ಹತ್ತನೆಯ ಪರಿಚ್ಛೇದ 44 IYtobbbyVV IVYYYYYVuTYYYYYYYY \ YVIYYYYYYY S4\r\ \ YY , \'\'YYYYYYYSVV//yyyyy' ಧದ ಸಹಧರ್ಮಣಿಯು ಸಂಗತಿಯನ್ನೆಲ್ಲಾ ತಿಳಿದವಳಾಗಿ ನಮ್ಮಿಬ್ಬರಿಗೂ ಪ್ರತಿಕೂಲ ಆಚರಣೆಯಲ್ಲಿ ಪ್ರವೃತ್ತಿಯಾದಳು, ಅವಳ ಒಳ ಸಂಚುನಿಂದಲೂ ಅವಳ ಕೌಶಲ್ಯದಿಂದಲೂ ಯವನ ಕುಮಾರಿಗೆ ಪ್ರಾಣಧನವಾಗಿದ್ದ ಧನವು ಅವಳಿಂದ ಅಪಹರಿಸಲ್ಪಟ್ಟು ದೂರದ ಲೆಲ್ಲೋ ಅಜ್ಞಾತವಾಸಕ್ಕೆ ಕಳುಹಿಸಲ್ಪಟ್ಟನು. ಬಳಿಕ ಈ ಅಭಾಗಿನಿಯು ಬಿರಾದ ರಾಜವಂಶಕ್ಕೆ ಮದುವೆಯಾದ ವಿದ್ಯಮಾನಗಳನೆಲ್ಲಾ ನೀನೇಬಲ್ಲೆ. ಸ್ವಲ್ಪ ಕಾಲದ ಬಳಿಕ ಪಾಪಿಷ್ಠೆಯಾದ ನಿನ್ನ ತಂಗಿಯ ಗಂಡನು ಪ್ರಾಣತ್ಯಾಗ-” | ಮಾತು ಪೂರೈಸುವುದರೊಳಗೆ, ಚಾಂದಸುಲತಾನೆಯು ಎದ್ದು ನಿಂತು ರೋಷ ದಿಂದ ಕಂಪಿತ ಸ್ವರವುಳ್ಳವಳಾಗಿ, 1 ಸುಮ್ಮನಾಗು, ಪಾಪೀಯಸಿ ! ನಿನ್ನ ಪಾಪಿಷ್ಟವಾದ ಬಾಯಿಯಿಂದ ಪಾಪಕರವಾದ ಆ ವೃತ್ತಾಂತವನ್ನು ಎತ್ತಿ ಹೇಳಬೇಡ” ಎಂದಳು. ಉನ್ಮಾದಿನಿಯು ಹೇಳತೊಡಗಿದಳು : ಜನರು ಹೇಳಿಕೊಳ್ಳುವುದನ್ನು ನೀನು ಹೇಳಿ ಅದನ್ನು ನಿಜವೆಂದು ನಂಬಿರುವ ಹಾಗೆ ಕಾಣುತ್ತದೆ. ಅದು ತಪ್ಪು, ಜನರು ಆಡಿಕೊಳ್ಳವುದು ಸುಳ್ಳೆಂದು ನಾನು ಬಲ್ಲೆನು, ಅವರು ಹೇಳಿಕೊಳ್ಳುವುದರಲ್ಲಿ, ನಾನೇ ನನ್ನ ಸ್ವಾಮಿಯನ್ನು ವಿಷವನ್ನು ಕೊಟ್ಟು ಕೊಂದು ಹೊರಟು ಹೋದನೆಂದು ಹೇಳಿಕೊಳ್ಳುತ್ತಾರೆ ! ಅದು ಸಂಪೂರ್ಣವಾಗಿ ಸುಳ್ಳು ! ನನ್ನ ದೋಷದಿಂದಲೇ, ನನ್ನ ಘೋರ ಪಾಪದಿಂದಲೇ, ನನ್ನ ಸ್ವಾಮಿಗೆ ಮರಣವುಂಟಾಗಿರುವುದೇನೋ ನಿಜ, ಆದರೆ ನನ್ನ ಕೈಯಿಂದ ಆತನ ಪ್ರಾಣವು ಹೋಗಲಿಲ್ಲ ಯಾವ ದಿನ ನನ್ನ ಪ್ರಾಣಕಾಂತನು ನನ್ನಿಂದ ಅಪಹರಿಸಲ್ಪಟ್ಟು ಅಜ್ಞಾತವಾಸಕ್ಕೆ ಕಳುಹಿಸಲ್ಪಟ್ಟನೋ ಅದು ಮೊದಲಿಟ್ಟ ೦ಡು ಪ್ರಚಂಡವಾದ ಬೆಂಕಿಯಿಂದ ಈ ಹೃದಯವು ಸುಡುತ್ತಿದೆ. ಪ್ರಾಣದೊಳಗಣ ಯಾತನೆ ಯನ್ನು ಪ್ರಾಣದೊಳಗೆ ಮರೆಮಾಚಿಟ್ಟು ಕೊಂಡೆನು. ಬಾಯಿಬಿಟ್ಟು ಯಾರಿಗೂ ಹೇಳಿಲ್ಲ, ರಾತ್ರಿಹಗಲು ವ್ಯಸನಾಕ್ರಾಂತೆಯಾಗಿ ಕಾಲಯಾಪನೆ ಮಾಡುತ್ತಿದ್ದುದನ್ನು ನೋಡಿ ನನ್ನ ನೂತನ ಸ್ವಾಮಿಯು ಅದಕ್ಕೆ ಕಾರಣವನ್ನು ಆಗಿಂದಾಗ ಕೇಳುತ್ತಿದ್ದನು. ಅವನಿಗೆ ಉತ್ತರವನ್ನು ಹೇಳಲು ನನಗೇನೂ ತೋಚದೆ ಹೋಯಿತು, ರೂಪ ಮೋಹದಿಂದ ಮುಗ್ಧನಾದ ಸ್ವಾಮಿಯು ಸಮಾಧಾನೋಕ್ತಿಗಳಿಂದಲೂ ಸವಿ ನುಡಿಗಳಿಂದಲೂ ಬಹಳ ವಾಗಿ ಬೇಡಿಕೊಂಡನಾದಕಾರಣ ಆದ್ಯಂತವಾಗಿ ಎಲ್ಲವನ್ನೂ ವಿವರಿಸಿ ಹೇಳಿದೆನು. ಅವನು ಮೌನವಾಗಿ ಎಲ್ಲವನ್ನೂ ಕೇಳಿದನು, ಆದಿನ ರಾತ್ರಿಯೇ ಆತನು ನನಗೆ ತಿಳಿ ಯದ ಹಾಗೆ ವಿಷಪಾನದಿಂದ ಪ್ರಾಣತ್ಯಾಗಮಾಡಿದನು. ಹೃದಯದಲ್ಲಣ ಬೆಂಕಿಯು ಇಪ್ಪಾಲು ಹೆಚ್ಚಿತು, ಅಸಂಖ್ಯ ಮಣಿಮಾಣಿಕ್ಯಗಳನ್ನೂ ಅಮೂಲ್ಯ ರತ್ನ ರಾಜೆಯನ್ನೂ
ಪುಟ:ಅಮೃತಪುಲಿನ.djvu/೫೩
ಗೋಚರ