ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦ ೭೦ ಅಬಲಾ ಸಚ್ಚರಿತ್ರ ರತ್ನ ಮಾಲೆ. ಹೀಗೆ ಯುದ್ಧ ಮಾಡುತ್ತಿರುವಾಗ ದೈವವಶದಿಂದ ಧೀರಸಿಂಹನು ಇಪ್ಪತ್ತು ಜನ ಅನುಚರರೊಡನೆ ಆ ಮಾರ್ಗವಾಗಿಯೇ ಬಂದನು. ಆತನು ಜಗದೇವನನ್ನು ಗುರುತಿಸಿ, ಆ ಕಳ್ಳರನ್ನೆಲ್ಲ ಹಿಡಿದು ಬಂಧಿಸಿದನು. ಮೂರ್ಛಿತಳಾಗಿರುವುದು ವೀರಮತಿ ಎಂದು ತಿಳಿದು ಆಕೆಗೆ ಶೈತ್ಯೋಪಚಾರಗಳನ್ನು ಮಾಡಿಸಿ ಆಕೆಯ ಗಾಯಗಳಿಗೆ ಔಷಧವನ್ನು ಹಾಕಿಸಿದನು, ಆಮೇಲೆ ವೀರಮತಿಯು ಮೂರ್ಛ ಯಿಂದ ಎಚ್ಚತ್ತು ಧೀರಸಿಂಹನನ್ನು ನೋಡಿ ಆತನಿಗೆ ಪ್ರಣಾಮವನ್ನು ಮಾಡಿದಳು. ಅನಂತರ ಧೀರಸಿಂಹನು ಕಳ್ಳರ ವೃತ್ತಾಂತವನ್ನೆಲ್ಲ ಜಗದೇವನಿಂದ ತಿಳಿದು ಕೊಂಡನು. ಅವರೆಲ್ಲರೂ ಆದಿವಸ ಭೋಜನಾದಿಗಳನ್ನು ಅಲ್ಲಿ ಯೇ ನೆರವೇರಿಸಿ ದರು. ಆಮೇಲೆ ಧೀರಸಿಂಹನು, “ ಈ ಕೃತ್ಯಗಳನ್ನೆಲ್ಲ ಮಾಡಿಸಿದವಳು ನಾಫೋಲಿ ರಾಣಿಯು. ಆದಕಾರಣ ನೀನು ಧಾರಾನಗರಕ್ಕೆ ಬಂದು ಈ ವಿಷಯಗಳನ್ನು ನಿಮ್ಮ ತಂದೆಗೆ ತಿಳಿಸಿ, ನಿನ್ನಲ್ಲಿ ದೋಷವು ಇಲ್ಲ ಎಂದು ಸ್ಥಾಪಿಸಿಕೊಳ್ಳ ಬೇಕು. ನಿಮ್ಮ ತಂದೆಯ ಬಳಿಯಲ್ಲಿ ನಾನು ನಿನ್ನ ಪರವಾಗಿ ಸಾಕ್ಷ್ಯವನ್ನು ಕೊಡುವೆನು, ” ಎಂದು ಜಗದೇವನೊಡನೆ ಹೇಳಿದನು. ಅದಕ್ಕೆ ಜಗದೇವನು, “ ನಾನು ಈ ವಿಧ ನಾಗಿ ಮಾಡುವುದರಿಂದ ನನ್ನ ಮಲತಾಯಿಗೆ ಅವಮಾನವಾಗುವುದು, ಮತ್ತು ನಾನು ನನ್ನ ಬಾಹುಬಲದಿಂದ ಕೀರ್ತಿಯನ್ನೂ, ಶ್ರೀಯನ್ನೂ ಪಡೆದ ಹೊರತು ತಂದೆಗೆ ಮುಖವನ್ನು ತೋರಿಸುವುದಿಲ್ಲ ಎಂದು ಮನೆಯಿಂದ ಹೊರಟಾಗ ಪ್ರತಿಜ್ಞೆ ಯನ್ನು ಮಾಡಿದೆನು. ಆದಕಾರಣ ನಾನು ಪಟ್ಟಣಕ್ಕೆ ಹೋಗಿ ಬಾಹುವಿಕ್ರಮ ದಿಂದ ಕೀರ್ತಿಯನ್ನೂ, ಶ್ರೀಯನ್ನೂ ಸಂಪಾದಿಸಿ ತಾಯಿತಂದೆಗಳನ್ನು ನೋಡು ವುದಕ್ಕೆ ಬರುವೆನು, ನೀನು ಊರಿಗೆ ಹೋಗಿ ತಾಯಿಗೆ ನನ್ನ ಕ್ಷೇಮಸಮಾಚಾರ ವನ್ನು ತಿಳಿಸಿ, ಆಕೆಗೆ ಆಯಾಸ ಉಂಟಾಗದಂತೆ ನೋಡಿಕೊಳ್ಳುತ್ತಿರು,” ಎಂದು ಹೇಳಿದನು. ಅದಕ್ಕೆ ಧೀರಸಿಂಹನು ಸಮ್ಮತಿಸಿ, ತನ್ನ ಕುದುರೆಗಳಲ್ಲಿ ಒಂದನ್ನು ಜಗದೇವನಿಗೆ ಕೊಟ್ಟು ಆತನ ಆಜ್ಞೆಯನ್ನು ಪಡೆದು ಧಾರಾನಗರಕ್ಕೆ ಹೊರಟನು. ಅನಂತರ ಜಗದೇವ ವೀರಮತಿಯರು ಮಾರ್ಗದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸುತ್ತ ಕೆಲವು ದಿವಸಗಳಿಗೆ ಪಟ್ಟಣ ಎಂಬ ಅಪರನಾಮವುಳ್ಳ ಅಣಹಿತ ಪುರದ ಸವಿಾಪಕ್ಕೆ ಬಂದರು. ಆ ನಗರ ಸಮಿಾಪದಲ್ಲಿ ಸಹಸ್ರಲಿಂಗತಟಾಕ ಎಂಬ ದೊಡ್ಡ ಕೆರೆಯು ಇತ್ತು. ಈ ದಂಪತಿಗಳು ಆ ಕೆರೆಯ ತೀರದಲ್ಲಿ ಇಳಿ ದರು. ಜಗದೇವನು ವೀರಮತಿಯನ್ನೂ , ಕುದುರೆಗಳನ್ನೂ ಅಲ್ಲಿಯೇ ಬಿಟ್ಟು, ತಾನು ವಾಸಕ್ಕೆ ಅನುಕೂಲವಾದ ಸ್ಥಳವನ್ನು ನೋಡಿಕೊಂಡು ಬರಲು ಪಟ್ಟಣ ದೊಳಕ್ಕೆ ಹೋದನು. ಜಗದೇವನು ಗ್ರಾಮವನ್ನು ಪ್ರವೇಶಿಸಿದ ಸ್ವಲ್ಪ ಕಾಲಕ್ಕೆ ನೀರಿಗಾಗಿ ಒಬ್ಬ ಹೆಂಗಸು ಕೆರೆಗೆ ಬಂದಳು. ಆಕೆಯು ವೀರಮತಿಯನ್ನು ನೋಡಿ ಜಾಣತನದಿಂದ