ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿಕಂದರ್ ಬೇಗಮಕ್, ಪಟ್ಟಣವನ್ನು ಸೇರಿಸಿದಳು, ಆ ಸಮಯದಲ್ಲಿ ಈಕೆಯು ತೋರಿದ ಧೈರ್ಯವು ಸ್ತುತ್ಯವಾದುದು, ಎಲ್ಲ ಕಡೆಯಲ್ಲಿಯೂ ಶಾಂತಿಯು ನೆಲಗೊಳ್ಳುವವರೆಗೂ ಈಕೆಯು ಇಂಗ್ಲೀಷರಿಗೆ ಬಹು ವಿಧವಾದ ಸಹಾಯವನ್ನು ಮಾಡಿದಳು. ಇಂಗ್ಲೀಷರು ಬೇಗನಳು ಮಾಡಿದ ಉಪಕಾರದಿಂದ ಕೃತಜ್ಞರಾಗಿ, ತತ್ತ್ವ ರ್ವದಲ್ಲಿ ಆಕೆಯಿಂದ ತೆಗೆದುಕೊಂಡಿದ್ದ ಭೈರಪ್ರಾಂತವನ್ನು ಪುನಹ ಆಕೆಗೆ ಕೊಟ್ಟರು, ಮತ್ತು ೧೮೫೯ ನೆಯ ಇಸವಿಯಲ್ಲಿ ಶಿಕಂದರುಬೇಗನಳೇ ಭೂಪಾಲ ಸಂಸ್ಥಾನಕ್ಕೆ ಸ್ವಾಮಿನಿಯೆಂತಲೂ, ಮರಣ ಪರ್ಯ೦ತರವೂ ಈಕೆಯೇ ರಾಜ್ಯ ವನ್ನೂ ಪಾಲಿಸಬೇಕೆಂತಲೂ, ಅನಂತರ ಷಹಜಹಾನಳಿಗೆ ರಾಜ್ಯವನ್ನು ಕೊಡುವೆ ವೆಂತಲೂ ತಿಳಿಯಪಡಿಸಿದರು. ಇದರಿಂದ ಶಿಕಂದರ್ ಬೇಗಮಳ ಅಭೀಷ್ಟವು ನೆರವೇರಿತು. ಇಂಗ್ಲೀಷರು ಬೇಗಮಳಿಗೆ ನಾಲ್ಕು ತೋಪುಗಳನ್ನು ಬಹುಮಾನ ವಾಗಿ ಕೊಟ್ಟು ಸನ್ಮಾನವನ್ನು ಮಾಡಿದರು. ಶಿಕಂದರು ಬೇಗನಳು ಐಹಿಕ ಸುಖಗಳನ್ನು ಅನಂತವಾಗಿ ಅನುಭವಿಸುತ ಲಿದ್ದರೂ, ದೇವರನ್ನು ಮರೆಯದೆ ತಮ್ಮ ಶಾಸ್ತ್ರ ಪ್ರಕಾರವಾಗಿ ಪ್ರತಿನಿತ್ಯವೂ ಮೂರು ಕಾಲಗಳಲ್ಲಿ ಈಶ್ವರ ಪ್ರಾರ್ಥನೆಯನ್ನು ಮಾಡುತಲಿದ್ದಳು, ಈಕೆಯು ಬಡವರಲ್ಲಿ ವಿಶೇಷ ಕರುಣೆಯುಳ್ಳವಳಾಗಿ ಅವರ ಕಷ್ಟ ನಿವಾರಣೆಗಾಗಿ ಬಹಳ ದ್ರವ್ಯವನ್ನು ಸಹಾಯಮಾಡುತಲಿದ್ದಳು. ೧೮೬೩ ನೆಯ ಇಸವಿಯಲ್ಲಿ ರಾಜ್ಯವನ್ನು ತನ್ನ ಮಗಳಿಗೆ ಒಪ್ಪಿಸಿ, ರಾಜ್ಯವನ್ನು ಕಾಪಾಡಬೇಕು,” ಎಂದು ಆ೦ಗ್ಲೆಯ ಪ್ರಭುಗಳಿಗೆ ಬಿನ್ನವಿಸಿ, ತಾನು ಮಕ್ಕಾ ಯಾತ್ರೆಗೆ ಹೊರಟಳು, ಈಕೆಯು ಹೋದ ಸ್ಥಳಗಳ ಲೆಲ್ಲ ಬಡವರಿಗೆ ಅನೇಕ ದಾನಧರ್ಮಗಳನ್ನು ಮಾಡಿ ದಾನಶೂರಳೆಂದು ಖ್ಯಾತಿ ಯನ್ನು ಪಡೆದಳು, ಈಕೆಯು ಪುನಹ ತನ್ನ ರಾಜ್ಯಕ್ಕೆ ಬಂದು ಪರಮಾರ್ಥ ವಿಚಾರದಲ್ಲಿ ಸುಖವಾಗಿ ಕಾಲವನ್ನು ಕಳೆದು ೧೮.೮ ನೆಯ ಇಸವಿ, ಅಕ್ಟೋಬರ್ ತಿಂಗಳು, ೨೦ ನೆಯ ತಾರೀಖಿನಲ್ಲಿ ಪರಲೋಕಕ್ಕೆ ಹೋದಳು. ಈಕೆಯ ಪುತ್ರಿಯಾದ ಷಹಜಹಾನ್ ಬೆ ಗವಳು ತಾಯಿಯಂತೆಯೇ ಇಂಗ್ಲೀಷರಲ್ಲಿ ರಾಜನಿಷ್ಠೆಯುಳ್ಳವಳಾಗಿ ರಾಜ್ಯವನ್ನ ನ್ಯಾಯದಿಂದ ಪಾಲಿಸುತ ಲಿರುವಳು, ಇಂಗ್ಲೀಷರು ಈಕೆಯ ಸದ್ಗುಣಗಳಿಂದ ಸಂತುಷ್ಟರಾಗಿ, ಈಕೆಗೆ ಜಿ. ಸಿ. ಎಸ್. ಐ. ಎಂಬ ಬಿರುದನ್ನು ದಯಪಾಲಿಸಿರುವರು ಲಾರ್ ಲ್ಯಾಂಡ್ಸ್‌ಡೌನ್‌ ಯವರು ನಮ್ಮ ದೇಶಕ್ಕೆ ರಾಜಪ್ರತಿನಿಧಿಗಳಾಗಿದ್ದ ಕಾಲದಲ್ಲಿ, ಭೂಪಾಲ ಸಂಸ್ಥಾನಕ್ಕೆ ಹೋಗಿ, ಅಲ್ಲಿನ ಆಡಳಿತದ ಸ್ಥಿತಿಯನ್ನು ನೋಡಿ ಸಂತೃಪ್ತರಾಗಿ, ಆ ಸಂಸ್ಥಾನವನ್ನು ಕುರಿತು, “ ಭೂಪಾಲ ಸಂಸ್ಥಾನಾ ಧೀಶ್ವರರು ರಾಜಭಕ್ತಿಯಲ್ಲಿಯೂ, ಔದಾರ್ಯದಲ್ಲಿಯೂ ಪ್ರಖ್ಯಾತಿಯನ್ನು