FL WMV24, ಏಳನೆಯ ತರಿಬ್ಬರ » /*/41, 1/1/1 #' + *..' G /Yi Arvyn/Neadinhwnto 1 ಆv/ »» ಹಾದಿಯನ್ನಡಗಿಸಿದ್ದ ಸೈನ್ಯದವರನ್ನು ನಿಮಿಷದಲ್ಲಿ ಹೊಡೆದು ಹಾಕಿ ಒಬ್ಬೊಂಟಿಗನಾಗಿ ಗಿರಿರಾತಿಯು ಬೆನ್ನಟ್ಟಿದನು, ಅವನ ಕುದುರೆಯು ಬಂಡೆಗಳನ್ನುಲ್ಲಂಘಿಸುತ್ತ ಕಳ್ಳ ಗಳನ್ನು ಹಾರುತ್ತ ಪವನವೇಗದಿಂದ ಹೊರಟಿತು, ಸ್ವಲ್ಪ ದೂರದಲ್ಲೇ ಓಡಿಹೋಗು ತಿದ್ದವರು ಕಣ್ಣಿಗೆ ಬಿದ್ದರು, ಅಜಯನು ಅವರ ಮುಂಬಳಿ ಹೋಗಿ ಅಡ್ಡ ಹಾಕಿದನು, ಸೈನಿಕರು ಒಬ್ಬೊಂಟಿಗನಾಗಿದ್ದ ಅಜಯನನ್ನು ನೋಡಿ ಅಂಜದೆ ಗಿರಿರಾಣಿಯನ್ನ ಕೊಂದಿದ್ದ ವೃದ್ಧನಾಗಿದ್ದ ಸೈನಿಕನು ನಕ್ಕು, 11 ಎಲೈ ಮರ್ಖ ! ಯುದ್ಧ ಕೌಶಲ್ಯ ದಲ್ಲಿ ನಿಪುಣರಾದ ಹತ್ತು ಮಂದಿ ಯೋಧರೆದುರಿಗೆ ತರುಣನೊಬ್ಬನು ನಿಂತು ವ್ಯರ್ಥ ವಾಗಿ ಪ್ರಾಣಬಿಡಲೇಕೆ ಬಂದೆ ? ಎಂದನು, ಅಜಯಸಿಂಹ-ಪ್ರಾಣದಮೇಲೆ ಆಶ ಆದ್ದರೆ ಗಿರಿರಾಣಿಯನ್ನು ಬಿಟ್ಟು ಹೋಗು, ಇಲ್ಲದಿದ್ದರೆ ನಿನ್ನಂಥಾವರು ನೂರುಮಂದಿ ಬಂದರೂ ಈ ಪವಿತ್ರವಾದ ಕತ್ತಿಯೆದುರಿಗೆ ನಿಲ್ಲಲಾರರು, ಹತ್ತು ಮಂದಿ ಯೋಧರು ಏಕಕಾಲದಲ್ಲಿ ಅಜಯನ ಮೇಲೆ ಕತ್ತಿಗಳನ್ನು ಬೀಸಿದರು, ಆದರೆ ಅವುಗಳಲ್ಟಾವದೂ ಅವನ ಮೈಗೆ ಸೋಕಲಿಲ್ಲ, ಅವನ ಉದ್ದ ವಾಗಿದ್ದ ಕತ್ತಿಯ ಝುನಝುನ ಶಬ್ದದಿಂದ ತಿರುಗುವ ವೇಗದಲ್ಲಿ ಅವೆಲ್ಲವೂ ಪ್ರತಿಹತ ವಾಗಿ ಅದರೊಂದಿಗೆ ಇಬ್ಬರ ಕತ್ತಿಗಳು ದೂರ ಹೋಗಿ ಬಿದ್ದವು, ಮತ್ತೊಬ್ಬನ ಬಾಹುವು ಕತ್ತಿಯಸಮೇತ ನೆಲಕ್ಕೆ ಬಿದ್ದಿತು, ದೀರ್ಘ ಸ್ಮಶುವಿನಿಂದ ಮುಚ್ಚಿದ್ದ ಕರಿದ ಮುಂಡವು ದೂರ ಬಿದ್ದು ಉರುಳಿತು, ಆದರೆ ಆ ಸಮಯದಲ್ಲಿ ಮತ್ತೊಂದು ದಳದ ಶತ್ರುಸೈನ್ಯವು ಬಂದು ಸೇರಿ ಅವನನ್ನು ಆಕ್ರಮಣ ಮಾಡಿತು. ಒಬ್ಬನ ಕತ್ತಿಯ ಪೆಟ್ಟಿನಿಂದ ಅಜಯನ ಕುದುರೆಯು ಬಿದ್ದು ಹೋಯಿತು. ಅಜಯನು ಕುದುರೆ ಯಿಂದ ಧುಮುಕಿ ನೆಲದ ಮೇಲೆ ನಿಂತು ಕತ್ತಿಯನ್ನು ಚಾಲನೆ ಮಾಡಿದನು, ಛಿನ್ನ ಮುಂಡಗಳ ಮೇಲೆ ಛಿನ್ನ ಮುಂಡಗಳು ಕತ್ತರಿಸಿ ಬಿದ್ದವು, ಶವದ ಮೇಲೆ ಶವವು `ಬಿದ್ದವು, ರಕ್ತನದಿಯು ಪ್ರಬಲ ಪ್ರವಾಹದಿಂದ ಹರಿಯಿತು, ಆದರೂ ಯುದ್ಧಕ್ಕ. ತೆರಪಿಲ್ಲ, ಅಜಯನ ಕತ್ತಿಯು ಏಕಕಾಲದಲ್ಲಿ ನೂರಾರು ಕೋಲು ಮಿಂಚುಗಳ ಹಾಗೆ ಪೊಳಚುತ್ತ ಪ್ರಚಂಡ ವೇಗದಿಂದ ಶತ್ರುಹೃದಯವನ್ನು ಶೀಳಲಾರಂಭಿಸಿತು ಜಯ ! ರಾಜಪೂತ ವೀರನಿಗೆ ಜಯ ! ಇಂದು ಯವನ ರಕ್ತದಲ್ಲಿ ತೃಷೆಯುಳ್ಳ ಮಿವಾ ರದ ರಾಜಕುಮಾರನ ಕತ್ತಿಯು ದಾಹವು ಇಂಗುವ ಹಾಗೆ ಶತ್ರು ರಕ್ತವನ್ನು ಪಾನ ಮಾಡುತ್ತಿದೆ. ನಾಲ್ಕು ದಿಕ್ಕುಗಳಲ್ಲಿಯೂ ಹಿಂದೂ, ಮುಂದ, ಪಕ್ಕ, ಎಲ್ಲಾ ಕಡೆ ಯಲ್ಲಿಯ ಯವನ ಸೇನೆ / ಮೈಯಲ್ಲಿ ಯವನರ ರಕ್ತಧಾರೆ ! ಪದತಲದಲ್ಲಿ ಯವನರ ದೇಹ, ಯವನರ ಮುಂಡ ಬಹು ಸಂಖ್ಯೆಯುಳ್ಳಾ ಯವನ ಸೈನ್ಯವನ್ನು ಅಜಯಸಿಂಹನು
ಪುಟ:ಅಮೃತಪುಲಿನ.djvu/೧೦೬
ಗೋಚರ