ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೀರಮತಿ, ಹೊತ್ತಿಗೆ ಬರುತಲಿರುವವರು ಶತ್ರುಗಳು ಎಂದು ತೋರಿತು. ಕೂಡಲೆ ಜಗದೇವ ವೀರಮತಿಯರು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಯುದ್ಧ ಸನ್ನದ್ಧರಾದರು. ಅವರ ಬಳಿಯಲ್ಲಿದ್ದ ಸೇವಕರು ಕೆಲವು ಕಲ್ಲುಗಳನ್ನು ಆರಿಸಿಕೊಂಡು ಒಂದು ಮರದ ಮೇಲೆ ಹತ್ತಿ ಶತ್ರುಗಳ ಮೇಲೆ ಕಲ್ಲುಗಳನ್ನು ಹಾಕುತಲಿದ್ದರು. - ಆ ಕುದುರೆಸವಾರರು ಆ ದಂಪತಿಗಳನ್ನು ಸುತ್ತಿಕೊಂಡರು. ಅವರು ಎಂಟು ಜನರಾದುದರಿಂದ, ಅವರೊಡನೆ ಹೋರಾಡಿ ಗೆಲ್ಲುವುದು ಕಷ್ಟವು ಎಂದು ಎಣಿಸಿ, ಅವರು ತಮ್ಮನ್ನು ಸವಿಾಪಿಸದಂತೆ ಖಡ್ಗವನ್ನು ಸುತ್ತಲೂ ತಿರಿಗಿಸಿಕೊಳ್ಳುವುದ ರಿಂದ ಪ್ರಾಣವನ್ನು ಕಾಪಾಡಿಕೊಳ್ಳಬಹುದು ಎಂದು ಹಾಗೆ ಮಾಡುವಂತೆ ಪತ್ನಿಗೆ ತಿಳಿಸಿ ತಾನು ಸಹ ಹಾಗೆಯೇ ಮಾಡುತಲಿದ್ದನು. ಆ ಶತ್ರುಗಳಲ್ಲಿ ಹಿಂದೆ ಜಗ ದೇವನನ್ನು ಹಿಡಿದುಕೊಂಡು ಹೋದ ಜನಗಳಲ್ಲಿ ಒಬ್ಬನು ಇದ್ದು ದರಿಂದ ತಮ್ಮನ್ನು ಕೊಲ್ಲುವುದಕ್ಕಾಗಿ ಇವರನ್ನು ವಾಫೇಲಿರಾಣಿಯು ಕಳುಹಿಸಿದಳೆಂದು ಜಗದೇವ ವೀರಮತಿಯರು ತಿಳಿದುಕೊಂಡರು. ಆ ಶತ್ರುಗಳು ಇವರಮೇಲೆ ಅನೇಕ ಬಾಣ ಗಳನ್ನು ಬಿಟ್ಟರು. ಆದರೆ ಇವರು ತಿರುಗಿಸುತಲಿದ್ದ ಖಡ್ಡ ಕೈ ತಗಲಿ ಆ ಬಾಣ ಗಳು ವ್ಯರ್ಥವಾದವು. ಆ ಸಮಯದಲ್ಲಿ ಅವರ ಶರೀರಗಳನ್ನು ಸ್ಪರ್ಶಿಸುವುದಕ್ಕೆ ವಾಯುದೇವನಿಗೂ ಅಶಕ್ಯವು ಎಂದು ತೋರಿತು. ಬಹಳ ಹೊತ್ತಿನವರೆಗೂ ಕತ್ತಿಯನ್ನು ತಿರಿಗಿಸಿ ವೀರಮತಿಯು ಆಯಾಸವನ್ನು ಹೊಂದಿದಳು, ಮುಂದೆ ಹಾಗೆ ಖಡ್ಡ ವನ್ನು ತಿರುಗಿಸುವುದು ಅಶಕ್ಯವು ಎಂದು ಎಣಿಸಿ ಆಕೆಯು ಆ ಯಾ ಕರ ಆವರಣವನ್ನು ಒಡೆದುಕೊಂಡು ಹೊರಗೆ ಹೋಗುವುದು ಒಳ್ಳೆಯದು ಎಂದು, ಹಾಗೆ ಮಾಡುವಂತೆ ಪತಿಗೆ ಸೂಚಿಸಿದಳು. ಆಮೇಲೆ ವೀರಮತಿಯು ಶತ್ರುಗಳ ಅಧಿಪತಿಯಮೇಲೆ ಒಂದು ಬಾಣವನ್ನು ಬಿಡಲು ಅದು ಗುರಿತಪ್ಪಿ ಆತನ ಕುದು ರೆಗೆ ತಗುಲಿದುದರಿಂದ ಕುದುರೆಯು ಸತ್ತು ಹೋಯಿತು, ಕುದುರೆಯು ಕೆಳಗೆ ಬಿದ್ದುದರಿಂದ ಅದರ ಮೇಲೆ ಇದ್ದ ಸವಾರನು ಕೆಳಗೆ ಬಿದ್ದು ಮೂರ್ಛಿತನಾದನು. ತಮ್ಮನಾಯಕನ ಸ್ಥಿತಿಯನ್ನು ನೋಡಿ ಮಿಕ್ಕವರು ಕ್ರೋಧಾವೇಶದೊಡನೆ ನೀರ ಮತಿಯನ್ನು ಸುತ್ತಿಕೊಂಡರು. ಆಕೆಯೂ ಧೈರ್ಯದಿಂದ ಅವರೊಡನೆ ಯುದ್ಧ ಮಾಡುತಲಿದ್ದಳು, ಆದರೆ ಬಹಳಹೊತ್ತಿನಿಂದ ಯುದ್ಧಮಾಡಿ ಬಳಲಿದ್ದಳಾದುದ ರಿಂದ ಈ ಘೋರ ಕಲಹದಲ್ಲಿ ಆಕೆಯ ಖಡ್ಗವು ಕೈ ಜಾರಿ ಕೆಳಗೆ ಬಿತ್ತು. ಆಕೆಯು ಅದನ್ನು ತೆಗೆದುಕೊಳ್ಳಲು ಪ್ರಯತ್ನಿಸುವಷ್ಟರಲ್ಲಿ, ಆಕೆಯ ಕೈಗೆ ಒಂದು ಬಾಣವೂ, ಕಾಲಿಗೆ ಒಂದು ಬಾಣವೂ ತಗಲಿತು, ಅವನ್ನು ತೆಗೆಯುವುದರೊಳಗೆ ಒಬ್ಬನು ಹಿಂದಿನಿಂದ ಬಂದು ಆಕೆಯ ಕತ್ತನ್ನು ಹಿಡಿದುಕೊಂಡನು. ಇದರಿಂದ ವೀರರು ತಿಯು ಮೂರ್ಛಿತೆಯಾದಳು. ಕೂಡಲೆ ಜಗದೇವನು ಆ ದುಷ್ಟನ ಕೈಯನ್ನು ಕತ್ತರಿಸಿ ತನ್ನ ಪ್ರಿಯಸತಿಯನ್ನು ಬಿಡಿಸಿಕೊಂಡನು. ಆಗ ಜಗದೇವನಿಗೆ ಪತ್ನಿಯನ್ನು ರಕ್ಷಿಸಿಕೊಳ್ಳುತ್ತ ಯುದ್ದ ಮಾಡಬೇಕಾಯಿತು. ಶೂರವರನಾದ ಜಗದೇವನು