ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಹಳ ಕಾಲವಾಗಿ ಹೋಯಿತು, ಅವಳ ಅಮೃತಮಯವಾದ ಆ ವೇಣುನಾದವನ್ನು ತಡೆಗೆ ಮತ್ತಾರೂ ಕೇಳಲಿಲ್ಲ, ಆದರೆ ನಾವು ನೋಡಿದುದರಲ್ಲಿ ಆ ಪೂರ್ಣ ನದಿಯು ಈಗಲೂ ಅದೇ ಸ್ಥಳದಲ್ಲಿ ಹಾಗೇ ಅಮೃತೋಚ್ಚಾಸದಿಂದ ಸರಸವಾಡುತ್ತದೆ, ಈಗಲೂ ಅದರ ತರಂಗಭಂಗದಲ್ಲಿ ಹಾಗೇ ಅವತರಾಶಿಯು ಉಕ್ಕುತ್ತದೆ. ಮುನ್ನೂರು ವರ್ಷ ಕ್ಕೆ ಹಿಂದೆ ಪವಿತ್ರವಾದ ಆ ಜಲದಲ್ಲಿ ಅಭಿನಯಸಲ್ಪಟ್ಟ ಸ್ವರ್ಗೀಯವಾದ ಆ ನೋಟ ವನ್ನು ಈಗಲೂ ಅದರ ಒಂದೊಂದು ತೆರೆಯ ನೆನಪಿಗೆ ತರುತ್ತಿದೆ. ಈಗ ಆ ಗಿರಿ | ದುರ್ಗವೂ ಇಲ್ಲ-ಆ ಪರ್ಣಕುಟೀರವೂ ಇಲ್ಲ -ಅಲ್ಲೀಗ ಸಣ್ಣದೊಂದು ಗ್ರಾಮವಿದೆ. ಅದರ ಹೆಸರು 11 ಅಮೃತಪುಲಿನ !”