ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಬ ಅಬಲಾ ಸಚ್ಚರಿತ್ರ ರತ್ನ ಮಾಲೆ. ಎಂದು ಭರ್ತೃಹರಿಯು ಹೇಳಿರುವ ಶ್ಲೋಕದಲ್ಲಿರುವಂತೆ, ಈಕೆಯು ಪ್ರಜೆಗಳನ್ನು ವಾತ್ಸಲ್ಯದೊಡನೆ ನೋಡುತಲಿದ್ದುದರಿಂದ ರಾಜ್ಯವು ಸುಭಿಕ್ಷವಾಗಿದ್ದಿತು. ಸಕಲ ಪ್ರಜೆಗಳೂ ಸಂತೋಷದಿಂದ ನಮ್ಮ ಪುರಾಕೃತ ಪುಣ್ಯದಿಂದ ಶಿಕಂದರು ಬೇಗನಳು ನಮಗೆ ರಾಣಿಯಾದಳು, ' ಎಂದು ನುಡಿಯುತಲಿದ್ದರು. ಬೇಗನಳು ಮಹಮ್ಮದೀಯಳಾದರೂ ಹಿಂದುಗಳಲ್ಲಿ ದಯಾಮಯಳಾಗಿ ದೃಳು, ತನ್ನ ಜನರಿಂದ ಹಿಂದುಗಳಿಗೆ ಯಾವ ಅಪಾಯವೂ ಉಂಟಾಗದಂತೆ ಕಾಪಾಡುತಲಿದ್ದಳು. ಹಿಂದುಗಳನ್ನು ಕಂಡರೆ ನಿಷ್ಕರುಣೆಯಿಂದ ಅವರನ್ನು ಹಿಂಸಿ ಸುವ ಮಹಮ್ಮದೀಯ ಕುಲದಲ್ಲಿ ಜನಿಸಿದವಳಾದರೂ ಬೇಗನಳಲ್ಲಿ ಈ ಸಮತ್ವ ಗುಣವು ಇದ್ದುದು ಪ್ರಶಂಸನೀಯವಾದುದು. ಅಕ್ಷರಬಾದಷಹನ ಅನಂತರ ರಾಜ್ಯವನ್ನು ಪಾಲಿಸಿದ ಮಹಮ್ಮದೀಯರಲ್ಲಿ ಈಕೆಯು ಉತ್ತಮ ಪ್ರಭಿ ಎಂದು ಹೇಳಬಹುದು. ಅಕ್ಷರನಲ್ಲಿದ್ದ ಅನೇಕ ಸದ್ದು ಣಗಳು ಈಕೆಯಲ್ಲಿ ವಾಸಮಾಡುತ ಲಿದ್ದವು. ಕಂಪೆನಿಯವರ ಪ್ರಭುತ್ವದಲ್ಲಿರುವ ಅನೇಕ ದೊಡ್ಡ ಅಧಿಕಾರಿಗಳು, ಈಕೆಯ ರಾಜ್ಯ ವ್ಯವಸ್ಥೆಯನ್ನು ನೋಡಿ ಆಶ್ಚರ್ಯಪಡುತಲಿದ್ದರು. ಈಕೆಯ ಮಗಳಾದ ಷಹಜಹಾನ್ ಬೇಗಮಳಿಗೆ ಹದಿನೈದು ವರುಷಗಳು ತುಂಬಿದ ಮೇಲೆ, ಆಕೆಯನ್ನು ಬಕ್ಷೀಬಾಕರ ಮಹಮ್ಮದ್ ಖಾನ್ ಎಂಬಾತನಿಗೆ ಕೊಟ್ಟು ಮದುವೆಯನ್ನು ಮಾಡಿದಳು. ಆಗ್ಯ ಶಿಕಂದರು ಬೇಗಮಳು ಮಗಳಿಗೆ ರಾಜ್ಯವನ್ನು ಕೊಡಲು ಇನ್ನು ಮೂರು ವರ್ಷಗಳು ಉಳಿದಿದ್ದವು. ಬೇಗಮಳ ಮನಸ್ಸಿನಲ್ಲಿ ಮಾತ್ರ ಅಂತ್ಯಕಾಲದವರೆಗೂ ರಾಜ್ಯವನ್ನು ಆಳಬೇಕು ಎಂಬ ಕೋರಿಕೆಯು ಇತ್ತು. ಉತ್ತರಹಿಂದೂದೇಶದಲ್ಲಿ ೧೮೫೭ ನೆಯ ಇಸವಿಯಲ್ಲಿ ನಡೆದ ಸಿಪಾಯಿ ಕಲಹದಲ್ಲಿ ಇಂಗ್ಲೀಷರಿಗೆ ದೊಡ್ಡ ವಿಪತ್ತು ಸಂಭವಿಸಿತು ಎಂಬುದನ್ನು ಹಿಂದೂ ದೇಶದ ಚರಿತ್ರೆಯನ್ನು ಓದಿದವರಿಗೆಲ್ಲರಿಗೂ ತಿಳಿದಿದೆ. ಇಂತಹ ಸಂಕಟ ಸಮಯ ದಲ್ಲಿ ಉತ್ತರಹಿಂದೂಸ್ಥಾನದಲ್ಲಿ ಸಿಂಧೆ, ಹೋಳಕರರೂ, ಮಧ್ಯ ಹಿಂದೂಸ್ಥಾನದಲ್ಲಿ ಭೂಪಾಲ್ ಬೇಗಮಳೂ, ದಕ್ಷಿಣದಲ್ಲಿ ನೈಜಾಮನೂ ಸಹಾಯಮಾಡಿದುದ ರಿಂದಲೇ ಇಂಗ್ಲೀಷರು ನಮ್ಮ ದೇಶದಲ್ಲಿ ನಿಲ್ಲುವಂತಾಯಿತೆಂದು ಹೇಳಬಹುದು, ನಾವು ಈಗ ಆ೦ಗ್ಗೇಯರ ಪರಿಪಾಲನೆಯಲ್ಲಿ ಅನುಭವಿಸುತಲಿರುವ ಸಕಲ ಸುಖ ಗಳಿಗೂ ಶಿಕಂದರು ಬೇಗನಳು ಅಂಶತಃಕಾರಣ ಭೂತಳೆಂದು ಹೇಳಬೇಕು. ಭೂಪಾಲ್ ರಾಜ್ಯದಲ್ಲಿ ಅನೇಕ ಜನರೂ, ಶಿಕಂದರ್ ಬೇಗಮಿನ ತಾಯಿಯೂ, ಆಂಗ್ಲಯರೊಡನೆ ಕಲಹಕ್ಕೆ ಸಿದ್ದರಾದರು. ಆಗ ಬೇಗಮಳು ಆ೦ಗ್ಗೇಯರನ್ನು ಮೃತ್ಯಮುಖದಲ್ಲಿ ಬೀಳದಂತೆ ಅತಿ ಪ್ರಯಾಸದಿಂದ 'ಹುಷಂಗಾಬಾದ್