ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿಕಂದರ್* ಬೇಗನ. ೫೫ ಯನ್ನು ಗುಣವಂತನನ್ನಾಗಿ ಮಾಡುವುದು ದುಸ್ತರವೆಂದು ಎಣಿಸಿ, ಕಲಹವನ್ನು ನಿಲ್ಲಿಸುವುದಕ್ಕೋಸ್ಕರ ತಾನು ತಾಯಿಯ ಬಳಿಯಲ್ಲಿ ಇರುತಿದ್ದಳು. ಜಹಂಗೀರನು ಒಂಭತ್ತು ವರ್ಷಗಳು ಮಾತ್ರವೇ ರಾಜ್ಯವನ್ನು ಆಳಿ ೧೮೪೭ ನೆಯ ಇಸವಿಯಲ್ಲಿ ಕಾಲವಾದನು. ಜಹಂಗೀರನಿಗೆ ಶಿಕಂದರ್‌ ಬೇಗನಳಲ್ಲಿ ಜನಿಸಿದ ಷಹಜಹಾನ್ ಎಂಬ ಒಂದು ಹೆಣ್ಣು ಮಗುವೂ, ದಸ್ತಗೀರ್ ಎಂಬ ಒಬ್ಬ ದಾಸೀಪುತ್ರನೂ ಇದ್ದರು. “ ದಾಸೀಪುತ್ರನಿಗೆ ರಾಜ್ಯವನ್ನು ಕೊಡಬೇಕು” ಎಂದು ಜಹಂಗೀರನು ಮರಣಶಾಸನದಲ್ಲಿ ಬರೆದಿದ್ದನು. ಆದರೆ ಆ ಮರಣಶಾಸನವನ್ನು ಯಾರೂ ಒಪ್ಪಿಕೊಳ್ಳಲಿಲ್ಲ. ಷಹಜಹಾನಳೇ ರಾಜ್ಯಕ್ಕೆ ಒಡತಿಎಂತಲೂ ಆಕೆಯು ದೊಡ್ಡವಳಾಗುವವರೆಗೂ ಶಿಕಂದರ್‌ ಬೇಗಮ್ ರಾಜ್ಯವನ್ನು ಪಾಲಿಸ ಬೇಕೆಂತಲೂ ಕಂಪೆನಿಯವರು ನಿರ್ಣಯಿಸಿದರು. ಶಿಕಂದರ್‌ ಬೇಗನಳು ಬುದ್ದಿ ಕೌಶಲ್ಯವುಳ್ಳ ವಳೆಂದು ಖ್ಯಾತಿಯನ್ನು ಪಡೆ ದಿದ್ದಳು. ಆದ್ದರಿಂದ ಈಕೆಯು ರಾಜ್ಯಭಾರವನ್ನು ವಹಿಸುವಳೆಂದು ಕೇಳಿ ಪ್ರಜೆ ಗಳು ಆನಂದವುಳ್ಳವರಾದರು. ಈಕೆಯು ಸಿಂಹಾಸನಾರೂಢಳಾದ ಕೂಡಲೆ ರಾಜ್ಯದಲ್ಲೆಲ್ಲ ಅನೇಕ ಮಹೋತ್ಸವಗಳು ನಡೆದವು. ಈಕೆಯು ರಾಜ್ಯಭಾರವನ್ನು ವಹಿಸಿದ ಆರು ವರುಷಗಳೊಳಗೆ ಸಂಸ್ಥಾನದ ಸಾಲವನ್ನೆಲ್ಲ ತೀರಿಸಿದಳು, ಗ್ರಾಮಗಳು, ತಹಸೀಲುಗಳು, ಮೊದಲಾದವುಗಳನ್ನು ಗುತ್ತಿಗೆಗೆ ಕೊಡುವ ಪದ್ದತಿಯನ್ನು ತ್ಯಜಿಸಿ, ಸ್ವಂತವಾಗಿ ಗ್ರಾಮಾಧಿಕಾರಿಗಳಿಂದ ಕಂದಾಯಗಳನ್ನು ವಸೂಲು ಮಾಡುತಲಿದ್ದಳು. ಕೆಲವು ಪದಾರ್ಥಗಳನ್ನು ವರ್ತಕರಲ್ಲಿ ಕೆಲವರು ಮಾತ್ರವೇ ಮಾರಬೇಕು ಎಂಬ ನಿರ್ಬಂಧವಿತ್ತು. ಇಂತಹ ನಿರ್ಬಂಧವು ಇದ್ದರೆ, ವ್ಯಾಪಾರದ ಅಭಿವೃದ್ಧಿಗೆ ಆಟಂಕ ಉಂಟಾಗುವುದು ಎಂದು ತಿಳಿದು ವ್ಯಾಪಾರಗಾರರೆಲ್ಲರು ಸಕಲ ಪದಾರ್ಥಗಳನ್ನೂ ಮಾರಬಹುದು ಎಂದು ಅಪ್ಪಣೆಯನ್ನು ಕೊಟ್ಟಳು. ಟಂಕ ಶಾಲೆಯನ್ನು ತಾನೇ ಸ್ವಂತವಾಗಿ ನೋಡಿ ಕೊಳ್ಳುತಲಿದ್ದಳು. ರಾಜ್ಯವನ್ನು ದುಷ್ಟರಿಂದ ಕಾಪಾಡುವುದಕ್ಕಾಗಿ ರಕ್ಷಕ ಭಟ ರನ್ನು ನಿಯಮಿಸಿದಳು. ಆಕೆಯು ಧೈರ್ಯದಿಂದಲೂ, ನಿರಂತರ ಪ್ರಯತ್ನ ದಿಂದಲೂ ರಾಜ್ಯವು ಒಳ್ಳೆಯ ಸ್ಥಿತಿಯನ್ನು ಹೊಂದುವುದಕ್ಕೆ ಬೇಕಾದ ಅನೇಕ ಸಂಸ್ಕರಣೆಗಳನ್ನು ಮಾಡಿದಳು. ರಾಜನ್ ದುಧುಕ್ಷಸಿಯದಿಕ್ಷಿತಿಧೇನುಮೇ ನಾಂ ತೇನಾದ್ಯವತ್ಮಿವ ಲೋಕಮಮು೦ಪುಷಾಣ | ಯಸ್ಮಿಂಶ್ಚ ಸಮ್ಮೇಗನಿಶಂ ಪರಿಪುಷ್ಯಮಾಣೇ ನಾನಾಫಲಂ ಫಲತಿಕಲ್ಪಲತೇವಭೂಮಿಃ ||