ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೀರಮತಿ. ೬ತಿ ಅತಿವೃದ್ದನಾಗಿ ಇದ್ದುದರಿಂದ ತಂದೆಯು ಜೀವಿಸಿದ್ದರೂ, ಬಿರಜನೇರಾಜ್ಯವನ್ನು ಆಳುತಲಿದ್ದನು. ವೃದ್ಧರಾಜನಿಗೆ ಬಿರಜನಲ್ಲದೆ ಇನ್ನೂ ಕೆಲಜನ ಮಕ್ಕಳಿದ್ದರು. ಅವರೆಲ್ಲರಲ್ಲಿ ವೀರಮತಿಯು ಚಿಕ್ಕವಳು, ಈಕೆಯು ಎಲ್ಲರಿಗಿಂತಲೂ ಕಿರಿಯವ ೪ಾದಕಾರಣ ಬಹುಮುದ್ದಿನಿಂದ ಬೆಳೆಯುತಲಿದ್ದಳು, ಈಕೆಯು ಬಾಲ್ಯದಿಂದಲೂ ರಾಜಪುತ್ರರೊಡನೆಯೇ ಆಡಿಕೊಳ್ಳು ತಲಿದ್ದುದರಿಂದ, ಅವರು ಕಲಿಯುತಲಿದ್ದ ಧನುರ್ವಿದ್ಯಾದಿಗಳು ಈಕೆಗೂ ಚೆನ್ನಾಗಿ ಅಭ್ಯಾಸವಾಯಿತು, ಮತ್ತು ಓದು ಬರಹಗಳಲ್ಲಿಯೂ, ಗಣಿತದಲ್ಲಿಯೂ ಪ್ರವೀಣಳಾದಳು. ವೀರಮತಿಯು ವಿಶೇಷ ಸೌಂದರ್ಯವತಿಯಾಗಿಯೂ, ವಿನಯಗಾಂಭೀರ್ಯ ಮೊದಲಾದ ಸುಗುಣ ಗಳುಳ್ಳವಳಾಗಿಯೂ ಇದ್ದಳು. ವೀರಮತಿಗೆ ಹದಿನಾರು ವರುಷಗಳು ತುಂಬಿದಮೇಲೆ ಆಕೆಯು ವಿವಾಹ ಯೋಗ್ಯಳಾದಳು ಎಂದು ಎಣಿಸಿ, ಸ್ವಯಂವರ ಪದ್ಧತಿಯನ್ನನುಸರಿಸಿ ಆಕೆಯ ವಿವಾಹವನ್ನು ಬೆಳೆಸಲು ಬಿರಜನು ನಿಶ್ಚಯಸಿಕೊಂಡನು. ಅನಂತರ ಆತನು ಕೆಲವಿಪ್ರರನ್ನು ಕರೆಯಿಸಿ, ಅವರೊಡನೆ, “ ನೀವು ದೇಶದೇಶಗಳಿಗೆ ಹೋಗಿ ಅಲ್ಲಿನ ರಾಜಪುತ್ರರ ಲಕ್ಷಣಗಳನ್ನೂ, ಗುಣಗಳನ್ನೂ ತಿಳಿದು, ಅವರ ಚಿತ್ರಪಟಗಳನ್ನು ತೆಗೆದುಕೊಂಡು ಬನ್ನಿರಿ,” ಎಂದು ಹೇಳಿದನು. ಆ ಭೂಸುರರು ರಾಜನ ಹೇಳಿಕೆ ಯಂತೆ ಅನೇಕ ದೇಶಗಳನ್ನು ಸಂಚರಿಸಿ ಅಲ್ಲಿನ ರಾಜಪುತ್ರರ ಚಿತ್ರಪಟಗಳನ್ನು ತೆಗೆದುಕೊಂಡುಬಂದು ವೀರಮತಿಗೆ ತೋರಿಸಿ, ಆಯಾ ರಾಜ ಪುತ್ರರ ಸ್ವಭಾವ ಗಳನ್ನು, ಬಾಯಿಯಿಂದ ವರ್ಣಿಸಿದರು. ಅವರಲ್ಲಿ ಧಾರಾನಗರಾಧಿಪತಿಯಾದ ಉದಯಾದಿತ್ಯ ಮಹಾರಾಯನ ಪುತ್ರನ ಸದ್ದು ಣಗಳನ್ನು ಕೇಳಿಯೂ, ಆತನ ಸುಂದರರೂಪವನ್ನು ನೋಡಿಯೂ ವೀರಮತಿಯು ಆತನನ್ನು ವರಿಸಿದಳು. ಆ ರಾಜಪುತ್ರನ ಹೆಸರು ಜಗದೇವ ಬಿರಜನು ತಂಗಿಯ ಅಭಿಪ್ರಾಯವನ್ನು ತಿಳಿದು, “ ನನ್ನ ತಂಗಿಯಾದ ವೀರಮತಿಯನ್ನು ನಿಮ್ಮ ಪುತ್ರನಾದ ಜಗದೇವನಿಗೆ ಕೊಟ್ಟು ವಿವಾಹವನು ಬೆಳೆಸಲು ನಿಶ್ಚಯಿಸಿ ಇರುವೆನು, ” ಎಂದು ಶುಭಲೇಖನವನ್ನು ಬರೆದು ಉದಯಾದಿತ್ಯ ಮಹಾರಾಯನಿಗೆ ಕಳುಹಿಸಿದನು. ಈ ಉದಯಾದಿತ್ಯನು ಸೂರ್ಯವಂಶದ ದೊರೆಯು, ಈತನು ವಿಕ್ರ ಮಾದಿತ್ಯನ ವಂಶದಲ್ಲಿ ೪೮ ನೆಯ ಪುರುಷನು. ಈರಾಜನು ಮಾಳವದೇಶದ ಧಾರಾನಗರವನ್ನು ರಾಜಧಾನಿಯಾಗಿ ಮಾಡಿಕೊಂಡು ರಾಜ್ಯವನ್ನು ಪಾಲಿಸುತ ಲಿದ್ದುದಲ್ಲದೆ, ಶೌರ್ಯವಂತನೆಂದು ಪ್ರಖ್ಯಾತಿಯನ್ನು ಪಡೆದಿದ್ದನು, ಮತ್ತು ಅನೇಕ ಸಾಮಂತ ರಾಜರನ್ನುಳ್ಳವನಾಗಿ ಚಕ್ರವರ್ತಿ ಎನಿಸಿಕೊಂಡಿದ್ದನು. ಈತನಿಗೆ ಇಬ್ಬರು ಪತ್ನಿಯರು. ಇವರ ಹೆಸರುಗಳು ತಿಳಿಯದಿದ್ದರೂ, ಪಟ್ಟ ಮಹಿಷಿಯು ವಾಫೇಲಿ ವಂಶದವಳು ಎಂತಲೂ, ದ್ವಿತೀಯಪತ್ನಿಯು ಸೋಳಂಕಿ