ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wwwrvushwwwhhhhhhhhhav wwwrw ANಕMANAAAAAAAllAWAM ಅಮೃತಪುಲಿನ ೧wnhwy ಎರಡರಲ್ಲೊಂದು ಅವನ ಹೃದಯವನ್ನಾವರಿಸಿಕೊಂಡಿದ್ದಿತು, ನೋಡಿದರೆ, ಅವನ ಹೃದಯದಂತರದ ಅಂತಸ್ರಲದಲ್ಲಿ ಕಾಲಿಮಾಮಯವಾದ ಪ್ರಕೃತಿಯ ಪೂರ್ಣ ಪ್ರತಿ ಬಿಂಬವು ಬಿದ್ದಿದ್ದ ಹಾಗೆ ತೋರುತ್ತಿತ್ತು. ಅವನು ನಿಟ್ಟುಸುರನ್ನು ಬಿಟ್ಟು ತನ್ನೊಳು ತಾನೇ ನಾನು ಕ್ಷತ್ರಿಯ ನೀರನು ! ಕ್ಷತ್ರಿಯ ಕುಲಕ್ಕೆ ಗೌರವಸ್ವರೂಪನಾದ ಪ್ರತಾಪಸಿಂಹನಿಗೆ ಮಗನಾಗಬೇಕು ! ಹೀಗಿದ್ದು ಇಂದು ಹುಡುಗನ ಹಾಗೆ ಕಲ್ಪಿತ ವಾದ ಪ್ರಕೃತಿಯ ಭೂಭಂಗಿಯನ್ನು ಕಂಡು ಎದ ಕದಲಿದವನಾಗಬಹುದ | “ ಎಂದಂದುಕೊಂಡು ತನ್ನನ್ನು ತಾನೇ ಧಿಕ್ಕರಿಸಿಕೊಂಡು, ಗವಾಕ್ಷವನ್ನು ಮುಚ್ಚಿ ಹಾಸಿಗೆಯಮೇಲೆ ಮಲಗಿಕೊಂಡನು. ಮಲಗಿದ್ದರೂ ತಮೋಮಯವಾದ ಆಕಾಶವು ಕಣ್ಣೆದುರಿಗೆ ಕಾಣಿಸುತ್ತಿತ್ತು, ಜಗತ್ತಿನಲ್ಲಿ ಮತ್ತಾವುದೂ ಇಲ್ಲದೆ ಅನಂತವ್ಯಾಪಿ ಯಾದ ಅಂಧಕಾರದಿಂದ ಆವರಿಸಲ್ಪಟ್ಟಿದ್ದ ಆಕಾಶವೊಂದೇ ಇದ್ದ ಹಾಗೆ ತೋರುತ್ತಿತ್ತು. ಕೆಳಗೆ, ಮೇಲೆ, ಪಾರ್ಶ್ವ-ಎಲ್ಲಾ ಕಡೆಯೂ ಕರಾಳ ಕಾಲಮಯವಾದ ಕಾಳಾಕಾಶ! ಕಣ್ಣು ಮುಚ್ಚಿಕೊಂಡನು, ಅಂಧಕಾರವು ಮತ್ತಷ್ಟು ಹೆಚ್ಚು ಭಯಂಕರವಾಗುತ್ತಾ ಬಂದಿತು, ಕಾಳ ಅಂಬರದ ಕರಾಳ ಕಾಲಿಮೆಯು ಗಾಢತರವಾದ ವರ್ಣವನ್ನು ತಾಳುತ್ತ ಬಂದಿತು, ಇದ್ದಹಾಗೆ ಆಕಾಶಕಟದಲ್ಲಿ ಸೌಂದರ್ಯಮಯವಾದ ಮರ್ತಿಯೊಂದು ಚಿತ್ರಿತವಾದ ಹಾಗೆ ಕಂಡಿತು. ಆ ಮೂರ್ತಿಯು ತನ್ನ ಬಾಲ್ಯ ಸಹಚರಿಯಾದ ಹಿರಣ್ಯ ಯಿಯ ಮೂರ್ತಿಯಾಗಿದ್ದಿತು ! ಹಿರಣ್ಮಯಿಯ ಬಂಗಾರದಂಥಾ ಕಾಂತಿಯು ಕತ್ತಲೆ ಯಲ್ಲಿ ಅಳಿಸಿಹೋಗುತ್ತ ಬಂತು, ಕತ್ತಲೆಯೇ ಬಾಯಿತೆರೆದು ಆ ಸೌಂದರ್ಯರಾಶಿಯನ್ನು ನುಂಗುತ್ತಿದ್ದ ಹಾಗೆ ಕಂಡಿತು, ನೋಡುತ್ತಿದ್ದ ಹಾಗೆ ತೇಜಃಪುಂಜವಾಗಿದ್ದ ಆ ಹಿರಣ ಯಿಯ ಸೌಂದರ್ಯಮಯವಾದ ಶರೀರವು ಭೀಷಣವಾದ ಅಂಧಕಾರದೊಂದಿಗೆ ಸೇರಿ ಹೋಯಿತು ! ಅಜಯನು ಚಮಕಿತನಾಗಿ ಎದ್ದು ನಿಂತುಕೊಂಡನು, ಚಂಚಲ ಹರಣಗ ಳಿಂದ ಕೊಠಡಿಯೊಳಗೆ ಗೋಡೆಯಿಂದ ಗೋಡೆಯವರೆಗೆ ಬೇಗಬೇಗನೆ ಕಾಲು ಹಾಕುತ್ತ ನಡೆದಾಡುತ್ತ, ಅಕಸ್ಮಿಕವಾಗಿ ಚಿತ್ತವಿಕಾರಕ್ಕೆ ಕಾರಣವೇನು ? ಇದು ಮುಂದಣ ಅಮಂಗಳದ ಸೂಚನೆಗೆ ಚಿಹ್ನೆ ಯೊ? ತಾನಾವಾಗಲೂ ಭವಿಷ್ಯದ ಅನಿಷ್ಟ ವನ್ನು ಭಾವಿಸಿಕೊಂಡು ಭೀತನಾಗುತ್ತಿರಲಿಲ್ಲ. ವೀರನಹಾಗೆ ಅಮಂಗಳವನೆದುರು ಹಾಕಿಕೊಂಡು ಪಾರಾಗುತ್ತಿದ್ದು, ತಾನು ಹೊರಟುಹೋದ ಬಳಿಕ ಹಿರಣ್ಮಯಿಗೆ ಒಂದುವೇಳೆ ಅಮಂಗಳವೇನಾದರೂ ಸಂಭವಿಸಬಹುದೋ ? ತಾನು ಸವಿಾಪದಲ್ಲಿದ್ದರೆ ಅಂಥಾ ಅಮಂಗಳದಿಂದವಳನ್ನು ರಕ್ಷಿಸಬಹುದಲ್ಲವೆ? ಹಾಗಾದರೆ ಸಮಾಜನೊಂದಿಗೆ ಹೋಗಲು ಸಮ್ಮತಿಪಟ್ಟನೇಕೆ ? ಅದು ಸರಿಯಲ್ಲ, ಹಾಗೆ ಹೇಳಕೂಡದು ಕ್ಷತ್ರಿಯ