ಒಂಭತ್ತನೆಯ ಸರಿಟ್ಟಿದೆ AA AAAAAAAAAAMAhhhhhttsfinnnnnnnnnnnfinni\ANAAAAALAP•YNAYAYI ಕುವವನು ಪಾಪಾತ್ಮನಾದ ಸಖಾಯತನು. ನಾನದಕ್ಕೆ ಸಾಕ್ಷಿ, ತಮ್ಮ ಅಪ್ಪಣೆ ಯಿಲ್ಲದೆಲೇ ನಾನೇ ಅವನಿಗೆ ದಂಡಿಸುವನು” ಎಂದನು. . ಹೀಗೆಂದು ಹೇಳುತ್ತ ಮಿಂಚಿನ ವೇಗದಿಂದ ಕ್ಷಿಪ್ರಹಸ್ತನಾಗಿ ಕೈಕೂರಿತವನ್ನು ಝಳಪಿಸಿ ತಿರುಗಿಸುತ್ತ ಪ್ರಚಂಡವಾದ ಬಲದಿಂದ ಸಖಾಯತನ ಎದೆಗೆ ಇರಿದನು, ಸಖ ಯತನು ಭಯಂಕರವಾಗಿ ಅರಚುತ್ತ ನೆಲದಮೇಲೆ ಬಿದ್ದು ಪ್ರಾಣವನ್ನು ಬಿಟ್ಟನು. ಸಮಾಜನ ಮುಖಮಂಡಲವು ಕೆದರುವ ಕೋಪದಿಂದ ಕೆರಳು ಕಂಡಗೋಂ ಡಿತು, ಅವನು ಕತ್ತಿಯನ್ನೋರೆಯಿಂದೆಳೆದು ಸೆಲಿಮನಿದ್ದ ಕಡೆ ಮುಂದರಿದನು, ಆದರೆ ಕೂಡಲೇ ಆ ಭಾವವನ್ನು ಅಡಗಿಸಿಕೊಂಡು ಮೆಲ್ಲ ಮೆಲ್ಲಗೆ ಗಂಭೀರಸ್ವರದಿಂದ, ಪಾಪಕೃತ್ಯದ ಮೇಲೆ ಪಾಪಕೃತ್ಯ ! ಮೂರ್ಖತೆಯ ಮೇಲೆ ಮೂರ್ಖತಿ! ನಿನ್ನ ಫಾಸಮಯವಾದ ದುರಭಿಸಂಧಿಯನ್ನು ನಾನು ತಿಳಿಯಲಾರೆನೆಂದು ತಿಳಿದಿರುವಿಯಾ? ಅದಿರಲಿ-ನಾನು ಈಗ ಮಾಡುವ ಅಪ್ಪಣೆಯನ್ನು ಎಚ್ಚರದಿಂದ ಕೇಳು, ಅದರಂತ ನಡೆದುಕೊಂಡರೆ ನಿನ್ನ ಶತಾಪರಾಧದೊಂದಿಗೆ ಈ ದಿನ ನೀನು ನಡಿಸಿರುವ ಈ ಪೈಶಾಚಿಕ ಆಚರಣೆಯನ್ನೂ ಕ್ಷಮಿಸುವೆನು ಹೇಳು, ನಾನು ಈ ರಾಜಪೂತ ಹೆಂಗಸನ್ನು ಆರ ಮನೆಗೆ ಕರೆದುಕೊಂಡು ಹೋಗಿ ನನ್ನ ಮಗಳ ಹಾಗೆ ಪ್ರತಿಪಾಲನೆ ಮಾಡಬೇಕೆಂದಿ ದ್ದೇನೆ, ಇವಳೀಗ ಲೌಕಿಕ ಆಚಾರ ಅನುಸಾರವಾಗಿ ಮುಸಲಮಾನನಿಗೆ ಹೆಂಡತಿಯಾಗಿ ರುವಳು. ಅದು ಕಾರಣ ಹಿಂದೂ ರಾಜಧಾನಿಯಲ್ಲಿ ಅವಳಿಗೆ ಸ್ಥಾನವು ಸಿಕ್ಕದು. ನೀನು ಪ್ರೇಮಚಕ್ಷುಗಳಿಂದ ಅವಳನ್ನು ನೋಡಿದರೆ, ನಿನ್ನ ಶತಾಪರಾಧಗಳಿಗೂ ಒಂದೇ ಕಾಲದಲ್ಲಿ ದಂಡ ವಿಧಾನ ಮಾಡುವೆನೆಂದು ಖಂಡಿತವಾಗಿ ತಿಳಿದಿರು. ಈಗ ನೀನು ಇಲ್ಲಿಂದ ತೊಲೆದು ಹೋಗು” ಎಂದು ಅಪ್ಪಣೆಮಾಡಿದನು. ಸೆಲಿಮನು ಮೂರ್ಛಿತೆಯಾಗಿ ಬಿದ್ದಿದ್ದ ಹಿರಣ್ಮಯಿಯ ಸಮನಿಲ್ಲದ ರೂಪ ರಾಶಿಯನ್ನು ಬಾರಿಬಾರಿಗೂ ನೋಡುತ್ತ ಹೊರಗೆ ಹೋಗಿ ಕುದುರೆಯನ್ನೇರಿ ಒಬ್ಬೊ ಬಿಗನಾಗಿ ಆಗ್ರಾಭಿಮುಖವಾಗಿ ಹೊರಟು ಹೋದನು. ಇmRK. - ಒಂಭತ್ತನೆಯ ಪರಿಚ್ಛೇದ, - ಯಾವ ಸಮಯದಲ್ಲಿ ಭಾರತಸಿಂಹಾಸನದಲ್ಲಿ ರಾಜಕುಲಕ್ಕೆ ಗುರುವಾಗಿದ್ದ ಅಕಬರಷಹನು ಪೂರ್ಣಗೌರವದಿಂದ ವಿರಾಜಿಸುತ್ತಿದ್ದನೋ ಅದೇ ಸಮಯದಲ್ಲಿ ರಾಜ್ಞೆಯಾದ ಚಾಂದಸುಲತಾನೆಯು ದಕ್ಷಿಣದೇಶದ ಸಿಂಹಾಸನವನ್ನಲಂಕರಿಸಿದ್ದಳು,
ಪುಟ:ಅಮೃತಪುಲಿನ.djvu/೪೭
ಗೋಚರ