ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮ ಅಬಲಾ ಸಚ್ಚರಿತ್ರ ರತ್ನ ಮಾಲೆ. ಹುಲಿಯು ಘರ್ಜಿಸುತ್ತಲೂ, ಹಾರುತ್ತಲೂ, ಭಯಂಕರವಾದ ರೂಪವನ್ನು ಧರಿಸಿ, ಮೇಲಿರುವ ಮನುಷ್ಯರನ್ನು ಕೆಳಕ್ಕೆ ಬೀಳಿಸಲು ಪ್ರಯತ್ನ ಮಾಡುತಲಿರುವುದೂ ಅವರಿಗೆ ಕಂಡು ಬಂದಿತು. ಆಮೇಲೆ ಇವರು ಆ ಹುಲಿಯನ್ನು ಸಮಿಾಪಿಸಿ, ಒಂದು ಪೊದರಿನ ಪಾರ್ಶ್ವದಲ್ಲಿ ನಿಂತು, ಅದರ ಬೆನ್ನಿಗೆ ತಾಕುವಂತೆ ಬಾಣ ಗಳನ್ನು ಹಾಕಿದರು. ಆಗ ಆ ಹುಲಿಯು ಮರದಮೇಲಿದ್ದ ಮನುಷ್ಯರನ್ನು ಬಿಟ್ಟು ತನ್ನನ್ನು ನೋಯಿಸಿದ ದಂಪತಿಗಳ ಮೇಲಕ್ಕೆ ಹಾರಿತು, ಅಷ್ಟರಲ್ಲಿ ಜಗದೇವನು ಮತ್ತೊಂದು ಬಾಣವನ್ನು ಬಿಟ್ಟನು. ಆದರೆ ಅದು ಗುರಿತಪ್ಪಿ ಹೋದುದರಿಂದ ಆ ಹುಲಿಯು ಜಗದೇವನನ್ನು ಮತ್ತಷ್ಟು ಸವಿಾಪಿಸಿತು. ಆಗ ವೀರಮತಿಯು ತನ್ನ ಕೈಯಲ್ಲಿದ್ದ ಭಲ್ಲೆಯವನ್ನು ಅದರ ಹೊಟ್ಟೆಯೊಳಕ್ಕೆ ಚುಚ್ಚಲು, ಆ ಹುಲಿಯು ಕೆಳಗೆ ಬಿದ್ದು ಪ್ರಾಣವನ್ನು ಬಿಡುತ್ತಾ ಘಟ್ಟಿಯಾಗಿ ಘರ್ಜಿಸಿತು. ಆ ಘರ್ಜನೆ ಯನ್ನು ಕೇಳಿ ಹೊದರಿನೊಳಗೆ ಇದ್ದ ಹೆಣ್ಣು ಹುಲಿಯು ಅದಕ್ಕಿಂತಲೂ ಘಟ್ಟ ಯಾಗಿ ಘರ್ಜಿಸುತ್ತ, ತನ್ನ ಪ್ರಾಣಕಾಂತನ ಸಹಾಯಕ್ಕೆ ಬಂದಿತು. ಆ ಶೂರ ದಂಪತಿಗಳು ಆ ಹುಲಿಯನ್ನು ಸಹ ಕೊಂದರು. ಆದರೆ ಅದರ ಉಗುರುಗಳಿಂದ ಘಾಯವನ್ನು ಹೊಂದಿ ಜಗದೇವನ ಕುದುರೆಯು ಸತ್ತು ಹೋಯಿತು. ಅದಕ್ಕೆ ಜಗದೇವನು ಬಹಳ ಚಿಂತಿಸಿ ಅದರ ಮೇಲೆ ತನ್ನ ಅಂಗವಸ್ತ್ರವನ್ನು ಹೊದಿಸಿದನು. ಎರಡು ಹುಲಿಗಳೂ ಮೃತವಾದುದನ್ನು ನೋಡಿ ಮರದಮೇಲಿದ್ದ ಮನುಷ್ಯರು ಇಳಿದು ಬಂದು ಜಗದೇವ ವೀರಮತಿಯರಿಗೆ ನಮಸ್ಕರಿಸಿದರು. ಜಗದೇವನು ಅವರ ಪರಿಚಯವನ್ನು ಕೇಳಲು, ಅವರು “ಉದಯಾದಿತ್ಯ ಮಹಾರಾಜನ ಎರಡ ನೆಯ ಮಗನಾದ ಜಗದೇವನು ಇಪ್ಪತ್ತು ದಿವಸಗಳ ಕೆಳಗೆ ಯಾರಿಗೂ ಹೇಳದೆ ಮನೆಯಿಂದ ಹೊರಟು ಎಲ್ಲಿಗೋ ಹೋದನು. ಆತನ ತಾಯಿಯಾದ ಸೋಳಂಕಿ ರಾಣಿಯು ಆತನನ್ನು ಹುಡುಕುವುದಕ್ಕಾಗಿ ಮಂತ್ರಿಯಾದ ಧೀರಸಿಂಹನನ್ನು ಕಳು ಹಿಸಿದಳು. ನಾವು ಧಾರಾನಗರ ಸಮಿಾಪದಲ್ಲಿರುವ ಒಂದು ಹಳ್ಳಿಯವರು. ಮುಂದಿನ ಮಜಲಿನಲ್ಲಿ ಭೋಜನಾದಿಗಳನ್ನು ಸಿದ್ಧಪಡಿಸುವುದಕ್ಕಾಗಿ, ನಾವು ಎಲ್ಲರಿ ಗಿಂತಲೂ ಮುಂದೆಹೊರಟು ಬರುತ್ತಿರಲು, ದಾರಿತಪ್ಪಿ ಈ ಅರಣ್ಯಕ್ಕೆ ಬಂದು ಹುಲಿಗಳಿಂದ ಪೀಡಿತರಾದೆವು, ” ಎಂದು ತಿಳಿಸಿದರು. ಜಗದೇವನು ತನ್ನ ತಾಯಿಯ ಕ್ಷೇಮವನ್ನು ತಿಳಿದು, ಆಕೆಯು ತನಗೋಸ್ಕರ ಧೀರಸಿಂಹನನ್ನು ಕಳು ಹಿಸಿದಳು ಎಂದು ಕೇಳಿ, ಆತನಿರುವಸ್ಥಳಕ್ಕೆ ಮಾರ್ಗವನ್ನು ತೋರಿಸುವಂತೆ ಆ ಮನುಷ್ಯರಿಗೆ ಆಜ್ಞಾಪಿಸಿದನು. ಅವರಲ್ಲಿ ಒಬ್ಬನು ಮುಂದುಗಡೆ ದಾರಿ ತೋರಿ ಸುತ್ತ ಹೊರಟನು. ಅವರು ಎಲ್ಲರೂ ಸ್ವಲ್ಪ ದೂರ ಹೋದಮೇಲೆ, ಎಂಟು ಹತ್ತು ಜನ ಕುದುರೆ ಸವಾರರು ಅವರ ಹಿಂದೆ ಬರುತಲಿರುವಂತೆ ತೋರಿತು. ಅವರು ಧೀರಸಿಂಹನ ಕಡೆಯವರಾಗಿರಬಹುದು ಎಂದು ಎಣಿಸಿ, ಜಗದೇವನೇ ಮೊದಲಾ ದವರು ಅವರನ್ನು ನಿರೀಕ್ಷಿಸುತ್ತ ಅಲ್ಲಿಯೇ ನಿಂತುಕೊಂಡರು. ಆದರೆ ಸ್ವಲ್ಪ