ಐದನೆಯ ಪರಿಚ್ಛೇದ | - ೨೬ rny wnwwwnAnah እላለaሰላሰለላለእለሳነለለላላ\\\\\\\\ለል\\\\ታ t.shiv೩೧ANAMWN ಮೂರ್ತಿಯು ಎಲ್ಲಿ ಸಿಕ್ಕಿತು ? ಎಂದನು. ಯುವರಾಜನು ಗಂಭೀರಸ್ವರದಿಂದ “ ನನಗೆ ಸತ್ಯವಾಗಿ ಹೇಳು. ಇದು ಯಾರ ಸಟ ಎಂದನು. ಉನ್ಮಾದಿನೀ :-ಅದೇ ಪಿಶಾಚಿಯ ಪಟ, ಆ ಪಿಶಾಚಿ ; ರಾಕ್ಷಸಿ, ತಾರಾ ಬಾಯಿಯ ಮಗಳು ಹಿರಣ್ಮಯಿಯ ಪಟ 1 ಆ ಪಾಷಾಣಿಯ ಪಾರ್ಶ್ವದಲ್ಲಿ ಚಿತ್ರಿತ ವಾಗಿರುವ ಯುವಕನು ಪ್ರತಾಪಸಿಂಹನ ಮಗ ಅಜಯಸಿಂಹ, ಅವಳು ಅವನಿಗೆ ವರ ಮಾಲೆಯನ್ನು ಹಾಕುವಳು ! ಹಾ ! ಯೋಚಿಸಿಕೊಂಡರೆ ಎದೆಯು ಸೀಳಿಹೋಗು ಇದೆ! ಅವಳೇನೋ ಅವನಿಗೆ ಮಾಲೆಯನ್ನು ಹಾಕಬೇಕೆಂತಲೇ ಇದ್ದಾಳೆ, ಅವಳ ಆಶೆಯು ಕೈಗೂಡುವುದೆ ? ಸಲಿಮ :-ಎಂದಿಗೂ ಕೈಗಡದು, ನೀನು ಆ ವಿಷಯದಲ್ಲಿ ನಿಶ್ಚಿಂತಯಾ ಗಿರು, ಈ ಚಿತ್ರಪಟದಲ್ಲಿ ಅಂಕಿತವಾಗಿರುವ ಹಾಗಿದ್ದರೆ ಭುವನಮೋಹಿನಿಯಾದ ಆ ಸುಂದರಿಯು ಕ್ಷತ್ರಿಯ ಬಾಲಕನನ್ನು ಎಂದಿಗೂ ವರಿಸಲಾರಳು, ಸುಂದರಿಯು ಒಂದು ದಿನ ಸೆಲಿಮನ ತೊಡೆಯನ್ನ ಲಂಕರಿಸುವಳು. ಉನ್ಮಾದಿನೀ :-ನೋಡಬೇಕು, ಅವಳ ಇಷ್ಟವು ಕೈಗೂಡುವುದೋ, ನಿನ್ನ ಪ್ರತಿಜ್ಞೆಯು ನೆರವೇರುವುದೆ, ಮುಂದೆ ಗೊತ್ತಾಗುತ್ತದೆ. ಪುನಃ ಬಂದು ನೋಡುವೆನು. ಹೀಗೆಂದು ಹೇಳಿ ಉನ್ಮಾದಿನಿಯು ಹೊರಟುಹೋದಳು, ಸೆಲಿಮನು ಪರಿಚಾರ ಕನೊಬ್ಬನನ್ನು ಕರೆದು, “ ನೀನು ಈ ಹುಚ್ಚಿಯ ಬೆನ್ನಟ್ಟಿ ಹೋಗು, ಅವಳು ಹೋಗುವ ಸ್ಥಳವನ್ನೂ ಅವಳಿರುವ ಸ್ಥಳವನ್ನೂ ಗೊತ್ತು ಮಾಡಿಕೊಳ್ಳಬೇಕು, ನಾಳೆ ನೀನು ಅವಳನ್ನು ಇದೇ ಹೊತ್ತಿಗೆ ಇಲ್ಲಿಗೆ ಕರತರಬೇಕು, ಬಹಳ ಜಾಗರೂಕ ನಾಗಿರು ” ಎಂದು ಹೇಳಿ ಬಳಿಕ ಸಖಾಯತನನ್ನು ಕುರಿತು, 11 ಸಖಾಯತ। ಮತ್ತೊಂದು ಬಟ್ಟು ಸುರೆಯನ್ನು ತುಂಬಿಕೊಡು” ಎಂದನು. ಉನ್ಮಾದಿನಿಯು ಮೆಲ್ಲ ಮೆಲ್ಲಗೆ ಹಾಡುತ್ತ ದಿಲ್ಲಿಗೆ ದಕ್ಷಿಣಪಾರ್ಶ್ವ ಹರಿಯುವ ಯಮುನಾ ನದಿಯ ತೀರದಲ್ಲಿರುವ ವಿಜನವಾದ ಕಾನನದೊಳಗೆ ಪ್ರವೇಶಮಾಡಿದಳು. ಆ ಕಾನನದಲ್ಲಿ ನೂರು ಮಂದಿ ರಮಣಿಯರು ಗುಂಪಾಗಿ ಒಟ್ಟಿಗೆ ಕುಳಿತಿದ್ದರು, ಅವರೆಲ್ಲರೂ ಸುಂದರಿಯರಾಗಿಯೂ ಯುವತಿಯರಾಗಿಯೂ ಇದ್ದರು. ಉನ್ಮಾದಿನಿ ಯನ್ನು ಕಂಡ ಕೂಡಲೇ ಆ ನೂರು ಮಂದಿ ಹೆಂಗಸರೂ ತಟ್ಟನೆದ್ದು ನಿಂತುಕೊಂಡರು. ಜನಶೂನ್ಯವಾಗಿದ್ದ ಆ ಕಾನನದಲ್ಲಿ ಬಹು ಮೂಲ್ಯವುಳ್ಳ ರತ್ನಗಳಿಂದ ಶೋಭಿತ ವಾದ ವಿಚಿತ್ರ ಸಿಂಹಾಸನವೊಂದು ಇಡಲ್ಪಟ್ಟಿದ್ದಿತು. ಅದಕ್ಕೆ ಮೇಲುಗಡೆ ಮರದ
ಪುಟ:ಅಮೃತಪುಲಿನ.djvu/೩೭
ಗೋಚರ