ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂಭತ್ತನೆಯ ಪರಿಚ್ಛೇದ ೩೯ JVwwwdyYYYYYYV/S VVM V\• / \ \'\ N - * * \ \ \ \• : ಆv •'\ \r\: 114 , 14 #\\ 14SV/s/\ry ಕ್ಷಿತೆಯಾಗಿಯ ಯುವತಿಯಾಗಿಯೇ ಇದ್ದ ಸುಂದರಿಯಾದ ಆ ಗೆಳತಿಯ ಮಧುರ ಸಂಗೀತವನ್ನು ಕೇಳುವುದಕ್ಕೆ ಪ್ರಾರಂಭಿಸಿದಳು, ಕೃತಿಯು ಪೂರೈಸುತ್ತಲೇ ರಾಜ್ಞೆಯು ಆಕಾಶವನ್ನು ನೋಡಿ ಮೆಲ್ಲಗೆ ನಕ್ಕು : ಸಬಿ ! ನೀನು ಹಾಡಿದ ಕೃತಿಯು ಅತ್ಯಂತ ಮಧುರವಾಗಿಯೂ ತಾನಲಯ ಎಶುದ್ಧವಾಗಿಯೇ ಇದ್ದುದರಿಂದ ಆಕಾಶದಲ್ಲಿ ನಿಜ ವಾಗಿಯ ಮೇಘ ಖಂಡವೊಂದು ತಲೆದೋರಿತು, ಇದೇ ರೀತಿಯಾಗಿ ಮತ್ತೊಂದು ಕೃತಿಯನ್ನು ಹಾಡಿದರೆ ಸಂದೇಹವಿಲ್ಲದೆ ಮಳೆಯು ಬರುವದು” ಎಂದಳು. 11 ತಾವು ಅಪ್ಪಣೆ ಮಾಡಿದರೆ ಒಂದಲ್ಲದೆ ನೂರು ಕೃತಿಯನ್ನಾದರೂ ಹಾಡು ಮನು, ಆದರೆ ಹೀಗೆ ಹಾಸ್ಯ ಮಾಡದಿರಬೇಕೆಂದು ಬೇಡುತ್ತೇನೆ, ಅತ್ಯಂತ ಶಕೆಯಾ ದರೆ ಆಕಾಶದಲ್ಲಿ .ಮೇಘವೆಚ್ಚು ಮಳೆಯಾಗು ವುದು ಎಲ್ಲರಿಗೂ ಗೊತ್ತಿದೆ, ಇದು ಪ್ರಕೃತಿಯ ನಿಯಮವಾಗಿದೆ. ನನ್ನ ಮಾತು ಹಾಗಿರಲಿ, ನನಗೆ ಸಂಗೀತವು ಏನೇನೂ ಬಾರದು. ಜಡಜಗತ್ತನ್ನು ಕ೦ತಸ್ವರದಿಂದ ಮುಗ್ಧ ಮಾಡಲು ಮನುಷ್ಯನಿಗೆ ಸಾಧ್ಯವೆ ?? ಜುಲೇಕೆಯು ಪುನಃ ತಂಬೂರಿಯನ್ನು ತೆಗೆದುಕೊಂಡ. ಮೊದಲಿನ ಹಾಗೆ ತಾರ ಸ್ವರದಲ್ಲಿ ಮಧುರ ಕಂಠದಿಂದ ಹಾಡುವುದಕ್ಕೆ ತೊಡಗಿದಳು. ಅಕಸ್ಮಾತ್ತಾಗಿ ರಮಣಿ ಯರ ಮಂಡಲಿಯು ಚಮಕಿತವಾಗಿ ಎಲ್ಲರೂ ಎದ್ದು ನಿಂತುಕೊಂಡರು ! ತಟಕ್ಕನೆ ತಂತಿಯು ಕಿತ್ತುಹೋದ ಸಿತಾರನ ಹಾಗೆ ಜುಲೇಕೆಯ ಕಲಕಂಠವು ನಿಂತುಹೋಯಿತು, ಅವಳ ಕೈಯಲ್ಲಿದ್ದ ತಂಬೂರಿಯು ನದಿಯ ನೀರಲ್ಲಿ ಬಿದ್ದು ಹೋಯಿತು ! ನದಿಯ ಕಲ ಕಲ ಧ್ವನಿಯ ಮರದೆಲೆಗಳ II ಶರ ಶರ” ಶಬ್ದವೂ ಗಾಳಿಯು ಚುವ್ವಚುವ್ವನೆ ಬೀಸುವ ಶಬ್ದವೂ ನಿಂತವು, ದೂರದಲ್ಲಿ ನದಿಯ ದಡದಲ್ಲಿದ್ದ ಕಾನನದ ಮಧ್ಯದಲ್ಲಿ ವೀಣೆಯನಾದದೊಂದಿಗೆ ಸೇರಿದ್ದ ಮಲ್ದಾರ ರಾಗವು ದಶ ದಿಕ್ಕುಗಳನ್ನೂ ಶಬ್ದಗೊಳಿ ಸಿತು, ಪ್ರಕೃತಿಯು ಸೊಲ್ಲಿಲ್ಲದೆ ನಿಸ್ತಬ್ದವಾಗಿ ಚಿತ್ರಾರ್ಪಿತವಾಯಿತು ! ಚಾಂದಸು ಲತಾನೆಯು ಜುಲೇಕೆಯನ್ನು ಪರಿಹಾಸ್ಯ ಮಾಡಿದಾಗ ಪೂರ್ವ ಆಕಾಶದ ದಿಕ್ಕಿನಲ್ಲಿ ಮೋದಂಡವಾಗಿ ಚುಕ್ಕಿಯಹಾಗಿದ್ದ ಚಿಕ್ಕ ಮೋಡದ ತುಣಿಕೆಯು ನೋಡುತ್ತಿದ್ದ ಹಾಗೆ ಮದಿಸಿದ ಸಾವಿರಾರು ಆನೆಗಳ ರೂಪಗಳನ್ನು ತಾಳಿ ಸಹಸ್ರ ಸೊಂಡಿಲಗಳ ಅಸ್ಸಾಲನದಿಂದ ಹೊಡಿದಹಾಗೆ, ಕಿಡಿಲ ಗರ್ಜನೆ ಮಾಡಿ ಆಕಾಶ ಮಾರ್ಗದಲ್ಲೋಡುತ್ತ ಸಹಸ್ರ ಧಾರೆಯಾಗಿ ಮಳೆಯನ್ನು ಕರೆಯಿತು. ಆ ಮೋಹಮಯವಾದ ಗೀತದ ಧ್ವನಿಯು ಉಚ್ಚರವದಿಂದ ಉಚ್ಚತರ ರವದಲ್ಲಿಯ ಮಧುರ ನಿನಾದದಿಂದ ಮಧುರತರ