ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೀರನು ತಿ. ೬೧. ಈಕೆಯ ಹೆಸರನ್ನೂ , ಈಕೆಯ ಗಂಡನ ಹೆಸರನ್ನೂ, ಮಾವನ ಹೆಸರನ್ನೂ ಕೇಳಿ ತಿಳಿದುಕೊಂಡಳು, ಅನಂತರ ಮನೆಗೆ ಹೋಗಿ ವೀರಮತಿಯ ವಿಷಯವನ್ನು ತನ್ನ ಯಜಮಾನಿಗೆ ತಿಳಿಸಿದಳು. ಆ ಕಾಲದಲ್ಲಿ ಆ ಪಟ್ಟಣವು ಹನ್ನೆರಡು ಕೋಶ ಗಳ ವೈಶಾಲ್ಯ ಉಳ್ಳದುದಾಗಿಯೂ, ಬಹು ರಮ್ಯವಾಗಿಯೂ ಇತ್ತಂತೆ. ಆ ಪಟ್ಟಣವನ್ನು ಜಯಸಿಂಗ್ ಸಿದ್ದರಾಜ ಎಂಬ ಅರಸನು ಪಾಲಿಸುತಲಿದ್ದನು. ಆತನು ಧರ್ಮಾತ್ಮನೂ, ದಯಾಮಯನೂ ಆದ ರಾಜನಾದರೂ ತನ್ನ ರಾಜ್ಯ ದಲ್ಲಿರುವ ಅಧಿಕಾರಿಗಳನ್ನು ಪರೀಕ್ಷಿಸದೆ ಅವರಲ್ಲಿ ನಂಬಿಕೆಯುಳ್ಳವನಾಗಿ ಇದ್ದುದ ರಿಂದ, ಆ ಪಟ್ಟಣದಲ್ಲಿ ಅನೇಕ ಅನ್ಯಾಯಗಳು ನಡೆಯುತಲಿದ್ದವು. ಆ ನಗರದ ಕೊತ್ವಾಲನಾದ ಡುಂಗರಸಿಯು ತಾನು ಕಳ್ಳತನವನ್ನು ಮಾಡುತ್ತ, ಇತರ ಕಳ್ಳ ರನ್ನು ಪ್ರೋತ್ಸಾಹಿಸಿ ಅವರು ತಂದ ಹಣದಲ್ಲಿ ಭಾಗವನ್ನು ತೆಗೆದುಕೊಳ್ಳುತ ಲಿದ್ದನು, ಮತ್ತು ಅವನು ವೇಶ್ಯಾಂಗನಾಸಕ್ತನಾಗಿ ಗ್ರಾಮದಲ್ಲಿ ಅನೇಕ ವೇಶ್ಯ ಯರಿಗೆ ವಾಸಮಾಡುವುದಕ್ಕೆ ಗ್ರಹಗಳನ್ನು ಕೊಟ್ಟು ಆದರಿಸುತಲಿದ್ದನು. ಅವ ರಲ್ಲಿ ಜಾಮೋತಿ ಎಂಬ ವೇಶ್ಯಯು ಅತಿ ಸುಂದರಳಾಗಿದ್ದುದರಿಂದ ಅಸಂಖ್ಯ ಧನ ರಾಶಿಗಳನ್ನು ಆರ್ಜಿಸಿದಳು. ಅವಳ ಮನೆಯು ರಾಜಭವನದಂತೆಯೂ, ಅವಳ ತೋಟವು ರಾಜೋದ್ಯಾನವನದಂತೆಯೂ ಕಾಣುತಲಿತ್ತು, ಅವಳು ತನ್ನ ದೇಹ ವನ್ನು ವಿಕ್ರಯಿಸುತಲಿದ್ದುದಲ್ಲದೆ, ಪಟ್ಟಣವಾಸಿಗಳಾದ ಅನೇಕ ಸಾಧಿಯರನ್ನು ಮೋಸದಿಂದ ತನ್ನ ಮನೆಗೆ ಕರೆತಂದು, ಅವರನ್ನು ಬಲವಂತವಾಗಿ ಕಾಮುಕರಿಗೆ ಅರ್ಪಿಸಿ ಅವರ ಪಾತಿವ್ರತ್ಯವನ್ನು ಹಾಳುಮಾಡುತ್ತಿದ್ದಳು, ಕೊತ್ವಾಲನ ಮಗ ನಾದ ಲಾಲುದಾಸನು ಜಾರಶಿರೋಮಣಿ ಎಂಬ ಕೀರ್ತಿಯನ್ನು ಪಡೆದು ಜಾಮೋ ತಿಗೆ ದಾಸನಾಗಿದ್ದನು. ಮೇಲೆ ನೀರಿಗಾಗಿ ಕೆರೆಗೆ ಬಂದು ವೀರಮತಿಯ ಪರಿಚಯವನ್ನು ತಿಳಿದು ಕೊಂಡು ಹೋದ ಹೆಂಗಸು ಈ ಜಾಮೋತಿಯ ಸೇವಕಳು, ದಾಸಿಯ ಮಾತು ಗಳನ್ನು ಕೇಳಿದ ಕೂಡಲೆ ಜಾಮೋತಿಯು ರಾಜಸ್ತ್ರೀಗೆ ಯೋಗ್ಯವಾದ ವೇಷವನ್ನು ಧರಿಸಿ ಮೇನೆಯಲ್ಲಿ ಕುಳಿತು, ಕೆಲವು ಜನ ಭಟರನ್ನು ಕರೆದುಕೊಂಡು ವೀರ ಮತಿಯ ಬಳಿಗೆ ಹೊರಟಳು. ಅಲ್ಲಿ ಆಕೆಯನ್ನು ನೋಡಿದ ಕೂಡಲೆ ಆಕೆಯ ಸವಿಾಪಕ್ಕೆ ಹೋಗಿ, “ ಇತರ ಜನರಂತೆ ನೀವು ಇಳಿಯುವುದಕ್ಕೆ ಬೇರೆ ಸ್ಥಳವನ್ನು ಹುಡಿಕಿಕೊಳ್ಳುವುದು ನ್ಯಾಯವೇ? ನೀವು ಬರುವ ವಿಷಯವನ್ನು ನಮಗೆ ಮೊದಲೇ ತಿಳಿಸಿದ್ದ ಪಕ್ಷದಲ್ಲಿ ನಾವು ನಿಮಗೆ ಎದುರಾಗಿ ಬರುತಲಿದ್ದೆವು. ನಾನು ಉದ ಯಾದಿತ್ಯನ ಚಿಕ್ಕಮ್ಮನ ಮಗಳು, ಜಗದೇವನು ನನಗೆ ಸೋದರಳಿಯನಾಗ ಬೇಕು, ವಾಸಕ್ಕೆ ಅನುಕೂಲವಾದ ಸ್ಥಳವನ್ನು ಹುಡುಕುತಲಿದ್ದ ಜಗದೇವನನ್ನು ಅರಸನು ಗುರುತಿಸಿ ರಾಜಮಂದಿರಕ್ಕೆ ಕರೆದುಕೊಂಡು ಹೋದನು. ನೀನು ಇಲ್ಲಿ