ಉಳಿದುದು. ಏಳು ವರ್ಷಗಳ ತರುವಾಯ ಒಂದಾನೊಂದು ದಿನ ಅಕಬರಷಹನು ಬಹು ಸಂಖ್ಯಕ ಸೈನ್ಯ ಸಮೇತನಾಗಿ ಆಗ್ರಾದಿಂದ ಹೊರಟು ದಕ್ಷಿಣ ದೇಶಾಭಿಮುಖವಾಗಿ ಅದೇ ಮಾರ್ಗವಾಗಿ ಹೋಗುತ್ತಿದ್ದನು, ಪೂರ್ಣ ನದಿಯ ತೀರದಿಂದ ವೇಣುನಾದದ ಲಲಿತ ಸಂಗೀತದ ಧ್ವನಿಯು ಕೇಳಿಸಿತು, ಅವನು ತನ್ನ ಸೈನ್ಯವನ್ನು ಮು೦ರುವರಿದು ಹೋಗಲು ಅಪ್ಪಣೆಮಾಡಿ ಒಬ್ಬೊಂಟಿಗನಾಗಿ ಆ ಸ್ಥಳಕ್ಕೆ ಹೋದನು, ಗಿರಿರುರ್ಗವು ನೆಲಸಮನಾಗಿ ಕಲ್ಲಿನ ರಾಶಿಯಾಗಿ ಪರಿಣಮಿಸಿದ್ದಿತು. ನದಿಯಲ್ಲಿ ಅಜಯಸಿಂಹ ಹಿಕ ಣ್ಮಯಿ ಇವರಿಬ್ಬರ ಅಪಾರ್ಥಿವ ಪ್ರೇಮದ ಪಾರ್ಥಿವ ಜಲಸಮಾಧಿಯಾಗಿದ್ದೆಡೆಯಲ್ಲಿ ಚಿಕ್ಕದೊಂದು ಪರ್ಣಕುಟೀರವು ನಿರ್ಮಿತವಾಗಿದ್ದಿತು, ನದಿಯ ತೀರದಲ್ಲಿ ಸರ್ಣ ಕುಟೀರಕ್ಕೆದುರಾಗಿ ಬೆಳದಿಂಗಳಲ್ಲಿ ಕಾವಿ ಬಟ್ಟೆಯ ಧರಿಸಿದ್ದೊಬ್ಬ ತಾಪಸ ಕುಮಾ ರಿಯು ಏಕಾಕಿನಿಯಾಗಿ ನಿಂತುಕೊಂಡು ಸುಧಾಮಯವಾದ ತಾನದಲ್ಲಿ ವೇಣುವನ್ನು ನುಡಿಸುತ್ತಿದ್ದಳು. ಆ ತಾಪಸ ಕುಮಾರಿಯು ಗಿರಿರಾಣಿ ಯಾಗಿದ್ದಳು ! ಅಕಬರಷತನು ಅವಳ ಕಂಠದಲ್ಲೊಂದು ವಜ್ರದ ಹಾರವು ಬೆಳದಿಂಗಳಲ್ಲಿ ತಳತಳಿಸುತ್ತಿದ್ದುದನ್ನು ನೋಡಿದನು ! ಆ ವಜ್ರದ ಹಾರದಲ್ಲಿ ಉಜ್ವಲವಾದ ಅಕ್ಷರದಲ್ಲಿ 1 ಮಿವಾರದ ರಾಚ ಕುಮಾರ ಅಜಯಸಿಂಹ !” ಎಂದು ಬರೆದಿತ್ತು. ಅಮ್ಮತವನ್ನು ಕರೆಯುತ್ತಿದ್ದಾ ತಾಪಸಿಯ ವೇಣುವಿನ ಮೋಹಮಯವಾದ ನಾದವು ಸುಧಾಂಶುವಿನ ಅಮೃತ ಕಿರಣ ದಲ್ಲಿ ಅಮೃತ ರಾಶಿಯನ್ನು ಹೊಯ್ದು ಅಮೃತ ಭಾಷಿಣಿಯಾದ ಕಲ್ಲೋಲಿನಿಯನ್ನು (ನದಿಯನ್ನು ಅಮೃತದ ಉಚ್ಚಾಸದಿಂದ ವ್ಯಾಕುಲಗೊಳಿಸಿ ಅಜಯ ಹಿರಣ್ಮಯಿಯ ರಿಬ್ಬರ ಪ್ರೇಮದ ಅಮೃತಮಯವಾದ ಸ್ಮರಣೆಯಿಂದ ಅಕಬರನನ್ನು ಉನ್ಮತ್ರನನ್ನಾಗಿ ಮಾಡಿ ಅಮೃತರಾಶಿಯ ಮೇಲೆ ಅಮೃತರಾಶಿಯನ್ನು ಕರೆಯುತ್ತಿತ್ತು! ಮರ್ತ್ಯಲೋಕ ದಲ್ಲಿಷ್ಟು ಅಮ್ಮತವಿದೆಯೆಂದು ಭಾರತಸಾಜನು ತಿಳಿದಿರಲಿಲ್ಲ ! ಈ ಧರಾಧಾಮದಲ್ಲಿ ಈ ಪ್ರಕಾರ ನಿರವಚ್ಛಿನ್ನವಾದ ಅಮೃತೋಚ್ಛಾಸವಿರುವುದೆಂದು ಅವನು ಸ್ವಷ್ಟದಲ್ಲಿ ಕಲ್ಪಿಸಿಕೊಂಡಾದರೂ ಕಂಡವನಲ್ಲ ! ಅಮೃತಮಯವಾದ ಆ ನೋಟದ ಅಮೃತಮಯ ವಾದ ಸ್ಮರಣೆಯು ಮರಣ ಕಾಲದವರೆಗೂ ಅವನ ಹೃದಯದಲ್ಲಿ ಜಾಗರಿತವಾಗಿದ್ದಿತು! ಅಮೃತಮುಖಿಯಾದ ಆ ತಪಸಕುಮಾರಿ ಗಿರಿರಾಣಿಯು ಅಮರಲೋಕಕ್ಕೆ ಹೋಗಿ
ಪುಟ:ಅಮೃತಪುಲಿನ.djvu/೧೩೭
ಗೋಚರ