ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಳೇಗಾರೀ ಲಕ್ಷ್ಮಿಬಾಯಿ. ೪೯. ನಿಮಗೆ ದೇಶದ ಮರ್ಯಾದೆಯೂ ಸ್ಥಿತಿಯೂ ಆಚಾರವೂ ರೂಢಿಯೂ ಸಂಪೂರ್ಣ ವಾಗಿ ತಿಳಿದಿರುವುದರಿಂದಲೂ, ಅವುಗಳನ್ನು ಕುರಿತು ನಾನು ನಿಮಗೆ ಬರೆಯ ತಕ್ಕ ಅವಶ್ಯಕತೆಯು ಇಲ್ಲ. ನಮ್ಮ ಪೂರ್ವಿಕರು ನಿಯಮಿಸಿರುವ ಪದ್ದತಿಗಳೂ, ದಾನಧರ್ಮಗಳೂ, ಆಚಾರವ್ಯವಹಾರಗಳೂ, ಅವರ ದಯಾಗುಣವನ್ನು ತೋರಿಸತಕ್ಕವುಗಳಾಗಿಯೂ, ಪ್ರಜೆಗಳಿಗೆ ಹಿತಕರಗಳಾಗಿಯೂ ಇರುವುದರಿಂದ ಅವುಗಳನ್ನು ನೀವು ತಪ್ಪದೆ ನಡೆಸಬೇಕೆಂಬುದು ನನ್ನ ಬಿನ್ನಹ. ರಾಮೇಶ್ವರಕ್ಕೆ ಹೋಗುವ ಯಾತ್ರಿಕರಿಗೆ ಅನ್ನಪಾನಗಳೂ ದಕ್ಷಿಣೆಯೂ ಸಿಕ್ಕುವುದಿಲ್ಲ ಎಂಬ ಮೊರೆಯು ನನಗೆ ಶ್ರುತವಾಯಿತು. ಈ ವಿಷಯದಲ್ಲಿ ನೀವು ತಕ್ಕ ಏರ್ಪಾಟು ಗಳನ್ನು ಮಾಡುವಿರೆಂದು ನಂಬುತ್ತೇನೆ. ಮಹಾಸಿಂಗು ಕಿಲ್ಲಾದಾರನಿಗೆ ಸಹ ಈ ವಿಷಯವನ್ನು ಸರಿಮಾಡುವಂತೆ ಆಜ್ಞೆಯನ್ನು ಕಳುಹಿಸಿದೇನೆ. ಉತ್ತರ ಪ್ರತ್ಯುತ್ತರಗಳಿಂದ ಕಾರ್ಯಗಳು ಕ್ಷಿಪ್ರದಲ್ಲಿ ನೆರವೇರುತ್ತವೆ. ನಾನು ಸ್ತ್ರೀಯಾದುದರಿಂದ ನಿಮ್ಮನ್ನು ಭ್ರಾತೃವೆಂದು ನಂಬಿ ರಾಜ್ಯದ ಸರ್ವಕಾರ್ಯ ಗಳನ್ನೂ ವಿಶ್ವಾಸದೊಡನೆ ನಿಮಗೆ ಸಮರ್ಪಿಸಿದೆನು. ಆದುದರಿಂದ ರಾಜ್ಯದಲ್ಲಿ ನಡೆಯಬೇಕಾದ ದಾನಧರ್ಮಗಳ ವಿಷಯದಲ್ಲಿಯೂ ನನ್ನ ಮಾತನ್ನು ಸನ್ಮಾನಿಸಿ, ಪ್ರಜೆಗಳನ್ನು ಸುಖಿಗಳನ್ನಾಗಿ ಮಾಡುವಿರಿ ಎಂತಲೂ ನಂಬುತ್ತೇನೆ.-(ರುಜು) ಲಕ್ಷ್ಮೀಬಾಯಿ,” ಎಂದು ಮೆಕಾಲೆಗೆ ಬರೆದು ಕಳುಹಿಸಿದಳು. ರಾಣಿಯು ತಾನು ನಂಬಿದ್ದ ಧರ್ಮವನ್ನು ಪಾಲಿಸುವುದರಲ್ಲಿ ಎಷ್ಟು ತತ್ಪರ ಳಾಗಿದ್ದಳೋ, ಪ್ರಸಂಗೋಚಿತವಾಗಿ ಆ೦ಗ್ಲೀಯರಲ್ಲಿ ಸಹಸ್ವತೇಜೋ ಬಲವನ್ನು ನಿರ್ಭಯವಾಗಿ ಹೇಗೆ ಪ್ರಕಟಿಸುತಲಿದ್ದಳೋ ಆ ಸಂಗತಿಯನ್ನು ಈ ಲೇಖನದಿಂದ ತಿಳಿಯಬಹುದು. ಶುಕ್ಲಪಕ್ಷದ ಚಂದ್ರನಂತೆ ತಿರುವಾಂಕೂರು ರಾಜ್ಯವು ದಿನೆದಿನೆ ಅಭಿವೃದ್ದಿ ಯನ್ನು ಹೊಂದುತಿರಲು ೧೮೧೩ ನೆ ಇಸವಿಯಲ್ಲಿ ಲಕ್ಷ್ಮಿಬಾಯಿಗೆ ಪುತ್ರನು ಜನ್ನಿಸಿದನು. ಸಿಂಹಾಸನಕ್ಕೆ ಅಧಿಪತಿಯು ಜನ್ನಿಸಿದುದರಿಂದ ರಾಜ್ಯದಲ್ಲೆಲ್ಲ ದೊಡ್ಡ ಉತ್ಸವವು ನಡೆಯಿತು. ಪ್ರತಿಗೃಹದಲ್ಲಿಯೂ ಹಬ್ಬವನ್ನು ಮಾಡಿಕೊಂಡರು. ಹನ್ನೆರಡನೆಯ ದಿವಸ ನಾಮಕರಣ ಮಹೋತ್ಸವವನ್ನು ಬೆಳಸಿ, “ರಾಮವರ್ಮ ಮಹಾರಾಜ' ನೆಂದು ಹೆಸರಿಟ್ಟರು, ಹಿಂದೂ ಧರ್ಮಶಾಸ್ತ್ರ ಪ್ರಕಾರವಾಗಿ ಇನ್ನು ಮೇಲೆ ಈ ಶಿಶುವೇ ರಾಜ್ಯಕ್ಕೆ ಒಡೆಯನೆಂದು ಪ್ರಸಿದ್ಧ ಪಡಿಸಿದರು. ಅನಂತರ ೧೮೧೪ ನೆಯ ಇಸವಿಯಲ್ಲಿ ಒಂದು ಶುಭಮುಹೂರ್ತದಲ್ಲಿ ರಾಜ್ಯಾಭಿಷೇಕ ಮಹೋತ್ಸವವನ್ನು ಮಾಡಿದರು. ದೇಶಾಚಾರವನ್ನನುಸರಿಸಿ ಆ ದಿವಸ ರಾಜಗೃಹ ದಲ್ಲಿ ಒಂದು ದೊಡ್ಡ ದರ್ಬಾರು ನಡೆಯಿತು. ರಾಣಿಯು ಶಿಶುವನ್ನು ಉತ್ತಮ ವಸ್ತಭೂಷಣಗಳಿಂದ ಅಲಂಕರಿಸಿ, ತಾನೂ ಸಹ ಅಲಂಕೃತಳಾಗಿ ಬಾಲರಾಜನನ್ನು