ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮೃತಪುಲಿನ AnishAAAAA\r\n\VIAAPAthrysarth '೬v$321//*/1/1•#11 1//} #\r\r\r\n\n\ \ Y\'\'\1, \\\\YYYYL ! ಸಂಗ್ರಹಿಸಿಕೊಂಡು ನೂರುಮಂದಿ ಯುವತಿಯರನ್ನು ಸಂಗಡ ಕರೆದುಕೊಂಡು, ಒಂದೊಂದು ವೇಳೆ ಕುದುರೆಯಮೇಲೂ ಒಂದೊಂದುವೇಳೆ ಪಾದಚಾರಿಯಾಗಿಯ ದೇಶದೇಶ ತಿರುಗುವುದಕ್ಕೆ ಪ್ರಾರಂಭಿಸಿದೆನು, ಸಿಂಧು ತೀರದಲ್ಲಿಯೂ ಅರಾವಳಿ ಪರ್ವ ತಗಳಲ್ಲಿಯೂ ಬಿಕಿನೀರದ ಮರುಭೂಮಿಯಲ್ಲಿಯೂ ಹುಡುಕುತ್ತ ನೋಡಿಕೊಂಡು ಹೋದೆನು, ವೇಷವನ್ನು ಮರೆಮಾಡಿಕೊಂಡು ಮಿವಾರದ ರಾಜಧಾನಿಗೆ ಹೋದೆನು, ಅಲ್ಲಿ ಗ್ರಾಲಿಯರದ ರಾಜನು ಯವನರ ಯುದ್ಧದಲ್ಲಿ ಮೃತಪಟ್ಟನೆಂದೂ ಅವನ ಪಾಪಿಯಾದ ಹೆಂಡತಿಯ ಅವನೊಂದಿಗೆ ಅನುಮೃತೆಯಾದಳೆಂದೂ ಕೇಳಿದೆನು. ಆ ರಾಕ್ಷಸಿಯಮೇಲೆ ಮುಖ್ಯಿ ತೀರಿಸಿಕೊಳ್ಳಬೇಕೆಂದಿದ್ದೆನು, ಆ ಆಶೆಯ ನಿರ್ಮ ಲವಾಗಿ ಹೋಯಿತು, ಮನಸ್ಸಿನ ಆ ವಿಕೃತಾವಸ್ಥೆಯಲ್ಲಿ ಉನ್ಮಾದಿನಿಯಾಗಿ ಸಂಗೀತ ವನ್ನೂ ಚಿತ್ರವಿದ್ಯೆಯನ್ನೂ ಅಭ್ಯಾಸಮಾಡಿದೆನು, ಮನುಷ್ಯನು ಪರರ ಮನದ ವೇದನೆ ಯನ್ನು ತಿಳಿಯಲಾರನು. ಆದರೆ ಪ್ರೇಮಮಯಿಯಾದ ಪ್ರಕೃತಿಯ ಹೃದಯವು ಪರ ಕ್ಷೇಶದಿಂದ ಕರಗುವುದು. ಆದುದರಿಂದ ನಿರ್ಜನ ಕಾನನದಲ್ಲಿಯೂ ಪ್ರಾಣಶೂನ್ಯ ವಾದ ಗಿರಿಗುಹೆಗಳಲ್ಲಿಯೂ ಅನಂತ ಪ್ರವಾಹಿನಿಯಾದ ನದಿಗಳ ತೀರದಲ್ಲಿಯೂ ವೀಣೆಯ ಧ್ವನಿಯೊಂದಿಗೆ ಕೊರಳನ್ನು ಸೇರಿಸಿ ಅಕಪಟಪ್ರಾಣದಿಂದ ತಾರಸ್ವರದಲ್ಲಿ ಸಂಗೀತವನ್ನು ಹಾಡುತ್ತ ಮನದ ವ್ಯಥೆಯನೆಲ್ಲಾ ಸಂಕೋಚವಿಲ್ಲದೆ ಬಿಚ್ಚಿ ಹೇಳಿಕೊಳ್ಳುತ್ತಿದ್ದೆನು. ಸಮದುಃಖಭಾಗಿಗಳಾದ ತರುಲತಾದಿಗಳು ದೀರ್ಘನಿಶ್ವಾಸವನ್ನು ಬಿಟ್ಟು ಕರುಣಸ್ವರ ದಿಂದ ಮರ್ಮಭೇದಿಯಾದ ನನ್ನ ಕೊರಳೊಂದಿಗೆ ತಮ್ಮ ಸ್ವರವನ್ನು ಸೇರಿಸುವುವು. ಗಿರಿಗುಹೆಗಳು ವ್ಯಾಕುಲ ಹೃದಯವುಳ್ಳವುಗಳಾಗಿ ಹಾಹಾಕಾರ ಶಬ್ದದಿಂದ ನನ್ನ ಸಂಗೀತಧ್ವನಿಗೆ ಪ್ರತ್ಯುತ್ತರವನ್ನು ಕೊಡುತ್ತಿದ್ದವು. ಸೋತಸ್ವತಿಯಾದ ನದಿಗಳು ಎಗಳಿತ ಪ್ರಾಣವುಳ್ಳವುಗಳಾಗಿ ನನ್ನ ವೀಣೆಯ ಝಂಕಾರದಲ್ಲಿ ಕಲಕಲ ನಿನಾದದಿಂದ ಪ್ರೇಮಧಾರೆಯನ್ನು ಹೊಯ್ದು ಗಳಗಳ ದುಃಖಿಸುವುವು ! ಈ ದಿನ ನೀನು ನನ್ನ ಸಂಗೀ ತದ ಸಾಮಾನ್ಯ ಪರಿಚಯವನ್ನು ಹೊಂದಿರುತ್ತೆ, ಆದರೆ ನನ್ನ ಸ್ವಕಪೋಲ ಕಲ್ಪಿತವಾದ ಚಿತ್ರಪಟವನ್ನು ನೋಡಿದರೆ ಸೈವೆರಗಾಗುವೆ, ಈಗ್ಗೆ ಹದಿನಾರು ವರ್ಷಕ್ಕೆ ಹಿಂದೆ ನನ್ನ ಮಡಿಲಲ್ಲಿ ಮಲಗಿ ಸ್ತನ್ಯಪಾನವನ್ನು ಮಾಡುತ್ತಿದ್ದ ಚಿಕ್ಕ ಹುಡುಗಿಯು ಶೈಶವಾವಸ್ಥೆ ಯನ್ನು ಅತಿಕ್ರಮಿಸಿ ಈಗ ನವಯೌವನದಲ್ಲಿರುವವಳ ಅವಿಕಲವಾದ ಪ್ರತಿಮೂರ್ತಿ ಯನ್ನು ಚಿತ್ರಪಟದಲ್ಲಿ ಅಂಕಿತಮಾಡಬಲ್ಲೆನು, ಈ ಹದಿನಾರುವರ್ಷ ಕಾಲ ಪ್ರತಿದಿನವೂ ಪ್ರತಿಮುಹೂರ್ತದಲ್ಲೂ ಅವಳನ್ನು ನನ್ನ ಮನಸ್ಸಿನ ಕಣ್ಣುಗಳಿಂದ ನೋಡುತ್ತಿದ್ದೇನೆ. ಇದುವರೆಗೂ ಅವನ್ನೆಲ್ಲಾ ನಿನಗೆ ಹೊರ್ತು ಮತ್ತಾರಿಗೂ ಹೇಳಿದವಳಲ್ಲ. ಈಗ