ಮೊದಲನೆಯ ಪರಿಚ್ಚಿವ knot Adn° v\r\JW\ * ••• MAAApr \ n P* * \ \rfe •\ \ \n\r\ \ 5 1) no/Naphh - ಪ್ರತಾಪಸಿಂಹನು ಹುಬ್ಬನ್ನು ಸುರಿಸಿ, ತೊಂಡು, ದಿಲ್ಲಿ ಶ್ವತI ಮತ್ತಾರಾ ದರೂ ತಮ್ಮ ಹಾಗೆ ಹೇಳಿದ್ದರೆ ಮುಖಸ್ತುತಿಯೆಂದಾಗಲೀ ಹಾಸ್ಯವೆಂದಾಗಲೀ ತಿಳಿ ಯುತ್ತಿದ್ದನು! ಪ್ರತಾಪಸಿಂಹನು ಕಾಪುರುಷನಾಗಿಲ್ಲದಿದ್ದರೆ, ಸೂರ್ಯವಂಶದಲ್ಲಿ ಕುಲಾಂಗಾರನಾಗಿ ಹುಟ್ಟದಿದ್ದರೆ, ದಿಲ್ಲಿಯಸಾಮಾಜನಿಗೆ ತನ್ನ ಸ್ವಾತಂತ್ರವನ್ನು ಮಾರುತ್ತಿರಲಿಲ್ಲ, ಅಮರರಿಗೆ ವಾಸ ಭೂಮಿಯಾಗಿದ್ದ ಮಿವಾರದೇಶವು ಈ ದಿನ ಮೊಗ ಲಕ ಸೈನ್ಯದ ಪಾದ ಧೂಳಿಯಿಂದ ಮೈಲಾಗಿ ಅಂಧಕಾರದಿಂದ ಆವೃತವಾಗುತ್ತಿರ ಲಿಲ್ಲ " ಎಂದು ಹೇಳಿದನು, ಅಕಬರ:-ರಾಜನ! ತಾವು ಅನ್ಯಾಯವನ್ನು ಹೇಳೊಣಾಗುತ್ತದೆ! ಜಗತ್ತಿಗೆ ಪ್ರಖ್ಯಾತವಾಗಿರುವ ಈ ರಾಜವಂಶದ ಸ್ವಾತಂತ್ರ್ಯವನ್ನು ಅಪಹರಿಸಬೇಕೆಂದು ಅಕಬ ರನಿಗೆ ಉದ್ದೇಶವಲ್ಲ. ನಿಮ್ಮ ಸ್ನೇಹಿತನಾಗಿರುವ ದಿಲ್ಲೀಶ್ವರನನ್ನು ಅಂಥಾ ಪಾಮರನಾದ ಅಧಮನೆಂದು ತಿಳಿಯಕೂಡದು, ಎರಡು ಜಾತಿಯೂ ತಮ್ಮ ತಮ್ಮ ವೈರವನ್ನೂ ಜಾತಿಗೆ ಸಂಬಂಧವಾದ ಸಂಸ್ಕಾರಗಳನ್ನೂ ಬಿಟ್ಟು ಪರಸ್ಪರ ಸೇರಿ ಹೋದರೆ ಭಾರತ ಸಾಮ್ರಾಜ್ಯದ ತಳಹದಿಯು ದೃಢವಾಗಿ ಸ್ಥಾಪಿತವಾಗುವುದೆಂದು ನನ್ನ ಇಷ್ಟವಾಗಿರು ನುದು, ಪ್ರತಾಪಸಿಂಹನು ದೀರ್ಘನಿಶ್ವಾಸವನ್ನು ಬಿಟ್ಟು, ಮಾತೃಭೂಮಿಯನ್ನು ರಕ್ಷಿ ಸಿಕೊಳ್ಳುವುದಕ್ಕೆ ಸಲುವಾಗಿ ರಾಜನೂತನು ಯವನನ ಶಕ್ತಿಯನ್ನು ಭಿಕ್ಷೆ ಬೇಡುವುದು ಹಿಂದುಗಳ ಹಣೆಯಲ್ಲಿ ಬರೆದಿದ್ದರೆ ಅಕಬರಷಹನ ಕಾಲದಿಂದ ಆ ಪದ್ಧತಿಯು ಏರ್ಪಡು ವುದಕ್ಕೆ ಸಂದೇಹವಿಲ್ಲ” ಎಂದು ಹೇಳುತ್ತಿದ್ದ ಹಾಗೆ ದೂರ ಪರ್ವತದ ಪ್ರಾಂತ ವನ್ನು ನೋಡುತ್ತ ಉಚ್ಚಸ್ವರದಿಂದ ಹೀಗೆಂದು ಹೇಳುವುದಕ್ಕೆ ತೊಡಗಿದನು. ದಿಲ್ಲಿ ಶ್ವರ ಇಂದು ಭಾರತ ವರ್ಷದ ಭಾವೀ ಅದೃಷ್ಟ ಪರೀಕ್ಷೆಯಾಗುವುದು, ಅತ್ತ ಕಡೆ ದೂರ ಕನನ ಪ್ರಾಂತದಲ್ಲಿ ಕಾಣುವ ಪ್ರಕಾಂಡ ದೇಹವುಳ್ಳ ಬಿಳಿದಾದ ಬಣ್ಣದ ಕಾಡು ಕೋಣದಿಂದ ಇಂದು ಯವನರ ಹಣೆಬರಹವೂ ಹಿಂದುಗಳ ಹಣೆಬರಹವೂ ನಿರ್ಧರ ಮಾಡಲ್ಪಟ್ಟು ಹೋಗಲಿ ! ಈ ವಿಜಯದಶಮಿಯ ದಿನ ಭಗವತಿ ಸಿಂಹವಾಹಿನಿಯು ದೈತ್ಯರನ್ನು ಬಯಸಿದುದಕ್ಕೆ ಕುರುಹು ಆಗಿ ವಿಜಯೋತ್ಸವವು ನಡಿಯುವ ಪದ್ಧತಿ ಯುಂಟು, ಇಲ್ಲೀಗ ಸೇರಿರುವ ಎನೂರು ಮಂದಿ ಹಿಂದೂ ವೀರರಲ್ಲೊಬ್ಬನು ಸೂರ್ಯಾಸ್ತದೊಳಗೆ ಆ ಕಾಡುಕೋಣಕ್ಕೆದುರಾಗಿ ನಿಂತು ಹೋರಾಡಿ ಗೆದ್ದರೆ ಹಿಂದೂ ಗಳ ಸೌಭಾಗ್ಯವು ಲೋಪವಾಗಲು ಇನ್ನೂ ಹೆಚ್ಚು ಕಾಲ ವಿಳಂಬವಿರುವುದೆಂದು ತಿಳಿಯು ವೆನು, ಅಥವಾ ಇಲ್ಲಿರುವ ಎನರು ಮಂದಿ ಮೊಗಲರಲ್ಲೊಬ್ಬನು ಆ ಮೃಗವನ್ನು ಬೆನ್ನಟ್ಟಿ
ಪುಟ:ಅಮೃತಪುಲಿನ.djvu/೧೯
ಗೋಚರ