ವಿಜ್ಞಾಪನೆ. ಶ್ರೀಬಂಕಿಮ.ಬಾಬುಯವರ ತರುವಾಯ ಪ್ರಸಿದ್ಧ ಲೇಖಕರೆಂದು ಪ್ರಖ್ಯಾತ ರಾಗಿರುವ ಶ್ರೀನನಿಲಾಲವಂದ್ಯೋಪಾಧ್ಯಾಯರವರ ಗ್ರಂಥವನ್ನವಲಂಬಿಸಿ ಅವರ ಅಪ್ಪ ಣೆಯನ್ನು ಪಡೆದು, ಈ ಗ್ರಂಥವನ್ನು ಕನ್ನಡದಲ್ಲಿ ಬರೆದುದಾಗಿದೆ. ನನಿಲಾಲಬಾಬು ಯವರ ಗ್ರಂಥಗಳು ಸರ್ವತ್ರ ಪ್ರಚಾರವಾಗಿ ಬಹು ಮುಖವಾಗಿ ಪ್ರಶಂಸಿಸಲ್ಪಟ್ಟಿವೆ. ಚರಿತ್ರಾಂಕನದಲ್ಲಿಯೂ, ಘಟನೆಗಳನ್ನು ಸಮಂಜಸಗೊಳಿಸಿ ಹೇಳುವುದರಲ್ಲಿಯೂ, ವರ್ಣ ನೆಗಳ ಕೌಶಲದಲ್ಲಿಯ, ಭಾಷೆಯ ರಮಣೀಯತೆಯಲ್ಲಿಯೂ, ನಬಾಬುಯವರು ತಮ್ಮ ಅಸಾಧಾರಣ ಕೃತಿತ್ವವನ್ನು ತೋರಿದ್ದಾರೆ. ಅವರ ಗ್ರಂಥಗಳಲ್ಲಿ ಭಾವಗಳು ಆದ್ಯಂತವಾಗಿ ವಿಶುದ್ಧವಾಗಿರುವುವು. ಎಲ್ಲರೂ ಏಕತ್ರ ಕುಳಿತು ಓದಬಹುದು, ನಸಿ ಬಾಬುರವರ ಕೃತಿತ್ವವು ಆದರ್ಶಯೋಗ್ಯವಾದುದು. ಅಕಬರಷಕನ ವಿರಾಟು ಚು ತ್ರೆಯು ಪರಿಸ್ಸುಟವಾಗಿರುವುದು, ಅಜಯಸಿಂಹನು ರಾಜಪೂತರ ವೀರತ್ವದ ಸಜೀವ ಎಗ್ರಹವಾಗಿ ತೋರುವನು, ಪ್ರಸಿದ್ದವಾದ ಒಂದಾನೊಂದು ಇಂಗ್ಲೀಷು ಪತ್ರಿಕೆಯು ಅಮೃತಪುಲಿನವನ್ನು ಸಮಾಲೋಚನೆ ಮಾಡುವುದರಲ್ಲಿ ಗ್ರಂಥವನ್ನು ಕುರಿತು ಹೀಗೆಂದು ಹೇಳಿದೆ " The plan of the book shows considerable skill and design, and the execution is worthy of the plan. The heroine in particular, interests, engages, even overPOIVers the reader.” ನನಿಬಾಬುಯವರ ಗ್ರಂಥಗಳನ್ನು ನಾವು ಕನ್ನಡಿಸಿರುವುದರಲ್ಲಿ ಅಮೃತಪುಲಿನವು ಎರಡನೆಯ ಗ್ರಂಥವಾಗಿರುವುದು, ಈ ಗ್ರಂಥವನ್ನು ಧಾರವಾಡ ಕರ್ನಾಟಕ ವಿದ್ಯಾ ವರ್ಧಕ ಸಂಘದವರು ತಮ್ಮ ಮಾಸಪತ್ರಿಕೆಯಲ್ಲಿ ಪ್ರಚಾರಪಡಿಸಿದುದಕ್ಕೆ ಸಲವಾಗಿ ಅವರಿಗೆ ಚಿರಋಣಿಗಳಾಗಿರುವೆವು.– ಇತಿ | ಮೈಸೂರು, ೧೯೦೬, ಬಿ, ವೆಂಕಟಾಚಾರ್ಯ,
ಪುಟ:ಅಮೃತಪುಲಿನ.djvu/೧೦
ಗೋಚರ