ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪರಿಚ್ಛೇದ ೧೦ wwwx wwwx ಸಸಿಂಹನ ಮಗಳು ಕನುಲಾವತಿ-ಮತ್ತೂಬ್ಬಳು ಅವಳಿಗೆ ಕೂರ್ಪಾಳಿಯಾದ ಗ್ವಾಲಿ ಯುರದ ರಾಜನ ಮಗಳು ಹಿರಣ್ಮಯಿ, ಗ್ವಾಲಿಯರದ ರಾಜನು ಯವನಯುದ್ಧದಲ್ಲಿ ಪ್ರತಾಪಸಿಂಹನಿಗೆ ಬಲದ ಬಾಹುವಾಗಿದ್ದನು, ಅವನು ಯವನರ ಯುದ್ಧದಲ್ಲಿ ಪ್ರಾಣ ಶ್ಯಾಗವನ್ನು ಮಾಡಿದ ಬಳಿಕ ಅವನಿಗೆ ಏಕಪುತ್ರಿಯಾಗಿದ್ದ ಹಿರಣ್ಮಯಿಯು ಅದು ಮೊದಲ್ಗೊಂಡು ಪ್ರತಾಪನ ಅಂತಃಪುರದಲ್ಲಿ ಅದರದಿಂದ ಪ್ರತಿಪಾಲಿಕೆಯಾಗಿರು ರಳು, ಕಮಲಾವತಿಯೂ ಹಿರಣ್ಮಯಿಯೂ ಚಿಕ್ಕಂದಿನಿಂದ ಪರಸ್ಪರ ಕಲೇಗಲವಾಗಿರು ತಿದ್ದರು, ಅಸಂಖ್ಯ ದೀಪಮಾಲೆಗಳಿಂದೆಸೆದ ಜಲಕಾದ ಬೆಳಕು ಸುಂದರಿಯರಿಬ್ಬರ ಮುಖಮಂಡಲದಲ್ಲಿ ಪ್ರತಿಫಲಿತವಾಗಿ ಮತ್ತಷ್ಟು ಉಜ್ವಲತರವಾಗಿ ಕಣ್ಣಳಿಸುತ್ತಿತ್ತು. ಶಾರಕಾಮಯವಾಗಿದ್ದ ಗಗನದಲ್ಲಿ ಚಂದ್ರಯುಗಳವುದಯವಾಗಿದ್ದ ಹಾಗಿದ್ದಿತು ! ಕಮಲಾವತಿ:-ಹಿರಣ್ಮಯಿ 1 ಈ ದಿನವೆಲ್ಲಾ ಎಲ್ಲಿದೆ / ಒಂದುಸಲವಾ ದರೂ ನಿನ್ನನ್ನು ನೋಡಲಿಲ್ಲವೇಕೆ ? ಎಂದಳು. ಹಿರಣ್ಮಯಿ :-ಈ ಹೂವಿನ ಹಾರವನ್ನು ಕಟ್ಟುತ್ತಿದ್ದೆನು. ಕಮಲಾವತಿ:-(ನಕ್ಕು)-ಯಾರಕುತ್ತಿಗೆಗೆ ಹಾಕುವೆ? ( ಈ ದಿನ ಬೇಟೆಯಲ್ಲಿ ಹೆಚ್ಚು, ವೀರತ್ವವನ್ನು ತೋರುವವರ ಕುತ್ತಿಗೆಗೆ ಇದು ಉಪಹಾರವಾಗಿರುವುದು.” 11 ನಿನಗೆ ಬಹಳ ಧೈರ್ಯವಲ್ಲವೆ ? ಬೇಟೆಗೆ ಹೋಗಿರತಕ್ಕವರು ಐನೂರುಮಂದಿ ಕ್ಷತ್ರಿಯರು, ಐನೂರುಮಂದಿ ಮುಸಲ್ಮಾನರು, ಸಾವಿರಮಂದಿ ವೀರರೆಲ್ಲರೂ ಬೇಟಿ ಯಲ್ಲಿ ದಕ್ಷರಾಗಿದ್ದಾರೆ. ಅಷ್ಟು ಜನರೆಲ್ಲಾರು ಅದೃಷ್ಟ ಬಲದಿಂದ ಸರ್ವಶ್ರೇಷ್ಠರಾಗು ವರೋ ಅದನ್ನು ಗೆತ್ತು ಮಾಡುವದು ಹೇಗೆ ? ಒಂದು ವೇಳೆ ಮುಸಲ್ಮಾನನೊಬ್ಬನು ಎಲ್ಲರಿಗಿಂತ ಹೆಚ್ಚು ಪರಾಕ್ರಮವನ್ನು ತೋರಿದ್ದರೆ ?” 1 ಹಾಗಾಗಿದ್ದರೆ ಅಡವಿಯಿಂದೊಂದು ನರಿಯನ್ನು ಹಿಡಿದು ತಂದು ಅದರ ಕುತ್ತಿಗೆಗೆ ಈ ಹಾರವನ್ನು ಹಾಕುವನು, ಸಿಂಹಕ್ಕಿಂತ ನರಿಯ ಶೌರ್ಯವು ಹೆಚ್ಚಾ ಗದ, ಮಿವಾರದ ಅಧಿಷ್ಠಾತ್ರಿ ಭಗವತಿ ಗೌರಿಯು ಮಿಥ್ಯಾವಾದಿನಿಯಾಗದಿದ್ದರೆ, ಈ ಹಾರದಲ್ಲಿ ಯಾರ ಹೆಸರನ್ನು ಬರೆದಿರುವುದೋ ಆ ವೀರನಿಗೆ ಇದನ್ನು ಉಪಹಾರವಾಗಿ ಕೂಡುವನು.