ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೀರಮತಿ. ೭೩ ಇದ್ದಿತು. ಈದಿವಸ ಸೌಂದರ್ಯರಾಶಿಯಾದ ವೀರಮತಿಯು ದೊರೆತು ದರಿಂದ ಜಾಮೋತಿಯು ಬಹಳ ಸಂತೋಷಿಸಿ, ಈದಿವಸ ತನಗೆ ವಿಶೇಷ ಬಹುಮಾನವು ದೊರೆಯುವುದು ಎಂದು ನಿಶ್ಚಯಿಸಿಕೊಂಡು ಇದ್ದಳು. ಸಾಯಂ ಕಾಲವೇ ಜಾಮೋತಿಯು ಲಾಲುದಾಸನಿಗೆ ವೀರಮತಿಯ ವೃತ್ತಾಂತವನ್ನು ತಿಳಿಸಿ, ಆಕೆಯ ಗಂಡನ ಹೆಸರನ್ನು ಹೇಳಿ ಆತನನ್ನು ಕಾರಾಗೃಹದಲ್ಲಿ ಹಾಕಿಸಿ, ರಾತ್ರಿಯಾದಮೇಲೆ ತನ್ನ ಮನೆಗೆ ಬರುವಂತೆ ಹೇಳಿದಳು, ಅದರಂತೆಯೇ ಅವನು ರಾತ್ರಿ ನಿಯಮಿತಕಾಲಕ್ಕೆ ವೇಷವನ್ನು ಧರಿಸಿ, ಸುರಾಪಾನವನ್ನು ಮಾಡಿ ಜಾಮೋತಿಯ ಮನೆಗೆ ಬರಲು, ಆ ಚಂಡಾಲಳು ತನಗೆ ಬರಬೇಕಾದ ಧನ ವನ್ನು ಮೊದಲೇ ತೆಗೆದುಕೊಂಡು, ಅವನಿಗೆ ವೀರಮತಿಯು ಇದ್ದ ಮಹಡಿ ಯನ್ನು ತೋರಿಸಿ, ತನ್ನ ನಿವಾಸಸ್ಥಳಕ್ಕೆ ಹೊರಟುಹೋದಳು. ಆ ನರಾಧ ಮನು ಮಹಡಿಯನ್ನು ಹತ್ತುವಾಗ ಉಂಟಾದ ಶಬ್ದವನ್ನು ಕೇಳಿ, ಭರ್ತೃಧ್ಯಾನ ಪರಾಯಣಳಾದ ಚರಿತ್ರನಾಯಕಿಯು ತನ್ನ ಪತಿಯು ಬರುತ್ತಿರುವನು ಎಂದು ಸಂತೋಷಿಸಿದಳು, ಆದರೆ ಈ ಕೀಚಕನು ಒಳಗೆ ಪ್ರವೇಶಿಸಿದಮೇಲೆ, ಅವನ ಭಯಂಕರ ರೂಪವನ್ನು ನೋಡಿ, ಪರಪುರುಷನು ಎಂದು ಗಡಗಡನೆ ನಡುಗಲು ಆರಂಭಿಸಿದಳು. ಉತ್ತರಕ್ಷಣದಲ್ಲಿಯೇ ಪತಿವ್ರತಿಯರಿಗೆ ಸ್ವಾಭಾವಿಕವಾದ ಧೈರವನ್ನು ಅವಲಂಬಿಸಿ, ಬಹುವಿಧವಾದ ನೀತಿವಚನಗಳನ್ನು ಬೋಧಿಸಿ, ಆ ದುಷ್ಟನನ್ನು ದುರ್ಮಾರ್ಗತ್ವದಿಂದ ತೊಲಗಿಸಲು ಪ್ರಯತ್ನಸಿದಳು. ಆ ಮಾತುಗಳನ್ನು ಕೇಳದೆ ಆ ನರಪಶುವು ಮದೋನ್ಮತ್ತನಾಗಿ, ವಿವೇಕ ಶೂನ್ಯ ನಾಗಿ ವೀರಮತಿಯ ಪವಿತ್ರ ದೇಹವನ್ನು ತನ್ನ ಪಾಪಹಸ್ತಗಳಿಂದ ಮುಟ್ಟುವು ದಕ್ಕೆ ಹೋಗಲು, ಇನ್ನು ಸುಮ್ಮನೆ ಇರುವುದು ಅಯುಕ್ತವು ಎಂದು ಎಣಿಸಿ, ತನ್ನ ಸೊಂಟದಲ್ಲಿ ಇದ್ದ ಗುಪ್ತ ಖಡ್ಗವನ್ನು ಸರನೆ ಎಳೆದು ಆ ಮಾನವಾಧನ ನನ್ನು ಎರಡು ತುಂಡಾಗಿ ಕತ್ತರಿಸಿದಳು. ಈ ಖಡ್ಗವು ಎಲ್ಲಿ ಇದ್ದಿತು ? ಎಂದು ಪಾಠಕರಿಗೆ ಸಂಶಯವು ತೋರಬಹುದು. ಆಕಾಲದಲ್ಲಿ ಪ್ರತಿಯೊಬ್ಬ ರಾಜಪುತ್ರರಮಣಿಯೂ ಬಂಗಾರದ ಡಾಬಿನಂತೆ ಇರುವವರೆಯಲ್ಲಿ ಬಗ್ಗಿಸಿ ದರೂ, ಮುರಿಯದೆ ಇರುವ ಉಕ್ಕಿನಿಂದ ಮಾಡಿದ ಖಡ್ಗವನ್ನು ಇಟ್ಟು ಧರಿಸಿಕೊಳ್ಳು ತಲಿದ್ದರು. ಅದು ನೋಡುವುದಕ್ಕೆ ಡಾಬಿನಂತೆಯೇ ಕಾಣುತ್ತಿತ್ತು. ಮಾನವನ್ನು ಕಾಪಾಡಿಕೊಳ್ಳಬೇಕಾದ ಸಮಯದಲ್ಲಿ, ರಾಜಪುತ್ರಸ್ತ್ರೀಯರು ಈ ಖಡ್ಡ ವನ್ನು ಉಪಯೋಗಿಸುತ್ತ ಇದ್ದರು. ಈ ಖಡ್ಗ ದಿಂದಲೇ ವೀರಮತಿಯು ತನ್ನ ಪಾತಿವ್ರತ್ಯವನ್ನು ಕಾಪಾಡಿಕೊಂಡಳು. ಈ ಸಾಷ್ಟ್ರೀತಿಲಕವನ್ನು ಯಾರು ತಾನೇ - ಸ್ತುತಿಸದೇ ಇರಬಲ್ಲರು ! ಸ್ತ್ರೀಪುರುಷರಿಗೆಲ್ಲರಿಗೂ ವಂದನಾರ್ಹಳಾದ ಈ ನಾರೀರತ್ನವು ಮುನಿತಿಲಕನಾದ ಮನುವು ಬರೆದ :