ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ ) 96 , ೩೬ ಅಬಲಾ ಸಚ್ಚರಿತ್ರ ರತ್ನ ಮಾಲೆ. ಎಂದು ಎಣಿಸಿ, ಕುದುರೆಯನ್ನು ಟುಕಟೇಡಾ ಗ್ರಾಮದ ಕಡೆಗೆ ತಿರಿಗಿಸಿದನು. ಜಗದೇವನು ಕೆಲವು ದಿವಸಗಳಿಗೆ ಮುಕಟೇಡಾ ಗ್ರಾಮಸಖಾಪದಲ್ಲಿ ಇದ್ದ ಒಂದು ಉದ್ಯಾನವನವನ್ನು ಸೇರಿದನು, ಆಗ್ಗೆ ಸಾಯಂಕಾಲವಾಗಿ ಇದ್ದುದರಿಂದಲೂ, ಕುದುರೆಯು ಆಯಾಸವನ್ನು ಹೊಂದಿದ್ದು ದರಿಂದಲ್ಲೂ, ಅಲ್ಲಿ ಸ್ವಲ್ಪ ಹೊತ್ತು ಶ್ರಮವನ್ನು ಪರಿಹರಿಸಿಕೊಂಡು, ರಾತ್ರಿಯ ಬೆಳದಿಂಗಳಿನಲ್ಲಿ ಗ್ರಾಮವನ್ನು ಸೇರಬಹುದು ಎಂದು ಕುದುರೆಯ ಫಲಾಹಾರವನ್ನು ಮಾಡಿ, ಅಲ್ಲಿ ಯೇ ನಿದ್ರಿಸಿದನು. ಜಗದೇವನನ್ನು ರಾಜ್ಯದಿಂದ ಹೊರಡಿಸಿದ ಮೇಲೆ, ನಾಫೇಲಿರಾಣಿಯು ಕೆಲವು ಜನ ದುರ್ಮಾರ್ಗರಿಗೆ ಧನಾಶೆಯನ್ನು ತೋರಿಸಿ, ಜಗದೇವನನ್ನು ಮಾರ್ಗ ಮಧ್ಯದಲ್ಲಿ ಕೊಂದುಹಾಕುವಂತೆ ಹೇಳಿ ಕಳುಹಿಸಿದಳು. ಜಗದೇವನು ಅಡ್ಡಹಾದಿ ಯಲ್ಲಿ ಹೋಗುತಲಿದ್ದುದರಿಂದ ಆ ದುರ್ಮಾರ್ಗರಿಗೆ ಈತನು ಮಾರ್ಗದಲ್ಲಿ ದೊರೆಯಲಿಲ್ಲ. ಈತನು ಉದ್ಯಾನವನದಲ್ಲಿ ನಿದ್ರೆಮಾಡುತಲಿದ್ದ ಸಮಯದಲ್ಲಿ, ಆ ದುರ್ಮಾರ್ಗರಲ್ಲಿ ನಾಲ್ಕು ಜನರು ಅಲ್ಲಿಗೆ ಪ್ರವೇಶಿಸಿ, ಮಲಗಿದ್ದ ರಾಜಪುತ್ರ ನನ್ನು ಬಂಧಿಸಿ ಅರಣ್ಯಕ್ಕೆ ತೆಗೆದುಕೊಂಡು ಹೋದರು. ಈ ಸಮಯದಲ್ಲಿ ಯೇ ವೀರಮತಿಯೂ, ಆಕೆಯ ಸಖಿಯೂ ಪುರುಷ ವೇಷಗಳನ್ನು ಧರಿಸಿ, ಬೇಟೆಯಾಡಿ ಆ ವನಕ್ಕೆ ಬಂದರು. ಆಗ ಅಲ್ಲಿದ್ದ ಸೇವಕರು ಯಾರೋ ಒಬ್ಬ ರಾಜಕುಮಾ ರನು ಆ ವನಕ್ಕೆ ಬಂದಿದ್ದನೆಂತಲೂ ಆತನನ್ನು ನಾಲ್ಕು ಜನ ಕಳ್ಳರು ಹಿಡಿದು ಕೊಂಡು ಹೋದರೆಂತಲೂ ಆಕೆಯೊಡನೆ ತಿಳಿಸಿದರು. ಈ ಮಾತುಗಳನ್ನು ಕೇಳಿ ದೊಡನೆಯೇ, ಆ ರಾಜಪುತ್ರನನ್ನು ಬಿಡಿಸಲು ಎಣಿಸಿ, ವೀರಮತಿಯೂ ಆಕೆಯ ಸಖಿಯೂ ಕಳ್ಳರು ಹೋದ ಮಾರ್ಗದಲ್ಲಿ ತಮ್ಮ ಕುದುರೆಗಳನ್ನು ಓಡಿಸಿದರು. ಅವರು ಸ್ವಲ್ಪ ದೂರ ಹೋದಮೇಲೆ ಅರಣ್ಯದಲ್ಲಿ ಬಂಧಿತನಾಗಿರುವ ಜಗದೇವ ನನ್ನು ಮಧ್ಯದಲ್ಲಿ ಇಟ್ಟು ಕೊಂಡು ಕೊಳ್ಳೋಣವೋ ಬೇಡವೋ ಎಂದು ತಮ್ಮೊಳಗೆ ತಾವು ತರ್ಕಿಸುತಲಿದ್ದ ಚೋರಚತುಷ್ಟಯವನ್ನು ನೋಡಿದರು, ಪುರುಷ ವೇಷ ಧಾರಿಗಳಾದ ಇವರನ್ನು ನೋಡಿ ಆ ಚೋರರು ಇವರಲ್ಲಿ ರುವ ಧನವನ್ನು ಸುಲಿದು ಕೊಳ್ಳುವುದಕ್ಕಾಗಿ ಇವರ ಸವಿಾಪಕ್ಕೆ ಬಂದರು. ಆಗ ವೀರಮತಿಯೂ, ಆಕೆಯ ಸಹಚರಿಯೂ ತಮ್ಮ ಕಂಕಪತ್ರಗಳನ್ನೂ, ಭಲ್ಲೆ ಯಗಳನ್ನೂ ಅವರ ಮೇಲೆ ಪ್ರಯೋಗಿಸಿದರು. ಆಗ ಉಭಯಪಕ್ಷದವರಿಗೂ ಸ್ವಲ್ಪ ಕದನವು ನಡೆದು ವೀರ ಮತಿಯ ಭಲ್ಲೆ ಯದ ಇರಿತದಿಂದ ಒಬ್ಬ ಕಳ್ಳನು ಮೃತನಾದನು. ಇನ್ನೊಬ್ಬನು ಆಕೆಯ ಸಖಿಯಿಂದ ಆಹತನಾಗಿ ಕೆಳಗೆ ಬಿದ್ದನು. ಇವರ ಸ್ಥಿತಿಯನ್ನು ನೋಡಿ ಮಿಕ್ಕವರು ಓಡಿಹೋದರು. ಅನಂತರ ವೀರಮತಿಯು ಜಗದೇವನ ಬಂಧಗಳನ್ನು ಬಿಚ್ಚಿ, ಆತನು ತನ್ನ ಪತಿ ಎಂಬುದನ್ನು ತಿಳಿದುಕೊಂಡು, ತಾನು ಯಾರು ಎಂಬುವು ದನ್ನು ಆತನಿಗೆ ತಿಳಿಸದೆ ಗ್ರಾಮಕ್ಕೆ ತನ್ನೊಡನೆ ಬರಬೇಕು ಎಂದು ಬಲವಂತ