ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

N೧೨ .ಅಮೃತಪುಲಿನ 15• • • • • pr 14 nr\r\n\nnAAAAAA ಕೂಡದೇಕೆ ? ಎಂದು ತೋರಿತು. ಅನೇಕ ಪ್ರಯತ್ನಗಳಿಂದಲೂ ಅನೇಕ ಒಳಸಂಚು ಗಳಿಂದಲೂ ನನ್ನ ಆಶೆಯು ಕೈಗೂಡುವುದಕ್ಕೆ ಬಂದಿದ್ದಿತು. ಬಳಿಕ ತಾವು ಅಕಸ್ಮಾತ್ತಾಗಿ ಬಂದು ಹಿರಣ್ಮಯಿಯ ಮದುವೆಯಾಗುವುದನ್ನು ಅಡ್ಡಿ ಮಾಡಿದುದು ನೆನಪಿನಲ್ಲಿದೆಯೆ ? ಅದಿರಲಿ-ದಿನವು ವರ್ಷದಲ್ಲೂ ವರ್ಷವು ಯುಗದಲ್ಲೂ ಪರಿಣಮಿಸಿ ಹೋಯಿತು. ನನ್ನ ಧನವು ಎಲ್ಲಿಯೂ ಸಿಕ್ಕಲಿಲ್ಲ. ಅನನ್ಶಿಪಾಯಿಯಾಗಿ ನನ್ನ ದೊಡ್ಡಪ್ಪನ ಮಗ ಳಾದ ಮಹಾರಾಣಿ ಚಾಂದಸುಲತಾನೆಯ ಮರೆ ಹೊಕ್ಕಿದನು, ಅವಳು ಈ ನಿರ್ಭಾಗ್ಯ ತಂಗಿಯ ದುಃಖವನ್ನು ನೋಡಿ ಮರುಗಿದನು, ನನ್ನ ಕೋರಿಕೆಯ ಪ್ರಕಾರವೇ ಅವಳು ಬಿರಾರು ದೇಶವನ್ನು ಬಿಟ್ಟುಕೊಟ್ಟು ತಮ್ಮೊಂದಿಗೆ ಸಂಧಿಯನ್ನು ಮಾಡಿಕೊಂಡಳು. ಅವಳ ಹೇಳಿಕೆಯ ಪ್ರಕಾರವೇ ತಮಗೆ ಬರೆದ ಕಾಗದದಲ್ಲಿ ಚಿತ್ರಪಟವನ್ನಿಟ್ಟು ಕಳುಹಿ ಸಿದ್ದೆನು', ಹೀಗೆಂದು ಹೇಳುತ್ತಿದ್ದಹಾಗೆ ಮುಮತಾಜಿಯು ಹುಚ್ಚಿಯ ಪಾಗೆ ನಕ್ಕು ಪುನಃ ಹೇಳತೊಡಗಿದಳು :-ir ಇಂದೇ ನನ್ನ ಆಶಯು ಕೈಗೂಡುವುದು ಅಪ್ಪಣೆ ಯನ್ನು ಕೊಟ್ಟರೆ ಈಗಲೇ ಹೋಗಿ ನನ್ನ ರತ್ನವನ್ನು ತಬ್ಬಿ ಮುದ್ದಿಟ್ಟು ಕೊಳ್ಳುವನು. ಈ ಪ್ರಾಣದ ಜ್ವಾಲೆಯು ಕಡಿಮೆಯಾಗುವುದು,” ಅಕಬರ:-ರಾಜ್‌ ! ಇಷ್ಟು ಕಾವೆಯಾಗಬೇಕೆ ? ಈ ವಿಚಾರವನ್ನು ಕುರಿತು ತಮ್ಮ ಸಂಗಡ ಆಲೋಚಿಸಬೇಕಾಗಿದೆ. ಉನ್ಮಾದಿನಿ :-(ಹಲ್ಲು ಕಡಿದುಕೊಂಡು) ಹೇಳಬೇಕಾದುದನ್ನು ಬೇಗನೆ ಹೇಳೋಣಾಗಲಿ ತಳುವಬೇಡ. - ಸಮಾಜ:-ನಾನು ಹೇಳುವುದನ್ನು ಸ್ಥಿರಚಿತ್ತದಿಂದ ಲಾಲಿಸಬೇಕು, ತಮ್ಮ ವಗಳ ಮಂಗಳಕ್ಕೆ ಸಲವಾಗಿ, ಅವಳ ಭವಿಷ್ಯ ಸುಖಕ್ಕೆ ಸಲವಾಗಿ, ಬಹಳ ಯೋಚಿ ಸುತ್ತಿದ್ದೇನೆ. ಘಟನಾಪರಂಪರೆಯ ಸಂಘಟನದಿಂದ ರಾಣಾಪ್ರತಾಪಸಿಂಹನ ಮಗ ಅಜಯಸಿಂಹನಿಗೂ ಗಿರಿರಾಣಿಗೂ ಪರಸ್ಪರ ಸಮ್ಭಾವವುಂಟಾಗಿದೆ. ಅದು ಕಾರಣ ನನ್ನ ಇಷ್ಟ ಪ್ರಕಾರ ಅವರವರಿಗೆ ಈ ದಿನರಾತ್ರ ಮದುವೆಯಾಗುವುದು, ಈ ಸಂಬಂಧವು ತಮ್ಮ ಮಗಳಿಗೆ ಹೆಚ್ಚು ಮಂಗಳಕರವಾದುದೆಂದು ನಿಮಗೂ ಗೋಚರವಾಗಬಹುದು. ಆದರೆ ಗಿರಿರಾಣಿಯನ್ನು ಹಿಂದೂ ಎಂದು ಎಲ್ಲರೂ ತಿಳಿದಿದ್ದಾರೆ, ಮುಸಲಮಾನಿಯ ಗರ್ಭದಲ್ಲಿ ಹುಟ್ಟಿದವಳೆಂದು ಯಾರೂ ಅರಿಯರು, ನಾನು ಇದುವರೆಗೂ ತಿಳಿದಿರಲಿಲ್ಲ ತಾವು ನಿಜವಾದ ಪರಿಚಯವನ್ನು ಹೊರಪಡಿಸಿದರೆ ಗರ್ವಿತವಾದ ಹಿಂದರಾಜನ ಮಗ ಅಜಯಸಿಂಹನು ಈ ಮದುವೆಗೆ ಸಮ್ಮತಿಸನು. ಆಗ ತಾವಾಗಿಯೇ ತಮ್ಮ ಮಗಳ ಭವಿಷ್ಯ ಸುಖವನ್ನು ನಷ್ಟ ಮಾಡಿದ ಹಾಗಾಗುವುದು, ಆದುದರಿಂದ ತಾವು ಈ ಮದು ವೆಯಾಗುವವರೆಗೂ ತಮ್ಮ ಮಗಳನ್ನು ನೋಡದಿರಬೇಕೆಂದು ಬೇಡುತ್ತೇನೆ.