ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಅಬಲಾ ಸಚ್ಚರಿತ್ರ ರತ್ನ ಮಾಲೆ. ಆಜ್ಞಾ ಪತ್ರಿಕೆಗಳನ್ನು ಕಳುಹಿಸಿದನು. ಅನಂತರ ಅವರು ತನ್ನ ಆಜ್ಞೆಯಂತೆ ನಡೆಯುತಲಿರುವರೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು, ತಾನೇ ಸ್ವಂತವಾಗಿ ಪ್ರತಿಯೊಂದು ಗ್ರಾಮಕ್ಕೂ ಹೋಗುತಲಿದ್ದನು. ಪ್ರಥಮದಲ್ಲಿ ಆತನಿಗೆ ಅನೇಕ ಸಂಕಟಗಳು ಪ್ರಾಪ್ತವಾದುವು. ಆದರೆ ಆತನು ಅವೆಲ್ಲವನ್ನೂ ಸಹಿಸಿ ಬಹು ಪ್ರಯಾಸದೊಡನೆ ಎಲ್ಲ ವಿಷಯಗಳನ್ನೂ ರಾಣಿಯ ಇಚ್ಛೆಯಂತೆಯೇ ನೆರವೇರಿಸಿ ದನು. ಬಹು ದಿವಸಗಳಿಂದ ನೌಕರರೆಲ್ಲರೂ ಸೋಮಾರಿಗಳಾಗಿದ್ದುದರಿಂದ, ಅವರು ಮೆಕಾಲೆದೊರೆಯು ಎಂತಹ ಕಠಿನವಾದ ಆಜ್ಞೆಯನ್ನು ಕೊಟ್ಟರೂ ಲಕ್ಷ್ಯ ಮಾಡದೆ ಇದ್ದರು. ಹೀಗೆ ನಿರ್ಭಯರಾಗಿ ನಿದ್ರೆ ಮಾಡುತಲಿದ್ದವರೆಲ್ಲರನ್ನೂ ರೆಸಿ ಡೆಂಟನು ಎಚ್ಚರಗೊಳಿಸುತಲಿದ್ದನು. ಕೈಯಲ್ಲಾದಮಟ್ಟಿಗೂ ಅವರನ್ನು ಕೆಲಸ ದಿಂದ ತೆಗೆದುಹಾಕದೆ, ಚಿಕ್ಕಮಕ್ಕಳಿಗೆ ಬುದ್ದಿಯನ್ನು ಕಲಿಸುವಂತೆ, ಜುಲ್ಮಾನೆ ಮೊದಲಾದ ಅಲ್ಪ ಶಿಕ್ಷೆಗಳಿಂದ ಅವರನ್ನು ಮಾರ್ಗಕ್ಕೆ ತರುತಲಿದ್ದನು. ಮೂರ್ಖ ರಾದ ಕೆಲವರನ್ನು ಮಾತ್ರ ಕೆಲಸದಿಂದ ತೆಗೆದುಹಾಕಬೇಕಾಯಿತು, ಈ ಪ್ರಕಾರ ವಾಗಿ ಕರ್ನಲ್ ಮೆಕಾಲೆದೊರೆಯ ಮೇಲ್ವಿಚಾರಣೆಯಿಂದ ರಾಜ್ಯ ಕಾರ್ಯಗಳು ಕ್ರಮವಾಗಿ ನಡೆಯಲಾರಂಭಿಸಿದವು. ಪೂರ್ವದ ಮಂತ್ರಿಯಾದ ಉಮನಿತಾಂಬೀಯನ್ನು ಕೆಲಸದಿಂದ ತೆಗೆದು ರಾಣಿಯು ರೆಸಿಡೆಂಟನನ್ನು ಆ ಕೆಲಸಕ್ಕೆ ನಿಯಮಿಸಿದುದರಿಂದ ಅವನು ಮೆಕಾಲೆ ಯನ್ನು ಬಹಳವಾಗಿ ದ್ವೇಷಿಸುತಲಿದ್ದನು. ಒಂದು ಸಮಯದಲ್ಲಿ ಆತನು ಕರ್ನಲ್ ದೊರೆಯನ್ನು ವಿಷಪ್ರಯೋಗದಿಂದ ಕೊಲ್ಲಲು ಯತ್ನಿಸಿದನು. ಈ ವಿಷಯವನ್ನು ರಾಣಿಯು ತಿಳಿದು ಕ್ರಮವಾಗಿ ವಿಚಾರಣೆಯನ್ನು ಮಾಡಿ, ಸಾಕ್ಷಿಗಳಿಂದಲೂ ಆತನು ಅಪರಾಧಿಯೆಂದು ಸ್ಥಿರವಾದ ಬಳಿಕ ಅವನನ್ನು ಚಿಂಗಲಪೇಟೆಯಲ್ಲಿರುವ ಕಾರಾಗೃಹದಲ್ಲಿ ಇಡಿಸಿದಳು. ಆತನು ಅಲ್ಲಿಯೇ ಮೃತನಾದನು. ಅನಂತರ ರಾಣಿಯು ವಸೂಲು ಲೆಕ್ಕಗಳನ್ನು ವಿಚಾರಿಸಲು ಆದಾಯ ವೆಷ್ಟೋ ವ್ಯಯವೆಷ್ಟೋ ತಿಳಿದುಕೊಳ್ಳುವುದು ಕಷ್ಟವಾಗಿ ತೋರಿತು. ಈ ಕಷ್ಟ. ತರವಾದ ಲೆಕ್ಕಗಳನ್ನು ತಿರಿಗಿಸಿ ತಿರಿಗಿಸಿ ನೋಡಲಾಗಿ ಈಸ್ಟಿಂಡಿಯಾ ಕಂಪೆನಿ ಯವರಿಗೂ, ಟಿನವೆಲ್ಲಿ, ಕೋಲಾರ, ಕೊಚ್ಚಿ, ಬೊಂಬಾಯಿ, ಮೊದಲಾದ ಸ್ಥಳ ಗಳಲ್ಲಿರುವ ಸಾಹುಕಾರರಿಗೂ ಕೊಡಬೇಕಾದ ಸಾಲವು, ಸಂಸ್ಥಾನದ ವರ್ಷಾ ದಾಯಕ್ಕೆ ಸಮನಾಗಿರುವುದೆಂದು ತಿಳಿಯಬಂತು. ರಾಣಿಯು ಇಂತಹ ದೊಡ್ಡ ಸಾಲವು ತೀರುವ ಬಗೆ ಹೇಗೆ ಎಂದು ಚಿಂತಿಸುತಿರಲು, ಪೂರ್ವದ ಮಂತ್ರಿಯು “ ದೇವಸ್ಥಾನಗಳಲ್ಲಿ ಬಹು ದ್ರವ್ಯವಿದ್ದರೂ ದೇವರಿಗೆ ಪೂಜೆ, ಅರ್ಚನೆ ಮೊದಲಾ. ದುವು ಸರಿಯಾಗಿ ನಡೆಯುವುದಿಲ್ಲ ವೆಂತಲೂ, ಆ ದ್ರವ್ಯವನ್ನು ಸಂಸ್ಥಾನದ ಕಡೆಗೆ ತೆಗೆದುಕೊಂಡು ದೇವಸ್ಥಾನಗಳ ಉತ್ಸವಗಳನ್ನು ಕ್ರಮವಾಗಿ ನಡೆಸಬೇಕೆಂತಲೂ