ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನ್ನೆರಡನೆಯ ಶರಿಚ್ಛೇದ nn೬ wwwಯ MMWN YYWyVVybwww ರಾಶಿಯನ್ನು ಜರಿದು ಗಿರಿರಾಣಿಯನ್ನೂ ಚಪಲೆಯನ್ನೂ ಬೆರಗುಮಾಡಿ ರಾಜಪೂತ ಸೈನಿ ಕನು ಅತುಲ ಸೌಂದರ್ಯಮಯವಾದ ಭುವನ ಮೋಹಿನೀ ಕಿಶೋರಿಯ ರೂಪವನ್ನು ತಾಳಿದನು | ಚಪಲೆಯು ಸ್ವಲ್ಪ ಹೊತ್ತು ಮುಗ್ಧನೇತ್ರಿಯಾಗಿ ಆ ರೂಪರಾಶಿಯನ್ನು ನೋಡಿ ಬಳಿಕ ಗಿರಿರಾಣಿಯನ್ನು ಕುರಿತು 11 ರಾಣೆ ! ನೋಡಿದೆಯಾ? ನಾನು ಹೇಳಿ ದುದು ನಿಜವೋ ಸುಳ್ಳೋ ? ಯಾವ ದಿನ ನಾನು ಇವಳನ್ನು ಸನ್ಯಾಸಿಯ ವೇಷ ದಲ್ಲಿ ನೋಡಿರೆನೋ ಆ ದಿನವೇ ಇವಳು .ಪುರುಷನಲ್ಲ ಎಂದು ತಿಳಿದೆನು, ಅನುಪಮ ವಾದೀ ಕಾಂತಿಯು ಪುರಷವೇಷದಿಂದ ಮರೆಯಾಗಿ ಹೋಗಬಲ್ಲದ ?” ಎಂದಳು.

ಗಿರಿರಾಣಿಯು ಆಶ್ಚರ್ಯದಿಂದ, “ ಇದು ಆಶ್ಚರ್ಯ ! ನನಗೇನೂ ಗೊತ್ತಾಗ ಲಿಲ್ಲ ! ಅವಳ ಪರಿಚಯವನ್ನು ಕೇಳಿ ನೋಡು, ನನಗೆ ಬಹಳ ಕುತೂಹಲವುಂಟಾಗಿದೆ'. ಎಂದಳು.

ಚಪಲೆಯು ಸುಂದರಿಯ ಕೈಯನ್ನು ಹಿಡಿದು ಗುಲಾಬಿಹೂವಿನ ಹಾಗಿದ್ದ ಅವಳ ಗಲ್ಲವನ್ನು ಹಿಡಿದೆತ್ತಿ, 1 ಸನ್ಯಾಸಿಗಳೆ ! ತಮ್ಮ ತಪೋವನವಿರುವುದೆಲ್ಲಿ ?” ಎಂದಳು. ಗಿರಿರಾಣಿಯು, 1 ಚಪಲೆ ! ಕುಚೋದ್ಯವನ್ನು ಬಿಡು. ಪರಿಚಯವನ್ನು ಕೇಳು? ಎರ:ಗಳು. ಚಪಲೆ :-(ಕೈಮುಗಿದುಕೊಂಡು) ಹಾಗಾದರೆ ಸನ್ಯಾಸಿಮಹಾಶಯರೆ ತಾವು ಯಾವ ದೇಶದ ಸನ್ಯಾಸಿಗಳು 7 ಈ ಸನ್ಯಾಸಮತವನ್ನು ಉದ್ಯಾಪನೆ ಮಾಡು ವುದು ಯಾವಾಗ ? ಯಾವ ಸಾಧನೆಗೆ ಸಲವಾಗಿ, ಯಾವ ರಾಜಸಿಂಹಾಸವನ್ನಲಂಕರಿ ಸುವುದಕ್ಕೆ ಸಲವಾಗಿ, ಇಂಥಾ ಚಂದ್ರನ ಹಾಗಿರುವ ಮುಖವನ್ನು ವಾಲ್ಮೀಕ ಮುನಿಗಳ ತಪೋವನಗಾಗಿ ಮಾಡಿಕೊಂಡಿರುವಿರಿ ? ಇಂಥಾ ಕಮನೀಯವಾದ ಕನಕಲತೆಯನ್ನು ಕಾವಿಬಟ್ಟೆಯಿಂದ ಮುಚ್ಚಿಟ್ಟು ಕೊಂಡಿರುವಿರಿ ? ಹಿರಣ್ಮಯಿಯು ಚಪಶೆಯ ಮಾತಿಗೆ ಉತ್ತರವನ್ನು ಹೇಳದೆ ಗಿರಿರಾಣಿಯ ಬಳಿ ಹೋಗಿ ನಿಂತಳು. ಚಪಲೆಯು ಪುನಃ ಹೋಗಿ ಅವಳ ಭುಜದ ಮೇಲೆ ಕೈ ಹಾಕಿ ಕೊಂಡು ಒಂದು ಕೈಯಿಂದ ಗಲ್ಲವನ್ನು ಹಿಡಿದು ಹಾರಿದಳು- - ಪ್ರಮವ ಪ್ರಿಯಳೆ ಜೋಗವು, ಪ್ರೇಮದಿ ಜೋಗಿಯು ಕಮಂತನುಗೆ ಬೂದಿ ಸಜಿ ಶ್ಯಾವಳಿ ರೂವು ಜ್ಞಾನಂ, ಕೋಮಲ ವನಮಾಲಿ ಜಾನವು ನೀನೆ ಮಂತ್ರಂ ||”

  • ಹಿರಣ್ಮಯಿಯು ಗಿರಿರಾಣಿಯನ್ನು ಕುರಿತು, “ ನನಗೆ ಅಪ್ಪಣೆಯನ್ನು ಕೊಟ್ಟರೆ ಹೋಗುವೆನು” ಎಂದಳು.