ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ ಅಬಲಾ ಸಚ್ಚರಿತ್ರ ರತ್ನ ಮಾಲೆ. ಈಕೆಯನ್ನು ಈಗಲೂ ಹೊಗಳುತ್ತಾರೆ. ಧಾರಾಸಂಸ್ಥಾನದ ಚರಿತ್ರೆಯಲ್ಲಿ, ಚರಿ ತ್ರಕಾರನು ಈಕೆಯನ್ನು ಬಹಳವಾಗಿ ಕೊಂಡಾಡಿದಾನೆ. ಇಂದೂರು ಸಂಸ್ಥಾ ನಕ್ಕೆ ಅಹಲ್ಯಾಬಾಯಿಯೂ, ಧಾರಾಸಂಸ್ಥಾನಕ್ಕೆ ಮೈನಾಬಾಯಿಯೂ, ಭೂಷಣ ಪ್ರದರಾದರಮಣಿಯರು ಎಂದು ಹೇಳಬಹುದು - (32-kwa ಪೀರಮತಿ . ಸ್ತ್ರೀಯಸ್ತ ಥಾ ಪಾಠನೀಯಾ ಯಥಾತಾಃ ಕಾಠ್ಯವಸ್ತುನಿ ಪುಂವತ್ ಪ್ರವೃತ್ತಿ ಮಾಧಾಯ ಸಾಧಯೇಯುರನಾಕುಲಾ ಸಂಸಾರ ರೂಪವಾದ ರಥಕ್ಕೆ ಸ್ತ್ರೀ ಪುರುಷರು ಎರಡು ಚಕ್ರಗಳು ಎಂಬು ದನ್ನು ಎಲ್ಲರೂ ತಿಳಿದಿದಾರೆ. ಸಂಸಾರರಥವು ಸರಿಯಾಗಿ ನಡೆಯುವುದಕ್ಕೆ ಈ ಎರಡು ಚಕ್ರಗಳೂ ಸಮಾನವಾದುದಾಗಿ ಇರಬೇಕು. ಎರಡು ಚಕ್ರಗಳಲ್ಲಿಯೂ ಎಷು ಬೇಧವಿರುವುದೋ, ಅಷ್ಟು ಕಷ್ಟವಾಗಿ ರಥವು ನಡೆಯುವುದು, ಪುರು ಷನು ಜ್ಞಾನವಂತನಾಗಿಯೂ ಸ್ತ್ರೀಯು ಅಜ್ಞಾನಾಂಧಕಾರಮಗ್ನಳಾಗಿಯೂ ಇದ್ದರೆ, ಸಂಸಾರದಲ್ಲಿ ಸೌಖ್ಯ ಲೇಶವೂ ಇರಲಾರದು ಎಂಬುದನ್ನು ನಮ್ಮ ದೇಶದ ಅನೇಕ ಸಂಸಾರಗಳಲ್ಲಿ ನೋಡಬಹುದು. ಭಾರ್ಯಾಭರರೂಪವಾದ ಎರಡು ಚಕ್ರಗಳೂ ವಿದ್ಯಾ ಬುದ್ಧಿಗಳಲ್ಲಿ ಸಮನಾಗಿ ಇದ್ದ ಪಕ್ಷದಲ್ಲಿ ಸಂಸಾರ ಶಕಟವು ಸುಲಭವಾಗಿ ನಡೆಯುವುದು ಎಂಬುವುದನ್ನೂ, ಮಧ್ಯದಲ್ಲಿ ಎಷ್ಟು ಸಂಕಟಗಳು ಸಂಭವಿಸಿದರೂ ನಿಲ್ಲದೆ ಚಕ್ರವ್ವ ಯ ಸಹಾಯದಿಂದ ಸುಲಭವಾಗಿ ನಡೆಯುತ್ತ ಕೊನೆಗೆ ಆನಂದವಾಗಿ ಈ ಪ್ಪಿತಸ್ಥಳವನ್ನು ಸೇರುವುದು ಎಂಬುದನ್ನೂ ತಿಳಿದು ಕೊಳ್ಳಲು, ಈ ವೀರಮತಿಯ ಚರಿತ್ರೆಯು ಬಹು ಉಪಯೋಗವಾದುದು. ಆಡ ಕಾರಣ ಪಾಠಕರು ಇದನ್ನು ಶ್ರದ್ಧೆಯಿಂದ ಪಠಿಸಬೇಕೆಂದು ಅಪೇಕ್ಷಿಸುತ್ತೇನೆ. ಶಾಲಿವಾಹನಶಕದ ಎರಡನೆಯ ಶತಾಬ್ದ ದಲ್ಲಿಯೋ ಅಥವಾ ಮೂರ ನೆಯ ಶತಾಬ್ದ ದಲ್ಲಿಯೋ ಗುಜರಾತು ದೇಶವನ್ನು ಚಾವಡಾ ವಂಶಸ್ಥನಾದ ಬಿರಜ ಎಂಬ ರಾಜನು ಪಾಲಿಸುತಲಿದ್ದನು. ಆಗ ಗುಜರಾತು ದೇಶಕ್ಕೆ ಟುಕಟೋಡಾ ಗ್ರಾಮವು ರಾಜಧಾನಿಯಾಗಿ ಇತ್ತು. ಈತನ ತಂದೆಯು