ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

7: ಅಮ್ಮ ತಪುಲಿನ

  • * * * * }•+ ' + 1 +1 •
  • * * * * * * * * * : 4 - AP/ 1/V / 4 : : } ೪ •y

ದೊಳು ಬೋಚಿಸಿಕೊಳ್ಳುವನು, ಆದರೆ ಅವಳೆದುರಿಗೆ ಬಂದು ನಿಂತು, ಅವಳ ಆ ಮುಖ ವನ್ನು ನೋಡಿ ಇನಿದಾದ ಅವಳ ನುಡಿಗಳನ್ನು ಕೇಳಿದಾಗ ಅವಳೆಗಾವ ಮಾತನ್ನು ಹೇಳುವುದಕ್ಕೂ ತೋಚದೆ ಸುಮ್ಮನಿರುವನು ! ಅಂಥಾ ಸಮಯದಲ್ಲಿ ಮನನೋಯಿ ಸುವ ನಿಷ್ಟುರವಾದ ನುಡಿಗಳನ್ನು ಹೇಳಿ ಹುಡುಗಿಯು ಮನ ನೊಂದುಕೊಳ್ಳುವಹಾಗೆ ಮಾಡಬಹುದೆ ? ಎಂದು ಹೇಳಿಕೊಳ್ಳುವನು, ಹಾಗಾದರೆ, ಏನೂ ಹೇಳದೆ ಅವಳ ಸಹ ವಾಸವನ್ನು ಬಿಟ್ಟು ಅವಳನ್ನು ನೋಡುವ ಆಶೆಯನ್ನು ತೊರೆದು ಒಮ್ಮಿಂದೊಮ್ಮ ದೂರ ದೇಶಕ್ಕೆ ಹೊರಟು ಹೋಗಿ ಬಿಡುವುದುಚಿತವೆ ? ಹೀಗೆಂದು ಯೋಚಿಸಿಕೊಂಡಾಗ ಮನಕ್ಕೆ ವ್ಯಾಕುಲವುಂಟಾಗುವುದು. ತಂದೆಯಿಲ್ಲದ ಸರಳತನದ ಹುಡುಗಿಯನ್ನು ವಿಪತ್ಕಾಲದಲ್ಲಿ ಕೈ ಹಿಡಿಯದೆ ಕಣ್ಣೀರಲ್ಲಿ ತೇಲಿಬಿಟ್ಟು ಹೊರಟು ಹೋಗುವುದು ಪಾಷಂಡನ ಕೆಲಸ ! ಹಾಗಾದರೆ ಹುಡುಗಿಯನ್ನು ತಾನೂ ಪ್ರೀತಿಸುತ್ತಿದ್ದನೆ? ಎಂಬೀ ಪ್ರಶ್ನೆಯು ಇದ್ದ ಹಾಗೆ ಮಿಂಚಿನ ಹೊಳವಿನಹಾಗೆ ಮನದಲ್ಲಿ ಹೊಳಿತ ಹಾಗಾಯಿತು ! ಮನದೊಳಗೆ ದೃಷ್ಟಿಸಿ ನೋಡುವುದಕ್ಕೆ ಸಲವಾಗಿ ಕಣ್ಣು ಮುಚ್ಚಿಕೊಂಡು, ಪ್ರಾಣ ದೊಳಗೆ, ಅಂಧಕಾರ ಮಯವಾದ ಹೃದಯದಂತಸ್ತಲದಲ್ಲಿ ಉಜ್ವಲವಾಗಿ ಬೆಳಗುತ್ತಿದ್ದ .ಚಿರಪ್ರೇಮಮಯವಾದ ದೇವಿಯ ಮೂರ್ತಿಯೊಂದು ಮಾತ್ರ ಕಣೇಳಿಸುತ್ತಿತ್ತು. ಚಿಕ್ಕಂದಿನಿಂದ ಯಾವ ಮೂರ್ತಿಯನ್ನಾ ರಾಧಿಸುತ್ತಿದ್ದನೋ ನಿದ್ರಾವಸ್ಥೆಯಲ್ಲಿಯೂ, ಚಾಗೃತಾವಸ್ಥೆಯಲ್ಲಿಯ, ಕಯನದಲ್ಲಿಯ, ಸ್ವಪ್ನದಲ್ಲಿಯ, ಸಂಪತ್ತಿನಲ್ಲಿಯೂ, ವಿಪತ್ತಿನಲ್ಲಿಯೂ, ಆನದೊತ್ಸವಗಳಲ್ಲಿಯೂ, ಯುದ್ಧದ ಕೋಲಾಹಲದಲ್ಲಿಯ ಯಾವ ಮೂರ್ತಿಯು ಹೃದಯದಲ್ಲಿ ವಿರಾಜಮಾನವಾಗಿದ್ದಿತೋ ಅದೇ ಪ್ರತಿವೆ.ಯೇ ಈಗಲೂ ಕಳಿಸುತ್ತಿತ್ತು, ಅವನು ಯಾವ ಪ್ರತಿಮೆಯನ್ನು ವಿಸರ್ಜಿಸುವುದಕ್ಕೆ ಸಲವಾಗಿ ದನೆಯನ್ನು ಬಿಟ್ಟು ನೂರಾರು ಗಾವದದ ದೂರ ಓಡಿ ಬಂದು ಗಿರಿ ಗುಹೆಗಳಲ್ಲಿಯೂ 'ಘೋJಂಧಕಾರದಲ್ಲಿಯೂ ಯೋಗಿಯ ಹಾಗೆ ಅಲಿಯುತ್ತಿದ್ದನೋ, ಈಗಲೂ ಅದೆ. ಪ್ರತಿಮೆಯು ಅದೇ ಪೂರ್ಣಗೌರವದಿಂದಲೂ ಅದೇ ಸೌಂದರ್ಯದಿಂದಲೂ ಹೃದಯದ .ಮಧ್ಯದಲ್ಲಿ ಪ್ರಕಾಶಿಸುತ್ತಿತ್ತು ! ಗಿರಿರಾಣಿಯಾದರೋ ! ಆ ಗೌರವಮಯವಾದ ಆನಂದ ಮಯವಾದ ಒರಿಯೆಯ ಪ್ರತಿಮೆಯ ಚರಣತಲದಲ್ಲಿ ಅಸ್ಪಷ್ಟವಾಗಿ ಲಕ್ಷವನ್ನು ತಾಳವಿರುವ ಛಾಯೆಯು ಬಿದ್ದಿರುವ ಪಾಗೆ ತೋರುವಳು, ಛಾಯೆಯು ಬೆಳಕಿನಲ್ಲಿ ಹಿಡಿದು, ಬೊಂಬೆಯಾಗಿ ಪ್ರಾಣಪ್ರತಿಷ್ಠೆ ಮಾಡಿ, ಅದನ್ನು ಪೂರ್ಣಗೌರವಮಯವಾದ ಪ್ರತಿಮೆಯು ಇದ್ದ ಸಿಂಹಾಸನದ ಮೇಲೆ ಪ್ರತಿಷ್ಟೆ ಮಾಡುವುದು ಸಂಭವನೆ? ಇದಕ್ಕೆ ಸಬವಾಗಿಯ ದೇವರು ಅವನನ್ನು ಗಿರಿರಾಣಿಯ ಬಳಿಗೆ ಕರೆತಂದು ಬಿಟ್ಟಿದ್ದಾನೆಯೆ ?