ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೨ ಅಬಲಾ ಸಚ್ಚರಿತ್ರ ರತ್ನ ಮಾಲೆ. ಇರುವುದನ್ನು ಆತನಿಂದ ತಿಳಿದು, ನಿನ್ನನ್ನು ರಾಜಭವನಕ್ಕೆ ಕರೆದುಕೊಂಡು ಹೋಗುವುದಕ್ಕೆ ಬಂದೆನು, ಕುದುರೆಗಳನ್ನೂ, ಇತರ ಪದಾರ್ಥಗಳನ್ನೂ ಭಟರು ತೆಗೆದುಕೊಂಡು ಬರುತ್ತಾರೆ. ನೀನು ಈ ಮೇನೆಯೊಳಗೆ ಕುಳಿತುಕೋ, ಮನೆಗೆ ಹೋಗೋಣ,” ಎಂದಳು. ನಿಷ್ಕಪಟಹೃದಯಳಾದ ವೀರಮತಿಯು ಅವಳ ಮಾತುಗಳು ನಿಜವಾದುವುಗಳು ಎಂದು ನಂಬಿ ಆ ವೇಶ್ಯಯೊಡನೆ ಪಲ್ಲ ಕಿಯಲ್ಲಿ ಕುಳಿತು ರಾಜಗೃಹಕ್ಕೆ ಸಮಾನವಾದ ಅವಳ ಮನೆ ಯನ್ನು ಪ್ರವೇಶಿಸಿದಳು. ಅನಂತರ ಜಾಮೋತಿಯು ವೀರಮತಿಗೆ ಅಭ್ಯಂಗನ ಸ್ನಾನವನ್ನು ಮಾಡಿಸಿ, ಒಂದೆರಡುಗಳಿಗೆಯಾದ ಅನಂತರ ಆಕೆಯನ್ನು ಭೋಜನಕ್ಕೆ ಕರೆದಳು. ಆಗ ವೀರಮತಿಯು, “ ನಿಮ್ಮ ಸೋದರಳಿಯನು ಊಟಮಾಡಿದ ಹೊರತು ನಾನು ಊಟಮಾಡುವುದಿಲ್ಲ,” ಎಂದು ಹೇಳಿ ದಳು, ಆಮೇಲೆ ಜಾಮೋತಿಯು ಒಬ್ಬ ದಾಸಿಯನ್ನು ಕರೆದು, “ ನಿಮ್ಮ ಸೋದ ರತ್ತೆ ಯು ನಿನಗಾಗಿ ಕಾದುಕೊಂಡಿರುವರು ಎಂದು ಹೇಳಿ ಜಗದೇವನನ್ನು ಕರೆದು ಕೊಂಡು ಬಾ,” ಎಂದು ಹೇಳಿದಳು, ಆ ಸೇವಕಳು ಹೋದಂತೆಯೇ ನಟಿಸಿ, ಸ್ವಲ್ಪ ಹೊತ್ತಿಗೆ ಬಂದು, “ ಅಮ್ಮಾ! ಜಗದೇವನು ಮಹಾರಾಜರೊಡನೆ ಊಟ ವನ್ನು ಮಾಡಿದನು, ನಿಮ್ಮನ್ನೂ, ವೀರಮತಿಯವರನ್ನೂ ಭೋಜನ ಮಾಡು ವಂತೆ ಹೇಳಿದನು, ” ಎಂದು ನುಡಿದಳು, ಅನಂತರ ವೀರಮತಿಯು ಊಟಮಾಡಿ ದಳು. ಆಮೇಲೆ ಆ ನಾರಯುವತಿಯು ವೀರಮತಿಯನ್ನು ಒಂದು ಸುಂದರ ವಾದ ಕೊಠಡಿಗೆ ಕರೆದುಕೊಂಡು ಹೋಗಿ, ಅಲ್ಲಿ ವಿಶ್ರಮಿಸುವಂತೆ ಹೇಳಿ ಹೊರಟು ಹೋದಳು, ಈ ವಿಷಯಗಳನ್ನೆಲ್ಲ ನೋಡಿ ವೀರಮತಿಗೆ ಸ್ವಲ್ಪ ಸಂಶಯ ಉಂಟಾ ಯಿತು, ಆದರೆ ಸಾಯಂಕಾಲಕ್ಕೆ ಪತಿಯು ಅಂತಃಪುರಕ್ಕೆ ಬರುವನೋ ಏನೋ ಎಂಬ ಆಶೆಯಿಂದ ಆ ಕೊಠಡಿಯಲ್ಲಿ ಮಲಗಿಕೊಂಡಳು. ಸಾಯಂಕಾಲವು ಆದ ಮೇಲೆ ಜಾಮೋತಿಯು ಬಂದು ವೀರಮತಿಯನ್ನು ಊಟಕ್ಕೆ ಕರೆದಳು. ಆದರೆ ವೀರಮತಿಯು ತನ್ನ ಪತಿಯು ಬಂದು ಊಟಮಾಡಿದ ಹೊರತು ತಾನು ಊಟ ಮಾಡುವುದಿಲ್ಲ ಎಂದು ದೃಢವಾಗಿ ಹೇಳಿದಳು. ಆಗ ಅವಳು ಏನೂ ಮಾಡ ಲಾರದೆ ಕೆಲವು ಉಪಾಹಾರಗಳನ್ನು ವೀರಮತಿಯ ಬಳಿಯಲ್ಲಿ ಇಟ್ಟು ತಿನ್ನುವಂತೆ ಹೇಳಿ ಹೊರಟುಹೋದಳು. ಹೋಗುವಾಗ ಕೊಠಡಿಯ ಹೊರಗಿನ ಚಿಲಕನ್ನು ಹಾಕಿಕೊಂಡು ಹೋದಳು. ಇದನ್ನೆಲ್ಲ ನೋಡಿ ಇದು ಒಂದು ಇಂದ್ರಜಾಲವಾಗಿ ಇದೆ ಎಂದು ಭಾವಿಸಿ ಭೀತಚಿತ್ತಳಾಗಿ, ಆ ಕೊಠಡಿಯಲ್ಲಿ ಕುಳಿತುಕೊಂಡು ಪ್ರತಿಯ ಆಗಮನವನ್ನು ನಿರೀಕ್ಷಿಸುತ್ತಿದ್ದಳು. ಆ ಪಟ್ಟಣದ ಕೊತ್ವಾಲನ ಮಗನಾದ ಲಾಲುದಾಸನಿಗೆ ಪ್ರತಿದಿವಸವೂ ಒಬ್ಬ ಹೊಸಯುವತಿಯನ್ನು ಸಮರ್ಪಿಸುವದು ಜಾಮೋತಿಯ ನಿತ್ಯವ್ರತವಾಗಿ