೮ ಅಮೃತಪುಲಿನ t: 2 # P1 # # # # # # # # # P: \ n 1 2 +1+ 1 : 741/1d v/s// • • • 115 ಹೋಗಲು ಇಂಗಿತ ಮಾಡುತ್ತಿತ್ತು, 'ಯವನಪುರುಷನು ಕಡಿವಾಣವನ್ನು ಬಲವಾಗಿ ಹಿಡಿದೆಳೆದು ಮುಂದೆ ಹೋಗುತ್ತಿದ್ದ ಸೈನ್ಯದವರಿಗೆ ಹಿಂದೆ ಸ್ವಲ್ಪ ದೂರದಲ್ಲಿ ಹೋಗು ತಿದ್ದನು, ಕುದುರೆಯು ಅಸ್ಥಿರವಾಗಿದ್ದು ರನ್ನು ಕಂಡು ಯಜಮಾನನು ಅದರ ಕುತ್ತಿಗೆ ಯನ್ನು ಕೈಯಿಂದ ತಟ್ಟಿ, ಒಳ್ಳೆ, ದಾನವದನನ ! ಈ ದಿನ ನೀನು ಯವನನ ಚರಣ ಸೇವೆಯನ್ನು ಮಾಡಲು ಆತುರಗೊಂಡಿರುವೆಯೋ ? ತಂದೆಯು ಅಪ್ಪಣೆ ಮಾಡದಿದ್ದರೆ, ಈ ವಿಪಾದಕರವಾದ ಕೋಲಾಹಲದಲ್ಲಿ, ಈ ಪಶುಯುದ್ಧದಲ್ಲಿ ಈ ಶಿಶುಗಳ ರಂಗ ಸ್ಥಳಕ್ಕೆ ನಿನ್ನನ್ನು ಕರೆತರುತ್ತಿದ್ದೆನೆ ? ಎಂದು ಹೇಳಿದನು. ಈ ಕ್ರಮವಾಗಿ ಎಲ್ಲರೂ ನಡು ಕಾಡೊಳಗೆ ಪ್ರವೇಶಿಸಿದರು, ಎಲ್ಲರಿಗೂ ಮುಂದಾಗಿ ಸಮಾಜ ಅಕಬರಷಸನೂ ಅವನಿಗೆ ಬಲದ ಪಾರ್ಶ್ವದಲ್ಲಿ ರಾಣಾಪ್ರತಾಪಸಿಂಹನೂ ಹೋಗುತ್ತಿದ್ದರು. ಪ್ರತಾಪಸಿಂಹನು ನಿಟ್ಟುಸುರನ್ನು ಬಿಟ್ಟು ಸಮ್ರಾಜನನ್ನು ಕುರಿತು, 1 ದಿಲ್ಲೀಶ್ವರ! ಇತ್ತಕಡೆ ನೋಡೋಣಾಗಲಿ; ಆ ನದಿಯ ಪಾರ್ಶ್ವದಲ್ಲಿ ಕಾಣಿಸುವ ಬಿಳಿದಾದ ಶಿಲೆಯ ಕಂಭಗಳಿರುವ ಸ್ಥಳದ ಬಳಿ, ರಾಜಪುತಾನದ ವೀರರು ಸಂಗ್ರಾಮ ಸಿಂಹನ ಪ್ರಾಗಾರಕ್ಷಣೆಗೋಸ್ಕರ ತಮಗೆ ಪಿತಾಮಹನಾಗಿದ್ದ ಬೇಬರನ ಸಂಗಡ ಯುದ್ಧವನ್ನು ಮಾಡಿ ಪ್ರಾಣಬಿಟ್ಟರು, ಮತ್ತೊಂದುಕಡೆ ನೋಡೋಣಾಗಲಿ; ಆ ಬೆಟ್ಟದ ಮೇಲೆ ಕಾಣಿಸುವ ಅರ್ಧ ಬಿದ್ದು ಹೋಗಿರುವ ಉಪ್ಪರಿಗೆಯ ಪ್ರಾಸಾದದ ಮೇಲುಭಾಗದಲ್ಲಿ ದೇವಿ ಮಿರಾಬಾಯಿಯು ವೀರಾಂಗನೆಯರೊಡನೆ ಸೇರಿ ಗಾನ ಮಾಡುತ್ತ ರಾಜಪೂತವೀರರನ್ನು ಯವನರ ಸಂಗಡ ಯುದ್ಧವನ್ನು ಮಾಡಲು ಪ್ರೋತ್ಸಾಹಪಡಿಸಿದಳು ” ಎಂದು ಹೇಳಿದನು. ಅಕಬರ:-ರಾಜನೆ! ನಾನು ಈ ಕಾನನದಲ್ಲಿ ಈ ರಾಜಪೂತರ ರಂಗಭಾಮಿ ಯಲ್ಲಿ ನೀವು ಹೇಳುವುದಕ್ಕಿಂತ ಹೆಚ್ಚಾದ ಕೀರ್ತಿಸ್ತಂಭಗಳನ್ನು ತೋರಿಸಬಲ್ಲೆನು, ಅಲ್ಲಿ ನೋಡೋಣಾಗಲಿ, ಆ ಕಲ್ಲು ಕಂಭಗಳ ಪಾರ್ಶ್ವದಲ್ಲಿ ವೀರಶ್ರೇಷ್ಠನಾದ ಪ್ರತಾಪ ಸಿಂಹನು ಇನ್ನೂರು ಮಂದಿ ಸೈನ್ಯದವರನ್ನು ಮಾತ್ರ ತೆಗೆದುಕೊಂಡು ಬಂದು ಸಹಸ್ರಾ ಧಿಕ ಮೊಗಲರ ಸೈನ್ಯದವರನ್ನು ಮೂತ್ರ ತೆಗೆದುಕೊಂಡು ಬಂದು ಸಹಸ್ರಾಧಿಕ ಮೊಗಲರ ಸೈನ್ಯವನ್ನು ನಿಮಿಷಮಾತ್ರದಲ್ಲಿ ಸೋಲಿಸಿದನು, ಮತ್ತೊಂದು ಕಡೆ ಆ ಬೆಟ್ಟದ ಕಿಬ್ಬಿಯಲ್ಲಿ ಛದ್ಮವೇಷಧಾರಿಯಾಗಿ ಬಂದ ಅಕಬರನ ವೀರತ್ವದ ಅಹಂಕಾರವು ಮಿವಾ ರಾಧಿಪನ ಎದುರಿಗೆ ಅಳಿಸಿ ಹೋಯಿತು, ಈ ನಿರ್ಜನವಾದ ಕಾನನದಲ್ಲೆಲ್ಲಿ ನೋಡಿದರೂ ಪ್ರತಿಯೊಂದು ತಪ್ಪಲಲ್ಲಿಯೂ ವೀರಕೇಸರಿಯಾದ ಪ್ರತಾಪಸಿಂಹನ ಗೌರವವನ್ನು ಜ್ಞಾಪಿಸತಕ್ಕ ಕುರುಹುಗಳನೇಕವಿರುವುವು. ಈ ಜಗತ್ತಿನಲ್ಲಿ ಪ್ರತಾಪಸಿಂಹನ ಹಾಗೆ ವೀರಪುರುಷರು ಎಲ್ಲಿಯೂ ಯಾವಾಗಲೂ ಹುಟ್ಟಿರಲಿಲ್ಲ!
ಪುಟ:ಅಮೃತಪುಲಿನ.djvu/೧೮
ಗೋಚರ