾದರೂ, ಯಾವ ಕಾರ್ಯ ವನ್ನಾಗಲಿ ತಾನು ಸ್ವಂತವಾಗಿ ಯೋಚಿಸದೆ, ಇತರರು ಹೇಳಿದಂತೆಯೇ ನಡೆಸುತ ಲಿರಲಿಲ್ಲ. ಹೊಸ ಶಾಸನಗಳನ್ನು ಮಾಡುವುದರಲ್ಲಿಯೂ, ಹಳೆಯ ಶಾಸನಗಳನ್ನು ಸಂಸ್ಕರಿಸುವುದರಲ್ಲಿಯೂ, ದೇಶದ ನಾಗರಿಕತೆಯನ್ನು ವೃದ್ದಿ ಪಡಿಸುವುದರಲ್ಲಿಯೂ ರಾಣಿಯು ಅನೇಕ ಹೊಸ ಕಲ್ಪನೆಗಳನ್ನು ಮೆಕಾಲೆಗೆ ತಿಳಿಯಪಡಿಸಿದಳು. ರಾಣಿಯ ಆಜ್ಞೆಯಂತೆ ಮೆಕಾಲೆದೊರೆಯು ಗ್ರಾಮಗ್ರಾಮದ ಅಧಿಕಾರಿ ಗಳಿಗೂ ತಮ್ಮ ತಮ್ಮ ಕೆಲಸಗಳನ್ನು ಶಾಸನಕ್ಕನುಸಾರವಾಗಿ ನಡೆಯಿಸಬೇಕೆಂದು