ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೀರಮತಿ. ೬೫ ಹೇಳಿದಂತೆ ಬಿರಜರಾಜನು ಕಳುಹಿಸಿದ ಶುಭಲೇಖನವನ್ನು ತೆಗೆದುಕೊಂಡು ಕೆಲಬ್ರಾಹ್ಮಣರು ಉದಯಾದಿತ್ಯನ ಸಭೆಗೆ ಬಂದರು. ಆ ಲೇಖನವನ್ನು ನೋಡಿ ಉದಯಾದಿತ್ಯನು ಆನಂದಭರಿತನಾದನು. , ಆಗೈ ರಣಧವಳನಿಗೆ ವಿವಾಹವಾಗಿರಲಿಲ್ಲ. ಆದಕಾರಣ ವಾಫೇಲಿರಾಣಿಯು ಜಗದೇವನ ವಿವಾಹಕ್ಕೆ ಅನುಮತಿಯನ್ನು ಕೊಡುವಳೋ ಇಲ್ಲವೋ ಎಂದು ಚಕ್ರವರ್ತಿಯು ಸಂಶಯಿಸಿ ದನು. ಜಗದೇವನ ಅದೃಷ್ಟವು ಒಳ್ಳೆಯದಾಗಿದ್ದುದರಿಂದ ಹೇಗೋ ವಾಫೇಲಿ ರಾಣಿಯು ಆತನ ವಿವಾಹಕ್ಕೆ ಸಮ್ಮತಿಸದಳು. ಅನಂತರ ಉದಯಾದಿತ್ಯನು ಸಪರಿವಾರನಾಗಿ ಟುಕಟೇಡಾ ಗ್ರಾಮಕ್ಕೆ ಹೋಗಿ ಪುತ್ರನ ವಿವಾಹವನ್ನು ವೈಭವದೊಡನೆ ನೆರವೇರಿಸಿಕೊಂಡು, ಸೊಸೆ ಯಾದ ವೀರಮತಿಯನ್ನು ಕರೆದುಕೊಂಡು ಧಾರಾನಗರಕ್ಕೆ ಬಂದನು. ಜಗ ದೇವನ ಮದುವೆಯು ನಡೆದಮೇಲೆ ಸೋಳಂಕಿರಾಣಿಯೂ, ಜಗದೇವರಾಜನೂ ಗೃಹದಲ್ಲಿಯೇ ಇದ್ದರು, ವೀರಮತಿಯು ಅತ್ತೆಯ ಮನೆಯಲ್ಲಿ ಕೆಲವು ದಿವಸ ಗಳಿದು ಆಮೇಲೆ ತೌರುಮನೆಗೆ ಹೋದಳು. ಜಗದೇವನು ಪ್ರತಿದಿವಸವೂ ರಾಜಸಭೆಗೆ ಹೋಗಿ ಅನೇಕ ರಾಜ ಕಾರ್ಯಗಳನ್ನು ನಿರ್ವಹಿಸುತಲಿದುದರಿಂದ, ಆತನ ಕೀರ್ತಿಯು ದಿನದಿನಾ ಭಿವೃದ್ದಿಯನ್ನು ಪಡೆಯುತ್ತಿತ್ತು. ರಣಧವಳನು ಬಾಲ್ಯದಿಂದಲೂ ಹುಚ್ಚನಂತೆ ಇರುತಲಿದ್ದುದರಿಂದ ಆತನ ಕೆಲಸಗಳು ಯಾರಿಗೂ ತೃಪ್ತಿಯನ್ನು ಉಂಟು ಮಾಡುತ್ತಿರಲಿಲ್ಲ. ಈ ವಿಧವಾಗಿಯೇ ಕೆಲವು ದಿವಸಗಳು ಕಳೆದರೆ, ಪ್ರಜೆಗಳ ಪ್ರೇಮಕ್ಕೆ ಪಾತ್ರನಾಗಿರುವ ಜಗದೇವನು ತನ್ನ ಪುತ್ರನನ್ನು ಹೊರಡಿಸಿ ತಾನೇ ಸಿಂಹಾಸನವನ್ನು ಆಕ್ರಮಿಸಬಹುದು ಎಂದು ವಾಫೇಲಿರಾಣಿಯು ಎಣಿಸಿದಳು. ಮತ್ತು ಯಾವವಿಧವಾಗಿಯಾದರೂ ಜಗದೇವನಿಗೆ ಅನಿಷ್ಟವನ್ನು ಉಂಟುಮಾಡ ಬೇಕು ಎಂದು ಸಹ ನಿಶ್ಚಯಿಸಿಕೊಂಡಳು. ಜಗದೇವನು, ತನ್ನ ಬಲತಾಯಿಯು ತನ್ನ ಮೇಲೆ ಪುತ್ರವಾತ್ಸಲ್ಯವನ್ನು ಇಟ್ಟಿರಬೇಕು ಎಂಬ ಅಪೇಕ್ಷೆಯಿಂದ, ಆಗಾಗ್ಗೆ ವಾಫೇಲಿರಾಣಿಯ ಅಂತಃಪುರಕ್ಕೆ ಹೋಗುತಲಿದ್ದನು. ವಾಫೇಲಿರಾಣಿಯು ತನ್ನ ಅಂತಃಪುರಕ್ಕೆ ಶುದ್ಧಾಂತಃಕರಣ ದೊಡನೆ ಬರುತಲಿದ್ದ ಜಗದೇವನ ಮೇಲೆ ದೊಡ್ಡ ನಿಂದೆಯನ್ನು ಹೊರಿಸಿ, ರಾಜ ನಿಗೆ ನಂಬಿಕೆಯು ಹುಟ್ಟುವಂತೆ ಮಾಡಿದಳು. ಇದರಿಂದ ಜಗದೇವನು ರಾಜ ಭ್ರಷ್ಟನಾದನು. ಆಗ ಜಗದೇವನು ಕೆಲವು ಆಯುಧಗಳನ್ನು ತೆಗೆದುಕೊಂಡು ಕುದುರೆಯನ್ನು ಹತ್ತಿ ಪಟ್ಟಣ ಎಂಬ ಸ್ವತಂತ್ರ ಸಂಸ್ಥಾನಕ್ಕೆ ಹೊರಟನು. ಅನಂತರ ತನ್ನ ಪತ್ನಿಯನ್ನು ನೋಡಿ ಆಕೆಯ ಸಮ್ಮತಿಯನ್ನು ಪಡೆದು ಹೋಗೋಣ S