ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ ಸೀಬಜೆ. -ಕವಿಚರಿತ್ರೆ:- ಈ ಗ್ರಂಥಕರ್ತನಿಗೆ ಚೌಂಡರಾಜನೆಂದು ಹೆಸರು. ಈತನು ಭಾ ರಾಜಗೋತ್ರದ ಮಧುಸೂದನನೆಂಬ ಬ್ರಾಹ್ಮಣನ ಮಗನು, ಈತನ ತಾಯಿ ಮಲ್ಲವ್ವ ; ಪತ್ನಿ, ಲಕ್ಷ್ಮಿ' - *ಸರಸಕವೀಶ್ವರ' ನೆಂಬವನು ಅಣ್ಣನೆಂದು ಹೇಳಿಕೊಳ್ಳುತ್ತಾನೆ. ಅಲ್ಲದೆ, ತಾನು “ ಉದ್ಧಂಡ ಮನೋ ಹರಪ್ರಚುರಪ್ಪ” ಎಂದು ಹೇಳುತ್ತಾನೆ, “ವಿಟ್ಠಲಪದಾಂಭೋಜಾತ ಶೃಂಗಂ” “ಹರಿಪಾದತೋಣಪಂಕರುಹನುಧುವ್ರತಂ” ಎಂದು ಹೇಳಿಕೊ Yವುದರಿಂದ, ಈತನು ವಿಷ್ಣು ಭಕ್ತನೆಂದು ವ್ಯಕ್ತವಾಗುತ್ತದೆ. ಈತನು “ಪಂಡರೀರಾಯನಭಂಗವಿಟ್ಠಲಂ ಎಂದು ತನ್ನ ಇದೈವವನ್ನು ಸ್ತು ತಿಸಿರುವುದರಿಂದ, ಬಹುಶಃ ಪಂಡರಾಪುರದವನೆಂದು ತೋರುತ್ತದೆ. ಈತ ನಿಗೆ ('ಕವಿತಾವಿಲಾಸ” (ಕವಿರಾಜಶೇಖರ' ಎಂಬ ಬಿರುದುಗಳು ಧ್ವಂತೆ ತೋರುತ್ತದೆ. ಈತನು ಯಾವ ಕಾಲದಲ್ಲಿದ್ದನೋ ನಿಶ್ಚಯಿಸಿ ಹೇಳಲಾಗುವುದಿಲ್ಲ. ಈ ಕವಿಯನ್ನು ಇತರ ಕವಿಗಳು ಯಾರೂ ಸ್ತುತಿಸಿರುವಂತೆ ಕಾಣುವು ದಿಲ್ಲ. ಈ ಗ್ರಂಥದಿಂದ ಉದ್ಭತವಾದ ಪದ್ಯಗಳ ಎಲ್ಲಿಯ ಉದಾ ಹೃತವಾಗಿಲ್ಲ. ಆದರೂ ಈ ಗ್ರಂಥವು ನಾಗವರ್ಮನ (ಕಾದಂಬರಿ? ಯನ್ನೂ, ನೇಮಿಚಂದ್ರನ ವಾಸವದತ್ತಾಚ್ಛಾಯಾನುರೂಪವಾದ ಲೀಲಾ ವತಿ' ಯನ್ನೂ, ನೋಡಿ ಬರೆದಿರಬಹುದೆಂಬ ಊಹೆಗೆ ಅವಕಾಶವಿರುವು - ದರಿಂದಲೂ, ಈತನು ಕರ್ಣಾಟಕ ಪ್ರರ ಕವಿಗಳಲ್ಲಿ ಸಂಪ, ಪೊನ್ನ, ಚಂದ್ರ, ರುದ್ರಭಟ್ಟ- ಇವರುಗಳನ್ನು ಸ್ತುತಿಸಿರುವುದರಿಂದಲೂ, ಇವ ರುಗಳಲ್ಲಿ ಆಧುನಿಕನಾದ ರುದ್ರಭಟ್ಟನಿಗಿಂತಲೂ ಈಚೆಯವನಾಗಿರಬೇಕು,