ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫t ಮೈನಾಬಾಯಿ ಪೋವಾರೀಣರ್. ಮೃತನಾದನು. ಆಗ ಆತನ ಪತ್ನಿಯು ರಾಜ್ಯಭಾರವನ್ನೆಲ್ಲ ಮಂತ್ರಿಗೆ ಒಪ್ಪಿಸಿ, ತೌರುಮನೆಗೆ ಹೋಗಿ, ಅಲ್ಲಿ ಪುತ್ರನನ್ನು ಪಡೆದು ಕಾಲವಾದಳು, ಈ ಬಾಲಕನ ಹೆಸರು ಆನಂದರಾವ್. ಈ ಹುಡುಗನು ತನಗೆ ಇಪ್ಪತ್ತು ವರ್ಷಗಳಾದ ಬಳಿಕ ತನ್ನ ರಾಜ್ಯಕ್ಕೆ ಹೋಗಲು, ಅಲ್ಲಿನ ಮಂತ್ರಿಯೇ ಮೊದಲಾದವರು ರಾಜ್ಯಲೋಭ ದಿಂದ ಆತನನ್ನು ಹೊರಡಿಸಲು ಯತ್ನಿಸಿದರು, ಆದರೆ ಮಂತ್ರಾದಿಗಳು ವಿನಹ ರಾಜ್ಯದಲ್ಲಿರುವ ಪ್ರಜೆಗಳೆಲ್ಲರೂ ರಾಜಪಕ್ಷದವರೇ ಆಗಿದ್ದು ದರಿಂದ ಆತನು ಮಂತ್ರಿ ಯನ್ನೂ, ಮಂತ್ರಿಪಕ್ಷದವರನ್ನೂ ಗೆದ್ದು ತನ್ನ ರಾಜ್ಯವನ್ನು ಮರಳಿ ಪಡೆದನು. ಈತನು ರಾಜ್ಯವನ್ನು ಪಾಲಿಸುತಲಿದ್ದ ಕಾಲದಲ್ಲಿ, ರಾಜ್ಯಕ್ಕೆ ಬಹು ಜನರಿಂದ ಅನೇಕ ಸಂಕಟಗಳು ಸಂಭವಿಸಿದವು. ಈ ಕಾರಣದಿಂದ ರಾಜ್ಯವನ್ನು ಕಾಪಾಡಿಕೊಳ್ಳು ವುದು ಬಹು ಕಷ್ಟವಾಗಿತ್ತು. ಈ ಸಂಸ್ಥಾನವನ್ನು ಪೀಡಿಸುವವರಲ್ಲಿ ಶಿಂದೆ, ಹೋಳಕರರು ಪ್ರಮುಖರಾಗಿದ್ದರು. ರಾಜ್ಯವು ಈ ವಿಧವಾಗಿ ಸಂಕಟಗಳಿಗೆ ಒಳಗಾಗಿರುವ ಸಮಯದಲ್ಲಿ, ಆನಂದರಾಯನು ಯಾವುದೋ ಒಂದು ವ್ಯಾಧಿಯ ದೆಸೆಯಿಂದ ಆಕಸ್ಮಿಕವಾಗಿ ಮೃತನಾದನು. ಆಗ ರಾಜ್ಯಭಾರವನ್ನು ಗರ್ಭವತಿ ಯಾದ ಮೈನಾಬಾಯಿಯು ವಹಿಸಬೇಕಾಯಿತು. ಇವರ ವಂಶಸ್ಥನಾದ ಮುರಾ ರಿರಾವ್ ಎಂಬೊಬ್ಬನು, ಈಕೆಯನ್ನು ಧಿಕ್ಕರಿಸಿ, ಅಧಿಕಾರಿಗಳನ್ನು ಲಂಚದಿಂದ ತನ್ನ ವಶಮಾಡಿಕೊಂಡು, ರಾಜ್ಯವನ್ನು ಆಕ್ರಮಿಸಿಕೊಂಡನು. ದೀರ್ಘಾಲೋ ಚನೆಯುಳ್ಳ ಮೈನಾಬಾಯಿಯು ಪ್ರಸವಸಮಯದಲ್ಲಿ ಧಾರಾನಗರದಲ್ಲಿ ಇರುವುದು ಅನುಚಿತವಾದುದು ಎಂದು ಅರಿತು, ಇಂದೂರು ಪಟ್ಟಣಕ್ಕೆ ಹೋಗಿ, ಅಲ್ಲಿ ಪುರುಷ ಶಿಶುವನ್ನು ಪ್ರಸವಿಸಿದಳು. ಆ ಶಿಶುವಿನ ಹೆಸರು ರಾಮಚಂದ್ರರಾವ್, ಪುತ್ರನು ಹುಟ್ಟಿದುದರಿಂದ ಮೈನಾಬಾಯಿಯು ಧೈರ್ಯವನ್ನು ವಹಿಸಿ ಮುರಾರಿರಾಯ ನೊಡನೆ ಯುದ್ದವನ್ನು ನಡೆಸಲು ಸಿದ್ದಳಾದಳು. ಈ ವರ್ತಮಾನವನ್ನೆಲ್ಲ ಕೇಳಿ ಧಾರಾನಗರದ ಖಿಲ್ಲೇದಾರನು ಸಹ ಮೈನಾಬಾಯಿಯ ಪಕ್ಷವನ್ನು ಅವಲಂಬಿಸಿ, ನೂತನವಾಗಿ ಜನಿಸಿದ ರಾಜಕುಮಾರನ ಹೆಸರಿನಲ್ಲಿ ಕೋಟೆಯನ್ನು ರಕ್ಷಿಸುತಲಿ ದ್ದನು. ಇದನ್ನೆಲ್ಲ ನೋಡಿ ಮುರಾರಿರಾಯನು ಭಯಪಟ್ಟು ಕೆಲಮಧ್ಯಸ್ಥರನ್ನು ನಿಯಮಿಸಿ ಅವರ ಮೂಲಕ, “ ನಾನು ನಿಮ್ಮ ಆಜ್ಞೆಯಂತೆಯೇ ನಡೆದುಕೊಳ್ಳು ವೆನು, ನೀವು ಧಾರಾನಗರಕ್ಕೆ ಬರಬೇಕು,” ಎಂದು ಮೈನಾಬಾಯಿಗೆ ಹೇಳಿ ಕಳುಹಿದನು. ಕಪಟರಹಿತಳಾದ ಮೈನಾಬಾಯಿಯು ಆ ಮಾತುಗಳು ಸತ್ಯ ವಾದವುಗಳು ಎಂದು ನಂಬಿ, ಇಂದೂರಿನಿಂದ ಧಾರಾನಗರಕ್ಕೆ ಹೊರಟಳು. ಮಾರ್ಗ ಮಧ್ಯದಲ್ಲಿ ಮುರಾರಿರಾಯನ ಜನರು ಆಕೆಯನ್ನು ಎದುರ್ಗೊ೦ಡು, ಆಕೆಗೆ ಪುತ್ರನು ಜನಿಸಿದುದಕ್ಕಾಗಿ ಅಭಿನಂದಿಸಿ, ಹಿತರಂತೆಯೇ ಮಾತನ್ನಾಡುತ್ತ ಆಕೆಯನ್ನು ಹಿಂಬಾಲಿಸಿ ಧಾರಾನಗರಕ್ಕೆ ಬಂದರು. ಅಲ್ಲಿ ಆಕೆಯನ್ನು ಒಂದು ಮನೆಯಲ್ಲಿಟ್ಟು, ಮನೆಯ ಸುತ್ತಲೂ ತಮ್ಮ ಭಟರನ್ನು ಕಾವಲಿರುವಂತೆ