೧೧! ಅಮೃತಶುಲಿನ \n\n NAAyvhanw \n\nnyhvvvvvvvWMY WWW1 ಮತ್ತೆಲ್ಲೋ ನೋಡಿದ್ದಹಾಗೆ ನೆನಪಿದೆ. ನೀನು ಇದಕ್ಕೆ ಮೊದಲು ಈ ರಾಜ್ಯಕ್ಕೆ ಬಂದಿರ ಲಿಲ್ಲವೆ?” ಎಂದು ಹೇಳಿದಳು, ರಾಜಪೂತ ಸೈನಿಕನು ಚಪಲೆಯ ಮಾತಿಗೆ ಉತ್ತರವನ್ನು ಕೊಡದ ಎದ್ದು ನಿಂತು, " ರಾಣಿ | ಅಪ್ಪಣೆಯಾದರೆ ಈಗ ಹೋಗುತ್ತೇನೆ ರಾತ್ರಿ ಉತ್ಸವದ ಕಾಲದಲ್ಲಿ ಪುನಃ ಬರುವನು” ಎಂದನು. - ಚಪಲೆಯು ಎದ್ದು ನಿಂತು ಮುಂದವರಿದು ಹೋಗಿ ಅವನ ಕೈಯನ್ನು ಹಿಡಿದು, ನಗುತ ನಗುತ್ತ, 11 ಹೋಗುವುದೆಲ್ಲಿಗೆ ? ನಾನು ಕೇಳಿದುದಕ್ಕೆ ಉತ್ತರವನ್ನು ಕೊಡು” ಎಂದಳು. , ಗಿರಿರಾಣಿಯು ತಿರಸ್ಕಾರ ಸೂಚಕವಾದ ಸ್ವರದಿಂದ ಚಪಲೆಯನ್ನು ಕುರಿತು 11 ಛಿ ! ನಿನಗೆ ಸ್ವಲ್ಪವೂ ಲಜ್ಜೆ ಬೇಡವೆ ? ಪುರುಷನೊಂದಿಗೆ ಹೀಗೆ ಸರಸ ಮಾತಾಡು ವುದುಂಟೇ ?” ಎಂದಳು, ಚಪಲೆಯು ರಾಜಪೂತ ಸೈನಿಕನನ್ನು ಆಲಿಂಗನೆ ಮಾಡಿಕೊಂಡು ಅವನ ಮುಖ ವನ್ನು ಮುದ್ದಿಟ್ಟು ನಗುತ, ನಗುತ್ರ, ರಾಣಿ | ದಾಡಿ ಇದ್ದ ಮಾತ್ರಕ್ಕೆ ಪುರುಷರಾಗು ತಾರೆಯೆ? ಹೆಂಗಸರಿಗೆ ಉದ್ದ ದಾಡಿ ಇರುವುದು ನೀವಾವಾಗಲೂ ನೋಡಿಲ್ಲವೆ? ನಿನಗೆ ನೆನಪಿಲ್ಲವೆ? ನಾವು ನಮ್ಮ ಕಾನನದಲ್ಲೊಂದುದಿನ ಒಬ್ಬ ಸನ್ಯಾಸಿಯನ್ನು ನೋಡಲಿ ವೆ? ಅವನಿಗೆ ಜಟೆಯೂ ಇದ್ದಿತು ! ಆದರೆ ಅವನಿಗೂ ಇವನ ಹಾಗೆ ನೀಲ ಪದ್ಮದ ಹಾಗಿದ್ದ ಮುದ್ದಾದ ಕಣ್ಣುಗಳು, ಅವನ ಹಾಗೆ ಮೋಹಗೊಳಿಸುವ ಎಲೋಲ ಕಲಾಕ್ಷ, ಇವನ ಹಾಗೆ ಗುಲಾಬಿಹೂವಿನ ಹಾಗಿದ್ದ ತುಟಿಗಳು ಹೀಗೇವೇ ವಸಂತದ ಪೂಗಾಳಿಗೆ ಬಳುಕುವ ಲತೆಯ ಹಾಗೆ ಮೈ, ಹೀಗೆ ನಿನ್ನ ಕೊಳಲಲ್ಲಿ ಬರುವ ಮಲ್ಲಾರಿ ರಾಗದ ಕಡೆಯ ತಾನದ ಹಾಗೆ ಕಲ್ಲನ್ನು ಕರಗಿಸುವ ಕಂಠಸ್ವರ ಅದಕ್ಕೆ ಸಾಕ್ಷಿ ಬೇಕಾದರೆ ನೋಡು !” ಎಂದು ಹೇಳಿ ರಾಜಪೂತ ಸೈನಿಕನ ದಾಡಿಯನ್ನೂ ಉತ್ತರೀ ಯವನ್ನೂ ಬಲವಾಗಿ ಹಿಡಿದೆಳಿದಳು, ಸೈನಿಕನ ಕೃತ್ರಿವು ದಾಡಿಯು ಕಳಚಿ ನೆಲಕ್ಕೆ ಬಿತ್ತು, ಮುದುರಿದ್ದ ದೀರ್ಘವಾದ ಸೋರ್ಮಡಿಯು ಬಿಚ್ಚಿ ಹೋಗಿ ಚರಣವನ್ನು ಚುಂಬನ ಮಾಡಿತು, ಉಚ್ಚವಾದ ಉರಸು ತೆರೆಯಿಂದ ಮೇಲಕ್ಕೆಸೆದ ಕಮಲಯುಗಳ ರ್ದತೆ ಕಂಪಿತವಾಯಿತು, ಮುಖಮಂಡಲವು ಮೊಬ್ಬಾದ ಮೋಡದಿಂದ ತೆರೆದುಬಿಟ್ಟ ಪೂರ್ಣಚಂದ್ರನ ಹಾಗೆ ಒಮ್ಮಿಂದೊಮ್ಮೆ ದಿವ್ಯ ಕಾಂತಿಯಿದ ಪ್ರಕಾಶಗೊಂಡಿತು | ದಿಬ್ಬಿ೦ಡಲವನ್ನು ಬೆಳಕುಮಾಡಿ ಉದ್ಯಾನವನ್ನು ಸೊಗಯಿಸಿ ಮಾಡುತ್ತಿದ್ದ ಕುಸುಮ
ಪುಟ:ಅಮೃತಪುಲಿನ.djvu/೧೨೬
ಗೋಚರ