ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೈನಾಬಾಯಿ ಪೂವಾರೀಣ, ಅಪೇಕ್ಷಿಸಿದಳು, ಆದರೆ ಈ ಕಾರ್ಯವು ವಿಶೇಷ ಲಾಭಕರವಾದುದಲ್ಲವಾದ ಕಾರಣ ಅವರಲ್ಲಿ ಒಬ್ಬರೂ ಈಕೆಗೆ ಸಹಾಯವನ್ನು ಮಾಡಲು ಒಪ್ಪಲಿಲ್ಲ. ಆ ಮೇಲೆ ಈ ವಿಷಯಗಳನ್ನೆಲ್ಲ ಮುರಾರಿರಾಯನು ಕೇಳಿ ಆಗ್ರಹ ಪರವಶನಾಗಿ ಮೈನಾಬಾಯಿಯನ್ನು ಸಂಹರಿಸಲು ನಿಶ್ಚಯಿಸಿದನು. ಆಗ ಮೈನಾಬಾಯಿಯು : “ ನೀನು ಎಷ್ಟು ದುಷ್ಕೃತ್ಯಗಳನ್ನು ನಡೆಸಿದರೂ ಚಿಂತೆಯಿಲ್ಲ. ನನ್ನ ಪುತ್ರನು ಮಾತ್ರ ನಿನ್ನ ಕೈಗೆ ಸಿಕ್ಕಲಾರನು. ನೀನು ನನ್ನನ್ನು ಏನುಬೇಕಾದರೂ ಮಾಡ ಬಹುದು. ಆದರೆ ನಾನು ವೀರಪತ್ನಿ ಎಂಬುದನ್ನು ಮಾತ್ರ ಮರೆಯ ಬೇಡ,” ಎಂದು ಮುರಾರಿರಾಯನಿಗೆ ವರ್ತಮಾನವನ್ನು ಕಳುಹಿಸಿದಳು. ಬರೋಡಾ ಸಂಸ್ಥಾನದ ಮಂತ್ರಿಯ ತಮ್ಮನಾದ ಚಿಮಣಾಜಿಯು ಧಾರಾ ನಗರದ ಸ್ಥಿತಿಯನ್ನು ಕೇಳಿ, ರಾಣಿಗೆ ಸಹಾಯಮಾಡಲು, ದೊಡ್ಡ ಸೈನದೊಡನೆ ಗುಜರಾತಿನಿಂದ ಹೊರಟನು. ಮುರಾರಿರಾಯನು ಚಿಮಣಾಜಿಯ ಬರುವಿಕೆ ಯನ್ನು ಕೇಳಿ ನಗರವನ್ನು ಬಿಟ್ಟು ಪಲಾಯನವಾದನು. ಆಗ ಮೈನಾಬಾಯಿಯು ಬಂಧಮುಕ್ತಳಾಗಿ ಮಗನ ಹೆಸರಿನಲ್ಲಿ ರಾಜ್ಯ ತಂತ್ರಗಳನ್ನು ನೋಡಿಕೊಳ್ಳಲು ಪ್ರಾರಂಭಿಸಿದಳು. ತನಗೂ ತಮ್ಮ ಒಡೆಯನಾದ ಬರೋಡಾ ಮಹಾರಾಜನಿಗೂ ಏನಾದರೂ ಲಾಭವು ಉಂಟಾಗಬಹುದು ಎಂಬ ಅಭಿಪ್ರಾಯದಿಂದ ಬಂದನಾದಕಾರಣ ಚಿಮಣಾಜಿಗೆ ರಾಣಿಯು ರಾಜ್ಯಭಾರವನ್ನು ವಹಿಸಿದುದು ಸರಿಯಾಗಿ ತೋರಲಿಲ್ಲ, ಆದರೆ ಧೀಮತಿಯಾದ ರಾಣಿಯು ಸಖಾ ರಾಂಚಿಮಣಾಜಿಗೆ ತಕ್ಕ ಸಮಾಧಾನವನ್ನು ಹೇಳಿ, ತನ್ನ ಬಳಿಯಲ್ಲಿ ಮಂತ್ರಿಯಾಗಿ ಇರುವಂತೆ ಹೇಳಿದಳು. ರಾಣಿಯ ಮಾತುಗಳಿಂದ ಸಂತುಷ್ಟನಾಗಿ ಧಾರಾ ನಗರ ಸಂಸ್ಥಾನಕ್ಕೆ ಮಂತ್ರಿಯಾಗಿ ಇರಲು ಒಪ್ಪಿಕೊಂಡನು, ಮೇಲೆ ಹೇಳಿದ ಸಂಕಟಗಳಿಂದ ಸಂಸ್ಥಾನಕ್ಕೆ ಬಹಳ ಸಾಲವು ಉಂಟಾಯಿತು. ಈ ಸಾಲವನ್ನು ತೀರಿಸಲು ಮಂತ್ರಿಯ ಸಹಾಯದಿಂದ ಮೈನಾಬಾಯಿಯು ಅನೇಕ ಉಪಾಯ ಗಳನ್ನು ಆಲೋಚಿಸಿದಳು. ಆದರೆ ಚಿಮಣಾಜಿಯು ಅಲ್ಪ ಕಾಲದಲ್ಲಿಯೇ ಮೃತ ನಾದನು. ಅನಂತರ ಬಾಪೂರಘುನಾಥರಾಯನು ದಿವಾನನಾದನು. ಈತನ ಚಾತುರದಿಂದಲೂ ಪರಿಶ್ರಮದಿಂದಲೂ ಮೈನಾಬಾಯಿಯ ಧೈರ್ಯ ಸಾಹಸ ಗಳಿಂದಲೂ ಧಾರಾನಗರವು ಅನೇಕ ವಿಪತ್ತುಗಳಿಂದ ರಕ್ಷಿತವಾಯಿತು. ಮೈನಾ ಬಾಯಿಯು ಪರದೇಶಗಳ ಮೇಲೆ ದಂಡೆತ್ತಿ ಹೋಗಿ, ಧನವನ್ನು ಸಂಪಾದಿಸಿ ಸಂಸ್ಕಾ ನದ ಸಾಲವನ್ನು ತೀರಿಸಿದಳು, ಈಕೆಯ ಅನಂತರ ಆ ಸಂಸ್ಥಾನವು ಬಹು ಕಷ್ಟ ಗಳನ್ನು ಅನುಭವಿಸಿ ಕೊನೆಗೆ ಹೂಣರಿಂದ ಸುರಕ್ಷಿತವಾಯಿತು. ಆದರೆ ಆ ಕಥಾ ಭಾಗದಿಂದ ನನಗೆ ಪ್ರಯೋಜನವು ಇಲ್ಲ, ಮೈನಾಬಾಯಿಯು ಧೈರ್ಯದಿಂ ದಲೂ, ನ್ಯಾಯದಿಂದಲೂ ರಾಜ್ಯವನ್ನು ಪರಿಪಾಲಿಸಿದುದರಿಂದ ಆ ದೇಶಸ್ಥರು