ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

! ರ ಅಬಲಾ ಸಚ್ಚರಿತ್ರ ರತ್ನ ಮಾಲೆ. ಹೊಂದಿದಾರೆ, ಈಗಿನ ಸಂಸ್ಥಾನಾಧೀಶ್ವರಿಯಾದ ಶಿಕಂದರ್ ಬೇಗಮುಳು, ೧೮೫೭ ನೆಯ ಇಸವಿಯಲ್ಲಿ ಬ್ರಿಟಿಷರಿಗೆ ಮಾಡಿದ ಉಪಕಾರವು ಮರೆಯತಕ್ಕದ್ದಲ್ಲ. ಈಗಿನ ಬೇಗಮಳು ತಾಯಿಯಿಂದ ರಾಜ್ಯವನ್ನು ಗ್ರಹಿಸಿದಂತೆ ಆಕೆಯ ಸದ್ದು ಣಗಳನ್ನೂ ಸಹ ಗ್ರಹಿಸಿದಾಳೆ. ಈಕೆಯು ತನ್ನ ರಾಜ್ಯದಲ್ಲಿ ರೈಲ್ ಹಾಕುವುದಕ್ಕೆ ಸಹಾಯ ಮಾಡಿದಾಳೆ. ಭೂಪಾಲಿನ ಪ್ರಜೆಗಳ ಉಪಯೋಗಕ್ಕಾಗಿ ಒಳ್ಳೆಯ ನೀರನ್ನು ತರಿಸಿದಾಳೆ. ಲೋಕೋಪಕರವಾದ ಕಾರ್ಯಗಳಿಗಾಗಿ ಈಕೆಯು ಅತ್ಯಂತ ಧನ ವನ್ನು ವ್ಯಯಮಾಡುತಲಿದಾಳೆ. ತಾನು ಕೆಲವು ದಿನಗಳ ಕೆಳಗೆ ಕೊಡುವೆ ನೆಂದು ಹೇಳಿದ್ದ ಸೈನ್ಯವನ್ನು ಬ್ರಿಟಿಷರು ತೆಗೆದುಕೊಳ್ಳಬಹುದು ಎಂತಲೂ ಆ ಸೈನ್ಯ ವನ್ನು ಹಿಂದೂದೇಶದ ರಕ್ಷಣಾರ್ಥವಾಗಿ ಉಪಯೋಗಿಸಬೇಕೆಂತಲೂ ಈಕೆಯು ನಮಗೆ ಈದಿನ ತಿಳಿಯಪಡಿಸಿದಳು,” ಎಂದು ಬರೆದಿದಾರೆ. ಈ ವಂಶಸ್ಥರು ಹೀಗೆಯೇ ಸರ್ತಿಯನ್ನು ಪಡೆಯುತ್ತಿರಲಿ ಎಂದು ಈಶ್ವರ ನನ್ನು ಪ್ರಾರ್ಥಿಸಿ, ಈ ಚರಿತ್ರೆಯನ್ನು ಇಲ್ಲಿಗೆ ಮುಗಿಸುತಲಿದೇನೆ. -11-++(---- ಮೈನಾದಾಯ ಪೋವಾರೀಮ್.

  • ----- --

“ ಸಂಪತ್ತು ಮಹತಾಂ ಚಿತ್ತಂ ಭವೇದುತ್ಸಲ ಕೋಮಲಂ ಆಪತ್ಸು ಚ ಮಹಾ ಶೈಲಶಿಲಾಸಂ ಘಾತಕರ್ಕಶಮ್. ” ಈಕೆಯು ಧಾರಾನಗರ ಸಂಸ್ಥಾನಕ್ಕೆ ಒಡೆಯನಾದ ಆನಂದರಾವ್ ಪೋವಾ ರನ ಧರ್ಮಪತ್ನಿ, ಮಹಾರಾಷ್ಟರಲ್ಲಿ ನಾಮವನ್ನು ಉಚ್ಚರಿಸುವಾಗ ಮನೆಯ ಹೆಸರನ್ನು ವಿಕಲ್ಪವಾಗಿ ಪ್ರಯೋಗಿಸುವರು. ಆದುದರಿಂದ ಮೈನಾಬಾಯಿ ಪೋವಾರು ಎಂದು ಬರೆಯುವುದಕ್ಕೆ ಬದಲಾಗಿ “ ಪೋವಾರೀಣ್ ' ಎಂದು ಬರೆದಿದೇನೆ. ಹಾಗೆಯೇ ಅಹಲ್ಯಾಬಾಯಿ ಹೋಳಕರೀಣ್ ಎಂದು ಸಹ ಬರೆಯಬಹದು. ಮೈನಾಬಾಯಿಯ ಮಾವನಾದ ಖಂಡೇರಾಯನು, ಬಡೋದಾ ಸಂಸ್ಥಾ ನಾಧೀಶ್ವರನಾದ ಗೋವಿಂದರಾವ್ ಗಾಯಕವಾಡನ ಮಗಳನ್ನು ಮದುವೆಯಾ ದನು. ಆಕೆಯು ಗರ್ಭಿಣಿಯಾಗಿರುವ ಕಾಲದಲ್ಲಿಯೇ ಖಂಡೇರಾಯನು