ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಬಲಾ ಸಚ್ಚರಿತ್ರ ರತ್ನ ಮಾಲೆ. ಬಾಲ್ಯವಿವಾಹಗಳ ದೆಸೆಯಿಂದ ನಮ್ಮ ದೇಶಕ್ಕೆ ಉಂಟಾಗಿರುವ ನಷ್ಟಗಳು ಬಹುಮಟ್ಟಿಗೆ ಕಡಮೆಯಾಗುವುವಲ್ಲವೆ ! - ಧೀಮತಿಯಾದ ರಾಣಿಯು ಕೋಯಿಲತಂಬೂರಾನನ ಸಹಾಯದಿಂದ, ತನ್ನ ಗ್ರಂಥವನ್ನು ಉತ್ಸಾಹದೊಡನೆ ಶೀಘ್ರವಾಗಿ ಬರೆಯುತ್ತ, ಮಧ್ಯೆ ಮಧ್ಯೆ ಅದನ್ನು ಮೆಕಾಲೆದೊರೆಗೆ ತೋರಿಸಿ ಆತನ ಸಮ್ಮತಿಯನ್ನು ಪಡೆಯುತ್ತ, ಆ ಗ್ರಂಧವನ್ನು ಸಂಪೂರ್ಣಮಾಡಿ ಅದಕ್ಕೆ ' ಸತ್ತಾವರ್ಧಕ' ಎಂದು ಹೆಸರನ್ನು ಇಟ್ಟಳು. ೧೮೧೨ ನೆಯ ಇಸವಿಯ ಮೊದಲ್ಗೊಂಡು ರಾಜ್ಯದ ಸರ್ವ ವ್ಯಾಪಾರ ಗಳೂ ಈ ಸತ್ತಾವರ್ಧಕವನ್ನು ಅನುಸರಿಸಿ ನಡೆಯುತಲಿತ್ತು. ರಾಜ್ಯದಲ್ಲಿ ಅನೇಕ ನ್ಯಾಯಸ್ಥಾನಗಳು ಸ್ಥಾಪಿಸಲ್ಪಟ್ಟವು, ಅವುಗಳಲ್ಲಿ ಸಂಸ್ಕೃತ, ಮಳೆಯಾಳ, ಇಂಗ್ಲೀಷು ಭಾಷೆಗಳಲ್ಲಿ ಪ್ರವೀಣರಾದವರನ್ನು ನ್ಯಾಯಾಧಿಕಾರಿಗಳನ್ನಾಗಿ ನಿಯ ಮಿಸಿದಳು, ಕೋಚೀ' ನಿವಾಸಸ್ಥನಾಗಿ, ಪಂಡಿತೋತ್ತಮನೆನಿಸಿದ ರಾರ್ಮ ಮಾರ್ನ ಎಂಬಾತನನ್ನು ಮುಖ್ಯನ್ಯಾಯ ಸಭೆಯಲ್ಲಿ ನ್ಯಾಯಾಧೀಶನನ್ನಾಗಿ ನಿಯಮಿಸಿದಳು, ಅನಂತರ ಆಕೆಯು ಒಂದು ಶಾಸನವನ್ನು ನಿರ್ಮಿಸಿ ಗುಲಾ ಮರ ವ್ಯಾಪಾರವನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಳು. ಪ್ರಜೆಗಳಿಗೆ ಕಷ್ಟವಾದ ಕಂದಾಯವನ್ನು ಕಡಮೆ ಮಾಡಿ, ಉಪ್ಪಿನ ವ್ಯಾಪಾರವನ್ನು ವೃದ್ದಿ ಮಾಡಿದಳು. ಹೀಗೆ ರಾಜ್ಯವು ದಿನೆದಿನೆ ಅಭಿವೃದ್ಧಿಯನ್ನು ಪಡೆಯುತಲಿತ್ತು. - ರಾಣಿ ಲಕ್ಷ್ಮೀಬಾಯಿಯು ಪದ್ಮನಾಭಸ್ವಾಮಿಯಲ್ಲಿ ವಿಶೇಷ ಭಕ್ತಿಯುಳ್ಳ ವಳಾಗಿದ್ದಳು. ವಂಶಪರಂಪರೆಯಾಗಿ ನಡೆದುಬರುತಲಿದ್ದವುಗಳಿಗಿಂತಲೂ ಹೆಚ್ಚಾದ ದಾನಧರ್ಮಗಳನ್ನು ಮಾಡಬೇಕೆಂದು ಪ್ರಯತ್ನ ಮಾಡುತಲಿದ್ದಳು. ಆದರೆ ದಿವಾನನಾಗಿರುವ ಮೆಕಾಲೆಯು ಆಂಗೇಯನಾದುದರಿಂದ ದಾನಧರ್ಮ ಗಳ, ಅನ್ನಸತ್ರಗಳ ವೆಚ್ಚವೆಲ್ಲವೂ ವ್ಯರ್ಥವೆಂದು ಎಣಿಸುತಲಿದ್ದನು. ಆದಕಾರಣ ಧರ್ಮಸಂಬಂಧವಾದ ಕಾರ್ಯಗಳಲ್ಲಿ ಮೆಕಾಲೆಯು ಉದಾಸೀನನಾಗಿದ್ದನು. ಇದರಿಂದ ರಾಜ್ಯದ ಧರ್ಮಾದಾಯ ವಿಷಯದಲ್ಲಿ ಬಹು ಅವ್ಯವಸ್ಥೆಯು ನಡೆ ಯುತಲಿತ್ತು, ಪ್ರಜೆಗಳಿಗೂ ಯಾತ್ರಿಕರಿಗೂ ಕಷ್ಟವು ಉಂಟಾಗುತಲಿತ್ತು. ಒಂದು ದಿನ ರಾಮೇಶ್ವರಕ್ಕೆ ಹೋಗುವ ಕೆಲ ಯಾತ್ರಿಕರು ರಾಣಿಯ ಸವಿಾಪಕ್ಕೆ ಬಂದು ತಮಗೆ ಅನ್ನಪಾನಗಳು ಸಿಕ್ಕುವುದಿಲ್ಲವೆಂತಲೂ, ಇದನ್ನು ಕುರಿತು ದಿವಾನರು ಉದಾಸೀನರಾಗಿರುವರೆಂತಲೂ ಹೇಳಿಕೊಂಡರು. ರಾಣಿಯು ಅವರಿಗೆ ಸ್ವಲ್ಪ ದ್ರವ್ಯವನ್ನು ಕೊಟ್ಟು ಕಳುಹಿಸಿ : “ ದಿವಿ ೧೯ ಎಡವಂ ಮಲಬಾರೀವರ್ಷಗಳು ೯೮೬. ” “ ನನಗೆ ಜೇಷ್ಠ ಸೋದರ ಸಮಾನರಾದ ಕರ್ನಲು ದೊರೆಯವರಿಗೆ--ನೀವು ಸಕಲಕಾರ್ಯಗಳನ್ನು ವಿಚಕ್ಷಣೆಯಿಂದ ನೆರವೇರಿಸುತಲಿರುವುದರಿಂದಲೂ,